ರಸ್ತೆ ಬದಿಯ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ !

Kannada News

07-06-2017

ಉಡುಪಿ:- ರಸ್ತೆ ಬದಿಯ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವರದಿಯಾಗಿದೆ. ನಿನ್ನೆ ಹಾಗೂ ಇಂದು ಬೆಳಿಗ್ಗೆ ಮಳೆಯಿದ್ದ ಕಾರಣ ಹಂತ ಹಂತವಾಗಿ ಮಣ್ಣು ಕುಸಿಯುತ್ತಿರುವುದು ಕಂಡು ಬಂದಿದೆ. ಉಡುಪಿ- ಕಾರವಾರ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ರಸ್ತೆ ಅಗಲೀಕರಣ ಕಾಮಗಾರಿಯಿಂದ ಕೊರೆಯಲಾದ ಗುಡ್ಡದಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರಕ್ಕೆ ಅನುವು ಮಾಡಿಕೊಡಲು ಕಾರ್ಮಿಕರು ರಸ್ತೆಯ ಮೇಲಿನ ಮಣ್ಣನ್ನು ಮೇಲೆತ್ತುವ ಕೆಲಸ  ಮಾಡುತ್ತಿದ್ದರು. ಅದರಂತೆಯೇ  ಸತತ ಎರಡು ಗಂಟೆ ಜೆ.ಸಿ.ಬಿ ಯಂತ್ರದ ಮೂಲಕ ಮಣ್ಣು ತೆರವು ಕಾರ್ಯಚರಣೆ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ