ಮಾರ್ಚ್ 16 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮಪಟ್ಟಿ ರಿಲೀಸ್ 

 The Final List of Congress candidates is March 16

14-03-2019

ಬರುವ ಶನಿವಾರ (ಮಾ.16)ರಂದು ರಾಜ್ಯದ ಲೋಕಸಭಾ ಅಭ್ಯರ್ಥಿಗಳ ಅಂತಿಮಪಟ್ಟಿ ಬಿಡುಗಡೆಯಾಗಲಿದ್ದು ಹಾಲಿ ಸಂಸದರಿಗೆ ಟಿಕೆಟ್ ಖಚಿತ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಹೇಳಿದರು.
ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಸ್ಕ್ರೀನಿಂಗ್? ಕಮಿಟಿ ಸಭೆ ಪೂರ್ಣಗೊಂಡಿದ್ದು, ಮೈತ್ರಿ ಧರ್ಮದಂತೆ, ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಳ್ಳಲಿದೆ.ಆದರೆ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಒಂದೇರಟು ಸೀಟು ಹೆಚ್ಚು ಕಡಿಮೆ ಆಗಬಹುದು. ಅದು ಬಿಟ್ಟರೆ ಬಿಜೆಪಿ ಸೋಲಿಸುವುದೇ ನಮ್ಮ ಗುರಿ ಎಂದು ತಿಳಿಸಿದರು.
ತುಮಕೂರು ಬೇಡಿಕೆ ಇಟ್ಡಿದ್ದಾರೆ. ಆದರೆ, ನಮಗೆ. ವೈಯಕ್ತಿಕ ಪ್ರತಿಷ್ಡೆ ಇಲ್ಲ.ಇನ್ನೂ, ಐತಿಹಾಸಿಕವಾಗಿ ಮೈಸೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ. ಹೀಗಾಗಿ, ನೋಡಿಕೊಂಡು ಸೀಟು ಹಂಚಿಕೆ ಮಾಡಲು ತಯಾರಿ ನಡೆದಿದೆ ಎಂದರು. 
ಇದೇ 18ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಲಬುರಗಿನಲ್ಲಿ ಏರ್ಪಡಿಸಿರುವ ಬೃಹತ್ ಕಾಂಗ್ರೆಸ್ ಸಮಾವೇಶಕ್ಕೆ ಬರಲಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಸಮಾವೇಶ ಏರ್ಪಡಿಸಲಾಗುವುದು ಎಂದಯ ಗುಂಡೂರಾವ್ ನುಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಸಂಬಂಧ ಕಾಂಗ್ರೆಸ್ ಮತ್ತು ಜೆಡಿಎಸ್  ಸ್ಥಳೀಯ ನಾಯಕರೊಂದಿಗೆ ಭಿನ್ನಾಭಿಪ್ರಾಯ ಇರುವುದು ಸತ್ಯ.ಆದರೆ, ಇದನ್ನು ನಾವು ಸರಿಪಡಿಸಲು ಮುಂದಾಗಿದ್ದೇವೆ.ಇನ್ನೂ ಸುಮಲತಾ ಅವರ ಮನವೊಲಿಸಲು ಕಾಂಗ್ರೆಸ್ ನಾಯಕರ ಯತ್ನಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ದಿನೇಶ್, ಸುಮಲತಾ ಹಾಗೂ ಅವರ ಪುತ್ರ ಅಭಿಶೇಕ್ ರಾಜಕೀಯ ಪ್ರವೇಶಕ್ಕೆ ನನ್ನ ಸ್ವಾಗತ ಇದೆ.ಆದರೆ, ಮಂಡ್ಯದಿಂದ ಇದೀಗ ಸ್ಪರ್ಧಿಸುವ ಕುರಿತು ಮಾತನಾಡುವುದು ಸರಿಯಲ್ಲ ಎಂದು ನುಡಿದರು.


ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ದೊರೆಯಬೇಕಾದರೆ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಬೇಕೆಂದು ಕಾಂಗ್ರೆಸ್ ಮಹಿಳಾ ನಾಯಕಿಯರು ಹೇಳಿದರು.ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಆಯೋಜಿಸಿದ್ದ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಸಚಿವೆ ಜಯಮಲಾ, ಶಾಸಕಿ ಸೌಮ್ಯಾ ರೆಡ್ಡಿ, ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಕಾಂಗ್ರೆಸ್ ನಾಯಕಿಯರಾದ ಮಾರ್ಗರೇಟ್ ಆಳ್ವಾ, ರಾಣಿ ಸತೀಶ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಮಾತನಾಡಿ, ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಲಭ್ಯವಾಗಿಲ್ಲ. ಆದರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲರೂ ಪಕ್ಷದ ಬೆಳವಣಿಗೆಗೆ ಶ್ರಮಿಸಬೇಕೆಂದು ಎಂದು ಹೇಳಿದರು.


ಮೋದಿ ಸರ್ಕಾರದ ಯಾವ ಯೋಜನೆಗಳೂ ಕೂಡ ಬಡ ಜನರ ಪರವಾಗಿಲ್ಲ ಅವರು ಹೇಳುವಂತೆ  ಕಳೆದ ಐದು ವರ್ಷಗಳಲ್ಲಿ ಅಚ್ಛೆ ದಿನಗಳು ಬಡಜನರ ಪಾಲಿಗೆ ಬಂದಿಲ್ಲ. ಬದಲಾಗಿ ಕಾಪೆರ್Çರೇಟ್ ವಲಯದ ಕೋಟ್ಯಾಧೀಶರಿಗೆ ಅಚ್ಚೆ ದಿನ ಬಂದಿದೆ. ಇಡೀ ದೇಶದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ. ಅಲ್ಲದೆ ಅವರು ಹೇಳಿದಂತೆ ನಕಲಿ ನೋಟುಗಳನ್ನು ಭಯೋತ್ಪಾದನೆಯನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ ಎಂದರು.


ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷ ಮಾತ್ರವಲ್ಲ. ಇದು ಒಂದು ಜನಾಂದೋಲನ.ಈ ಪಕ್ಷ ಜನಸಾಮಾನ್ಯರಿಂದ ಬೆಳೆದ ಪಕ್ಷವಾಗಿದ್ದು, ಕೇಡರ್ ಬೇಸ್ಡ್ ಪಕ್ಷವಲ್ಲ. ದೇಶದ ಸ್ವಾತಂತ್ರ್ಯದ ಬಳಿಕ ಸುಮಾರು ಬಹು ವರ್ಷಗಳ ಕಾಲ ದೇಶವನ್ನು ಆಳಿದ ಈ ಪಕ್ಷ ದೇಶದ ಅಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

#Loksabha 2019 #Candidates #Congress #March-16


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Alcohol Counseling Alcohol Rehab Centers Drug Rehab Centers Drug Rehab Centers Near Me Outpatient Alcohol Treatment Near Me http://aaa-rehab.com JamesBesee
  • JamesBesee
  • Construction, facilities