ಮೋದಿ ಅಭಿಮಾನಿಗಳು ಮೂರ್ಖರು-ಮಾಜಿಸಂಸದೆ ರಮ್ಯ 

Modi

14-03-2019

ಸದಾ ತಮ್ಮ  ವಿವಾದಾತ್ಮಕ ಹೇಳಿಕೆಗಳು ಹಾಗೂ ಟ್ವೀಟ್‍ಗಳಿಂದ ಸುದ್ದಿಯಾಗೋ ಮಾಜಿ ಸಂಸದೆ ರಮ್ಯ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ತಮ್ಮ ಟ್ವೀಟ್ ಮೂಲಕ ಕಿಡಿಕಾರಿದ್ದು, ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಮೋದಿ ಚಿತ್ರ ಬಳಸಿಕೊಂಡು ಟ್ವೀಟ್ ಮಾಡಿರುವ ರಮ್ಯ, ನಿಮಗೆ ಗೊತ್ತೆ? ಮೋದಿ ಅವರ ಬೆಂಬಲಿಗರಲ್ಲಿ ಮೂರು ಭಾಗ ಮಾಡಿದರೆ ಎರಡು ಶೇಕಡಾದಷ್ಟು ಬೆಂಬಲಿಗರು ಮೂರ್ಖರು ಎಂಬರ್ಥದಲ್ಲಿ ಮೀಮ್ ಪ್ರಕಟಿಸಿದ್ದಾರೆ.  ಜೊತೆಗೆ ನನ್ನ ಫೇವರಿಟ್ ಎಷ್ಟು ಮುದ್ದಾಗಿದ್ದಾರಲ್ಲವೇ? ಎಂದು ವ್ಯಂಗ್ಯವಾಗಿ ಕೂಡ ಪ್ರಶ್ನಿಸಿದ್ದಾರೆ. 

ಇನ್ನು ರಮ್ಯ ಮೋದಿ ಬೆಂಬಲಿಗರನ್ನು ಮೂರ್ಖರು ಎಂದು ಟ್ವೀಟ್ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ಹಾಗೂ ಟೀಕೆ ವ್ಯಕ್ತವಾಗಿದ್ದು,  ರಮ್ಯ ಟ್ವೀಟ್‍ಗೆ ಅಷ್ಟೇ ಖಾರವಾಗಿ ಹಾಗೂ ವ್ಯಂಗ್ಯವಾಗಿ, ಅವಹೇಳನಕಾರಿಯಾಗಿ ಟ್ವೀಟ್ ಮಾಡುವ ಮೂಲಕ ಮೋದಿ ಅಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ರಮ್ಯ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೂ ಗುರಿಯಾಗಿದೆ. 

ಮತ ಚಲಾಯಿಸುವಂತ ಪ್ರಜಾಪ್ರಭುತ್ವದ ಬೇಸಿಕ್ ಕೆಲಸಗಳನ್ನು ಮಾಡದ ರಮ್ಯ, ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿರುವುದಕ್ಕೆ ಜನರು ರಮ್ಯರನ್ನು ಸಖತ್ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆ ನೋಡಿದರೆ ರಮ್ಯ ಇದೆ ಮೊದಲ ಬಾರಿಗೆ ಮೋದಿ ಟೀಕಿಸುತ್ತಿಲ್ಲ. 

ಈ ಹಿಂದೆ ಮೋದಿ ಚಿತ್ರದ ಮೇಲೆ  ಚೋರ್ ಎಂದು ಬರೆದು ಚೋರ್ ಪ್ರಧಾನಿ ಚುಪ್ ಹೈ ಎಂದು ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ಅನಾವರಣದ ವೇಳೆಯೂ ಪ್ರತಿಮೆಯ ಕೆಳಭಾಗದಲ್ಲಿ ನಿಂತಿದ್ದ ಮೋದಿಯವರನ್ನು ಹಿಕ್ಕೆಗೆ ಹೋಲಿಸಿ  ಟೀಕಿಸುವ ಮೂಲಕ ತಾವೆ ಮೋದಿ ಅಭಿಮಾನಿಗಳ ತೀವ್ರ ಟೀಕೆಗೆ ಎದುರಿಸಿದ್ದರು. 
ಇನ್ನು ಈ ಟ್ವೀಟ್‍ಗೂ ಮೋದಿ ಅಭಿಮಾನಿಗಳು ನಾನಾ ರೀತಿಯಲ್ಲಿ ಉತ್ತರ ನೀಡಿದ್ದು, ವ್ಯಕ್ತಿಯೊಬ್ಬ ರಮ್ಯರನ್ನು, ರಾಹುಲ್ ಗಾಂಧಿ ತಾವು ಮೋದಿಯವರನ್ನು ಅನುಸರಿಸುತ್ತಿರುವುದಾಗಿ ಹೇಳಿದ್ದಾರೆ. ಹಾಗಿದ್ದರೇ ನಿಮ್ಮ ಪ್ರಕಾರ ರಾಹುಲ್ ಗಾಂಧಿ ಕೂಡ ಮೂರ್ಖರೆ ಎಂದು ಪ್ರಶ್ನಿಸಿದ್ದಾರೆ. 
ಆದರೆ  ಮೋದಿ ವಿರುದ್ಧ ಟ್ವೀಟ್ ಮಾಡಿರುವ ರಮ್ಯ, ಮೋದಿ ಅಭಿಮಾನಿಗಳು ರೀ ಟ್ವೀಟ್‍ಗಾಗಲಿ, ಟೀಕೆಗಾಗಲಿ ಉತ್ತರ ನೀಡಿಲ್ಲ. ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ವೇಳೆ ಮಂಡ್ಯಕ್ಕೆ ಬಂದು ಮತದಾನ ಮಾಡುವುದನ್ನೇ ಮರೆತಿದ್ದ ರಮ್ಯ, ದೆಹಲಿಯಲ್ಲಿ ಕೂತು ಮತ್ತೆ ತಮ್ಮ ಸಾಮಾಜಿಕ ಜಾಲತಾಣದ ರಾಜಕೀಯ ಆರಂಭಿಸಿದಂತಿದೆ.


ಸಂಬಂಧಿತ ಟ್ಯಾಗ್ಗಳು

#Ramya #Twiett #Narendra Modi #Foolish


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ