ಕೆಜಿಎಫ್ 2 ಕ್ಕೆ ಮುಹೂರ್ತ- 2020 ರಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ 

 Muhurtha to KGF 2 - The 2020

14-03-2019

ದೇಶದಾದ್ಯಂತ ತೆರೆ ಕಂಡ ಕೆಜಿಎಫ್ ಚಿತ್ರದ ಹವಾ ಮರೆಯಾಗುವ ಮುನ್ನವೇ ಬಹುನೀರಿಕ್ಷಿತ ಕೆಜಿಎಫ್ -2 ಚಿತ್ರದ ಮುಹೂರ್ತ ನಡೆದಿದ್ದು, ಚಿತ್ರ ಸೆಟ್ಟೇರಿದೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನಡೆದಿದ್ದು,  ಏಪ್ರಿಲ್‍ನಿಂದ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಚಿತ್ರೀಕರಣ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿರೋದರಿಂದ ಚಿತ್ರ 2020 ಅಂತ್ಯಕ್ಕೆ ತೆರೆಕಾಣುವ ಸಾಧ್ಯತೆ ಇದೆ. 

ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತದಲ್ಲಿ  ಮೊದಲ ದೃಶ್ಯಕ್ಕೆ ಪ್ರಶಾಂತ್ ನೀಲ್ ತಾಯಿ  ಶ್ರೀಭಾರತಿ ಕ್ಲಾಪ್ ಮಾಡಿದ್ದಾರೆ.  ಈ ಸಂದರ್ಭದಲ್ಲಿ ನಾಯಕ ಯಶ್, ಪ್ರಶಾಂತ್ ನೀಲ್, ನಾಯಕಿ ನಟಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಂಗದೂರು,ಸಂಗೀತ ನಿರ್ದೇಶಕ ರವಿ ಬಸ್ರೂರ್,  ಛಾಯಾಗ್ರಾಹಕ ಕೆ.ಭುವನ್,  ಕಲಾ ನಿರ್ದೇಶಕ  ಶಿವಕುಮಾರ್  ಮತ್ತು ಚಿತ್ರತಂಡ ಪಾಲ್ಗೊಂಡಿತ್ತು. 
ಇನ್ನು ಯಶ್ ಸಿನಿ ಬದುಕಿನ ಬಹು ಯಶಸ್ವಿ ಚಿತ್ರವಾಗಿರುವ  ಕೆಜಿಎಫ್ ಯಶ್‍ಗೆ ಸ್ಯಾಂಡಲವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲೇ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಹೀಗಾಗಿ ಕೆಜಿಎಫ್-2 ಯಶ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಯಶ್ ಕೆಜಿಎಫ್ 2 ಚಿತ್ರೀಕರಣ ಮುಗಿಯುವರೆಗೂ ಯಾವುದೇ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳದಿರಲು ನಿರ್ಧರಿಸಿದ್ದಾರೆ. 
ಇನ್ನೊಂದೆಡೆ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್‍ಗೆ ಭಾರಿ ಬೇಡಿಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಪ್ರಶಾಂತ್ ನೀಲ್, ಟಾಲಿವುಡ್ ನಟರ  ಬಿಗ್ ಬಜೆಟ್ ಸಿನಿಮಾವನ್ನು ನಿರ್ದೇಶಿಸಲು ಈಗಾಗಲೇ ಬುಕ್ ಆಗಿದ್ದಾರಂತೆ. ಇದು ಅಂದಾಜು 500 ಕೋಟಿ  ಬಜೆಟ್‍ನ ಚಿತ್ರವಾಗಿದ್ದು,  ಬಾಹುಬಲಿ ಹಾಗೂ ಮಗಧೀರ್  ಚಿತ್ರಗಳನ್ನು ಮೀರಿಸಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಕನ್ನಡದಲ್ಲಿ ಶ್ರೀಮುರುಳಿ ನಟನೆಯ ಹೊಸ ಚಿತ್ರಕ್ಕೂ  ಪ್ರಶಾಂತ್ ನೀಲ್ ನಿರ್ದೇಶನವಿರಲಿದೆ.


ಸಂಬಂಧಿತ ಟ್ಯಾಗ್ಗಳು

#Sandalwood #Muhurtha #KGF-2 #2020


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ