9 ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ ಪೈಲ್ವಾನ್

 Pailwan is Coming to the Screen at 9 Languages ​​Simultaneously

14-03-2019

ಕನ್ನಡದ ಬಹುನೀರಿಕ್ಷಿತ ಚಿತ್ರ ಪೈಲ್ವಾನ್. ಅಭಿನಯಚಕ್ರವರ್ತಿ ಬಿರುದುಹೊತ್ತ ಕಿಚ್ಚುಸುದೀಪ್ ಅಭಿನಯದ ಈ ಚಿತ್ರ ಸಾಕಷ್ಟು ಹೊಸ ವಿಚಾರಗಳಿಂದ ತೆರೆ ಮೇಲೆ ಮೋಡಿ ಮಾಡುವ ಭರವಸೆ ಮೂಡಿದೆ. ಇದೀಗ ಈ ಚಿತ್ರದ ಕುರಿತು ಇನ್ನೊಂದು ಸಂತೋಷದ ವಿಷ್ಯ ಹೊರಬಿದ್ದಿದೆ. ಈ ಚಿತ್ರವೂ ಕೂಡ ಕೆಜಿಎಫ್ ಮಾದರಿಯಲ್ಲಿ ಬಹುಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. 
ಪೈಲ್ವಾನ್ ಬರೋಬ್ಬರಿ 9 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಹಿಂದಿ,ತೆಲುಗು,ತಮಿಳು ಹಾಗೂ ಮಲೆಯಾಳಂ ಭಾಷೆಯ ನೋಡುಗರಿಗೆ  ಸುದೀಪ ಪರಿಚಯ ಇದ್ದೇ ಇದರೊಂದಿಗೆ ಪೈಲ್ವಾನ್ ಮೂಲಕ ಈಗ ಸುದೀಪ್,  ಬೆಂಗಾಲಿ,ಪಂಜಾಬಿ,ಭೋಜ್ಪುರಿ,ಮರಾಠಿ ಭಾಷೆಯಲ್ಲೂ ಮೋಡಿ ಮಾಡಲು ಹೊರಟಿದ್ದಾರೆ. 

ಪೈಲ್ವಾನ್ ಚಿತ್ರ ಉತ್ತರ ಭಾರತದಲ್ಲೂ ರಿಲೀಸ್ ಆಗಲಿದ್ದು, ಕನ್ನಡ ಚಿತ್ರರಂಗದ ಹೊಸ ಸಾಧನೆಯಾಗಲಿದೆ. ಎಲ್ಲ ಭಾಷೆಯ ಹಾಗೂ ಎಲ್ಲ ಪ್ರದೇಶದ ಜನರೂ ನೋಡಲು ಇಚ್ಛಿಸುವಂತ ಚಿತ್ರಕಥೆ ಪೈಲ್ವಾನ್ ಚಿತ್ರದಲ್ಲಿದೆ. ಹೀಗಾಗಿ  ಎಲ್ಲ ಸಿನಿ ಪ್ರಿಯರಿಗೂ ಇಂತಹದೊಂದು ಸುಂದರ ಕತೆಯ ಸವಿ ಉಣಬಡಿಸಲು 9 ಭಾಷೆಯಲ್ಲೂ ಚಿತ್ರ ಬಿಡುಗಡೆಗೆ ಮುಂದಾಗಿದ್ದೇವೆ ಅಂತಿದ್ದಾರೆ ನಿರ್ದೇಶಕ ಕೃಷ್ಣ. 
ಭಾರಿ ಬಜೆಟ್‍ನ ಈ ಚಿತ್ರದಲ್ಲಿ ಮೊದಲ ಬಾರಿಗೆ ಸುದೀಪ್ ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟ್ರೇಲರ್ ಕೂಡ ಈಗಾಗಲೇ ಮೋಡಿ ಮಾಡಿದೆ. ಈ ಚಿತ್ರಕ್ಕಾಗಿ ಸುದೀಪ್ ತಮ್ಮ ದೇಹವನ್ನು ಮತ್ತಷ್ಟು ಹುರಿಗೊಳಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಹಲವು ಪ್ರಖ್ಯಾತ ಕಲಾವಿದರು ಈ ಚಿತ್ರದಲ್ಲಿ ಸುದೀಪ್ ಜೊತೆ ನಟಿಸಿದ್ದು,   ಆಕಾಂಕ್ಷಾ ಸಿಂಗ್ ಸುದೀಪ್‍ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಈ ವರ್ಷ ಚಿತ್ರಗಳು ಕೆಜಿಎಫ್ ಮಾದರಿಯಲ್ಲೇ ಬಿಡುಗಡೆ ಕಾಣುತ್ತಿದ್ದು, ಸಿನಿಪ್ರಿಯರನ್ನ ಸ್ಯಾಂಡಲವುಡ್‍ನತ್ತ ಸೆಳೆಯುವಲ್ಲಿ ಯಶಸ್ವಿಯಾಗುವ ಮುನ್ಸೂಚನೆ ನೀಡಿದೆ. 


ಸಂಬಂಧಿತ ಟ್ಯಾಗ್ಗಳು

#Sandalwood # 9 Languages #Pailwan #Simultaneously


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ