ಮದುವೆ ನಂತರ ರಣವೀರ್ ಬದುಕು ಹೇಗೆಲ್ಲ ಬದಲಾಗಿದೆ ಗೊತ್ತಾ? 

Do you know How Ranveer

14-03-2019

ಬಾಲಿವುಡ್ ನ ಮೋಸ್ಟ್ ರೋಮಾಂಟ್ಯಿಕ್ ಕಪಲ್ಸ್ ಅಂತನೇ ಕರೆಸಿಕೊಳ್ಳೋ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆ ಬಳಿಕ ಒಂದಿಲ್ಲೊಂದು ಹೊಸ ಸುದ್ದಿ ಕೊಡ್ತಾನೆ ಇದ್ದಾರೆ. ಇದೀಗ ರಣವೀರ್ ಸಿಂಗ್ ಎಲ್ಲ ಪತಿಯಂತೆ ಪತ್ನಿಯನ್ನು ಮನಸೋ ಇಚ್ಛೆ ಹೊಗಳಿದ್ದು, ಪತ್ನಿ ದೀಪಿಕಾರಿಂದ ಶಿಸ್ತು ಕಲಿತೆ ಎನ್ನುವ ಮೂಲಕ ಬಾಲಿವುಡ್ ಮಂದಿಗೆ ಅಚ್ಚರಿ ಮೂಡಿಸಿದ್ದಾರೆ. 

ದೀಪಿಕಾ ಪಡುಕೋಣೆ ಮೂಲತಃ ಕ್ರೀಡಾಪಟುವಾಗಿದ್ದೋರು ಹೀಗಾಗಿ ತಮ್ಮ ಜೀವನದಲ್ಲಿ ಶಿಸ್ತು, ಟೈಂಸೆನ್ಸ್ ಎಲ್ಲವನ್ನು ಕೊಂಚ ಜಾಸ್ತಿಯೇ ಮೆಂಟೇನ್ ಮಾಡ್ತಾರೆ ಅನ್ನೋದು ದೀಪಿಕಾ ಪಡುಕೋಣೆ ಫ್ಯಾನ್ಸ್ ಜೊತೆ ಬಾಲಿವುಡ್ ಮಂದಿಗೂ ಗೊತ್ತು. ಈಗ ಅದೇ ಶಿಸ್ತನ್ನು ದೀಪಿಕಾ ತಮ್ಮ ಪತಿಗೂ ಕಲಿಸಿದ್ದಾರಂತೆ. ಹೌದು ಈ ವಿಚಾರವನ್ನು ಸ್ವತಃ ರಣವೀರ್ ಸಿಂಗ್ ಹೇಳಿಕೊಂಡಿದ್ದಾರೆ. 

ದೀಪಿಕಾ ನಿರ್ಭಂದದಿಂದ ನಾನು ಈಗ ಶಿಸ್ತಿನ ಮನುಷ್ಯನಾಗಿದ್ದೇನೆ. ಪತ್ನಿಯ ಪ್ರತಿಬಂಧದಿಂದ ನಾನು ಈಗ ಬೆಳಗ್ಗೆ ಸರಿಯಾದ ಸಮಯಕ್ಕೆ ಏಳುತ್ತೇನೆ. ಸಮಯಕ್ಕೆ ಸರಿಯಾಗಿ ಊಟ ಮಾಡುತ್ತೇನೆ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗುತ್ತೇನೆ, ಮನೆಗೂ ಸರಿಯಾದ ಸಮಯಕ್ಕೆ ಬರುತ್ತೇನೆ. ಮತ್ತು ಸರಿಯಾದ ಸಮಯಕ್ಕೆ ಮಲಗುತ್ತೇನೆ. ನಾನು ಸಾಕಷ್ಟು ಸುಧಾರಿಸಿದ್ದೇನೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾದ ದೀಪಿಕಾಗೆ  ಧನ್ಯವಾದ ಸಮರ್ಪಿಸುತ್ತೇನೆ ಎಂದು ರಣವೀರ್ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. 
ಅಷ್ಟೇ ಅಲ್ಲ, ಬೆಳಗ್ಗೆ ಏಳುವ ಸಮಯ, ಊಟ,ತಿಂಡಿ,ಕೆಲಸದ ವಿಚಾರಕ್ಕೆ ದೀಪಿಕಾ ವಿಧಿಸುವ ನಿರ್ಭಂದಕ್ಕೆ  ನಾನು ದೀಪಿಕಾಗೆ ಥ್ಯಾಂಕ್ಸ್ ಹೇಳುತ್ತೇನೆ ಮತ್ತು, ಇನ್ನಷ್ಟು  ಪ್ರತಿಭಂದನೆಯನ್ನು ನನ್ನ ಮೇಲೆ ಹೇರು ಎಂದು  ಕೇಳಿಕೊಳ್ಳುತ್ತೇನೆ ಎಂದು ಹಾಸ್ಯವಾಗಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ದೀಪಿಕಾ-ರಣವೀರ್ ರೋಮ್ಯಾನ್ಸ್, ಪ್ರೀತಿ ಸಂಗತಿಗಳು ಆಗಾಗ ಬಯಲಾಗುತ್ತಲೇ ಇದ್ದು, ಅಭಿಮಾನಿಗಳ ಖುಷಿಗೆ ಕಾರಣವಾಗುತ್ತಿದೆ. 


ಸಂಬಂಧಿತ ಟ್ಯಾಗ್ಗಳು

#Bollywood #Ranveer #Deepika Padukone #Life Changed


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ