ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಸಲ್ಮಾನ್ -ಶಾರೂಕ್ 

 Salman-Sharukh will act in a single film

14-03-2019

ಬಾಲಿವುಡ್‍ನಲ್ಲಿ   ಸಂಜಯ್ ಲೀಲಾ ಭನ್ಸಾಲಿಯವರ ಚಿತ್ರಗಳಿಗೆ  ವಿಶೇಷವಾದ ಆಕರ್ಷಣೆ,ಮನ್ನಣೆ ಹಾಗೂ ಸೊಗಸಿದೆ. ಪ್ರೇಕ್ಷಕರು ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳಿಗಾಗಿ ಕಾದು ನಿಲ್ಲುತ್ತಾರೆ. ನಟ-ನಟಿಯರು ಅಷ್ಟೇ ಸಂಜಯ್ ಲೀಲಾ ಬನ್ಸಾಲಿಯವರ ಚಿತ್ರದಲ್ಲಿ ಒಂದು ಅವಕಾಶ ಗಿಟ್ಟಿಸಿಕೊಳ್ಳಲು ಪರದಾಡುತ್ತಾರೆ. ಅವಕಾಶ ಸಿಕ್ಕಿದವರಂತೂ ಗೆದ್ದೆಬಿಟ್ಟೇವು ಎಂಬಂತ ಬೀಗುತ್ತಾರೆ. ಇಂತಿಪ್ಪ ಸಂಜಯ್ ಲೀಲಾ ಬನ್ಸಾಲಿ ಇದೀಗ,  ಇಬ್ಬರು ಬಾಲಿವುಡ್ ಕಿಂಗ್‍ಗಳನ್ನು ಒಂದೇ ಚಿತ್ರದಲ್ಲಿ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. 
 ಐವತ್ತರ ದಶಕದ ಕ್ಲಾಸಿಕ್ ಸಿನಿಮಾ ಬೈಜು ಬಾವ್ರಾ ಮರುನಿರ್ಮಾಣಕ್ಕೆ  ಸಂಜಯ್ ಲೀಲಾ ಬನ್ಸಾಲಿ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಕಿಂಗ್‍ಖಾನ್ ಶಾರುಕ್ ಹಾಗೂ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ತರಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಈಗಾಗಲೆ ಬನ್ಸಾಲಿಯವರು ಮೂರು ಟೈಟಲ್ ರಿಜಿಸ್ಟರ್ ಮಾಡಿದ್ದಾರೆ. 

ತಮ್ಮ ಬರ್ತಡೆಯಂದು ಈ ಚಿತ್ರ ಲಾಂಚ್ ಮಾಡಲು ಬನ್ಸಾಲಿ ನಿರ್ಧರಿಸಿದ್ದಾರೆ.  ಮೊದಲು ತಮ್ಮ ಚಿತ್ರಕ್ಕೆ ಸಲ್ಮಾನ್ ಖಾನ್ ಆಯ್ಕೆಮಾಡಿಕೊಂಡಿದ್ದ ಸಂಜಯ್ ಕೊನೆಗೆ ಇಬ್ಬರೂ ಹಿರೋಗಳನ್ನು ಒಂದೆ ಚಿತ್ರದಲ್ಲಿ ತರಲು ಮುಂದಾಗಿದ್ದಾರೆ.
 
1952 ರಲ್ಲಿ ತೆರೆ ಕಂಡಿದ್ದ ಬೈಜು ಬಾವ್ರಾ ಆ ಕಾಲದ ಸೂಪರ್ ಹಿಟ್ ಚಿತ್ರವಾಗಿದ್ದು, ಚಿತ್ರದ ಸಂಗೀತ ಹಾಗೂ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಅಲ್ಲದೇ ಚಿತ್ರವೂ ಆ ಕಾಲದಲ್ಲಿಯೇ 100 ವಾರಗಳ ಕಾಲ ಪ್ರದರ್ಶನ ಕಂಡಿತ್ತು. ಭರತ್ ಭೂಷಣ ಹಾಗೂ ಮೀನಾಕುಮಾರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 


ಸಂಬಂಧಿತ ಟ್ಯಾಗ್ಗಳು

#Baiju Bawra Sharukh-Salman #1952 Moive #Sanjaylila Bansali


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ