ಕುಖ್ಯಾತ ರೌಡಿ ಲಕ್ಷ್ಮಣ ಕೇಸ್‍ನಲ್ಲಿ ಜೆಡಿಎಸ್ ನಾಯಕಿ ಪುತ್ರಿಯ ಪಾತ್ರ?

 JDS Leader  daughter role In The Infamous rowdy Lakshman Murder case?

12-03-2019

ಕುಖ್ಯಾತ ರೌಡಿ ಲಕ್ಷ್ಮಣನನ್ನು ಕೊಚ್ಚಿ ಕೊಲೆಗೈದ ಕೃತ್ಯದಲ್ಲಿ ವಿದೇಶದಲ್ಲಿ ಎಂಎಸ್ ಸ್ನಾತ್ತಕೊತ್ತರ ಪದವಿ ಮುಗಿಸಿ ಸ್ಥಳೀಯ ಜೆಡಿಎಸ್ ನಾಯಕಿಯ ಪುತ್ರಿಯು ಪ್ರಮುಖ ಪಾತ್ರ ವಹಿಸಿರುವುದು ಸಿಸಿಬಿ ಪೆÇಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ.ರೌಡಿ ಲಕ್ಷ್ಮಣನ ಕೊಲೆಯಲ್ಲಿ ಹೆಣ್ಣಿನ ಕೈವಾಡವಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ಕೈಗೊಂಡ ಪೊಲೀಸರು  ಲಕ್ಷ್ಮಣನ ಕೊಲೆಯಲ್ಲಿ ಭಾಗಿಯಾಗಿದ್ದ ಮದ್ದೂರಿನ ಅಲೋಕ್ (24), ನಾಗರಬಾವಿಯ ದೇವರಾಜ್ ಅಲಿಯಾಸ್ ಕರಿಯ (24), ವಿಜಯನಗರದ ಹೊಸಹಳ್ಳಿಯ ವರುಣ್ ಕುಮಾರ್ (24), ಸುಂಕದಕಟ್ಟೆಯ ಮಧುಕುಮಾರ್ (26), ರಾಜರಾಜೇಶ್ವರಿ ನಗರದ ರೂಪೇಶ್ (25)ನನ್ನು ಬಂಧಿಸಿ ಮರಿಯಪ್ಪನಪಾಳ್ಯದ ವರ್ಷಿಣಿ (22)ಯನ್ನು ವಶಕ್ಕೆ ಪಡೆಯಲಾಗಿದೆ

ವರ್ಷಿಣಿ ಸೈಕಾಲಾಜಿ ಮಾಡಿ ಲಂಡನ್ ನ ಕೇಂಬ್ರಿಡ್ಜ್‍ಗೆ ಹೆಚ್ಚಿನ ಓದಿಗಾಗಿ ಕೊಲೆಯಾದ ಲಕ್ಷ್ಮಣ್‍ಹಾಗೂ ಆಕೆಯ ತಾಯಿ ಪದ್ಮಾ ಕಳಿಸಿದ್ದರು ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ತಿಳಿಸಿದ್ದಾರೆ.ವರ್ಷಿಣಿಗೆ ಬಂಧಿತ ಕೊಲೆ ಆರೋಪಿ ರೂಪೇಶ್ ಪ್ರೀಯಕರನಾಗಿದ್ದ. ರೂಪೇಶ್ ಚನ್ನಪಟ್ಟಣ ಮೂಲದವನಾಗಿದ್ದು, ಸದ್ಯ ರಾಜರಾಜೇಶ್ವರಿ ನಗರದ ನಿವಾಸಿಯಾಗಿದ್ದಾನೆ. ಲಕ್ಷ್ಮಣ್? ಹಾಗೂ ವರ್ಷಿಣಿ ತಾಯಿ ಬಹಳ ಪರಿಚಯಸ್ಥರು. ಹೀಗಾಗಿ ಒಂದು ಲಕ್ಷ ರೂಪಾಯಿ ಹಣವನ್ನು  ವರ್ಷಿಣಿಗೆ ಲಕ್ಷ್ಮu ಕೊಟ್ಟಿದ್ದ.ಆದರೆ ವರ್ಷಿಣಿ ಆ ಒಂದು ಲಕ್ಷ ಹಣವನ್ನ ರೂಪೇಶ್ ಅಕೌಂಟ್‍ಗೆ ಹಾಕಿದ್ದಳು ಈ ವಿಚಾರ ವರ್ಷಿಣಿ ತಂದೆ ತಾಯಿಗೆ ಗೊತ್ತಿತ್ತು. ಹಾಗೆ ರೂಪೇಶ್ ಜೊತೆ ತಕರಾರು ಕೂಡ ಇತ್ತು. ಈ ಹಿನ್ನೆಲೆಯಲ್ಲಿ ವರ್ಷಿಣಿಯನ್ನ ಲಂಡನ್ ಗೆ ಕಳಿಸಲಾಗಿತ್ತು ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದರು.

ಇನ್ನು ಲಕ್ಷ್ಮಣನಿಗೂ ವರ್ಷಿಣಿಯನ್ನ ಲಂಡನ್‍ಗೆ ಕಳಿಸೋಕೆ ಇಷ್ಟ ಇತ್ತು.ಹಾಗೆ ಲಕ್ಷ್ಮಣ್‍ಗೆ ವರ್ಷಿಣಿ ತಾಯಿ ರೂಪೇಶ್ ಬಗ್ಗೆ ನಿಗಾ ವಹಿಸಲು  ಹೇಳಿದ್ದರು. ಹೀಗಾಗಿ ಲಕ್ಷ್ಮಣ್ ವಾಟ್ಸ್ಯಾಪ್ ಮೂಲಕ ವರ್ಷಿಣಿಗೆ ಆಗಾಗ ಕರೆ ಮಾಡ್ತಿದ್ದ. ಒಂದು ವೇಳೆ ವರ್ಷಿಣಿ ಕರೆ ಬ್ಯುಸಿ ಬರುತ್ತಿದ್ದರೆ ಕೂಡಲೇ ರೂಪೇಶನಿಗೂ ಕರೆ ಮಾಡುತ್ತಿದ್ದ ಲಕ್ಷ್ಮಣ್. ಹೀಗೆ ಲಕ್ಷ್ಮಣ ವರ್ಷಿಣಿಯನ್ನ ಅನುಮಾನಿಸುತ್ತಿದ್ದ. ಇದಕ್ಕೆ ಪ್ರತೀಕಾರವಾಗಿ ರೂಪೇಶ್ ಲಕ್ಷ್ಮಣ್‍ನನ್ನು ಕೊಲೆ ಮಾಡಿದ್ದಾನೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತನಿಖೆಯಿಂದ ತಿಳಿಯಬೇಕಿದೆ ಎಂದು ಹೇಳಿದರು.

ಪ್ರಕರಣದಲ್ಲಿ ರೌಡಿ ಮೂಟೆ ಹರಿಶನ ಹೆಸರು ಕೇಳಿ ಬರುತ್ತಿದ್ದು ಲಕ್ಷ್ಮಣ್ ಆಸ್ತಿ ಮೂಟೆ ಹರೀಶ್ ಹೆಸರಲ್ಲಿದೆ.ಹೂಡಿಕೆ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸಾಕಷ್ಟು ವಿಷಯಗಳು ಓಡಾಡುತ್ತಿವೆ. ಗಾಳಿ ಮಾತಿಗೆ ನಾವು ತಲೆಕೆಡಿಸಿಕೊಳ್ಳಲ್ಲ. ಹಲವು ಆಯಾಮ ಮತ್ತು ಅನುಮಾನದ ಕುರಿತು ತನಿಖೆ ನಡೆಸುತ್ತೇವೆ. ಒಂದು ವೇಳೆ ಲಕ್ಷ್ಮಣನ ಆಸ್ತಿ ಮೂಟೆ ಹರೀಶನ ಹೆಸರಲ್ಲಿ ಇದ್ದರೆ ಅದನ್ನು ಸರ್ಕಾರಕ್ಕೆ ಒಪ್ಪಿಸಬೇಕಾಗುತ್ತದೆ ಎಂದರು.

ಇನ್ನು ಕಳೆದ ಶುಕ್ರವಾರ ಮರಿಯಪ್ಪನಪಾಳ್ಯದಲ್ಲಿರುವ ವರ್ಷಿಣಿ ಮನೆ ಪರಿಶೀಲನೆ ಮಾಡಲು ಸಿಸಿಬಿ ಅಧಿಕಾರಿಗಳು ಹೋಗಿದ್ದಾರೆ ತನಿಖಾಧಿಕಾರಿಗೆ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಕರೆ  ಮಾಡಿದ್ದಾರೆಂಬ ಸುದ್ದಿ ಹರಿದಾಡಿದರ ಬಗ್ಗೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್ ನಮಗೆ ಯಾರೂ ಕರೆ ಮಾಡಿಲ್ಲ. ನಮ್ಮ ಅಧಿಕಾರಿಗಳಿಗೂ ಕರೆ ಬಂದಿಲ್ಲ. ನಾವು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ನಮಗೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿ ವರ್ಷಿಣಿಯ ತಂದೆ -ತಾಯಿ ಹೆಸರು ಕೂಡ ಕೇಳಿ ಬರುತ್ತಿದ್ದು ಇದರಲ್ಲಿ ಭಾಗಿಯಾದ ಎಲ್ಲಾ ಕುಟುಂಬಗಳ ತನಿಖೆ ನಡೆಸುತ್ತೇವೆ ಸಂಪೂರ್ಣ ತನಿಖೆ ನಡೆಸಬೇಕಿದೆ. ಇದೊಂದು ಕ್ರೈಂ ಆಫ್ ಅಟ್ರ್ಯಾಕ್ಷನ್ ಅನಿಸುತ್ತೆ. ಯಾವ ಯಾವುದೋ ಆಯಾಮ ಎದುರಾಗ್ತಿದೆ. ಇದೇ ನಿಖರ ಕಾರಣ ಕೊಲೆಗೆ ಅಂತ ಸದ್ಯಕ್ಕೆ ಹೇಳಲಿಕ್ಕೆ ಆಗೋದಿಲ್ಲ. ಓರ್ವ ದೊಡ್ಡ ರೌಡಿಶೀಟರ್ ಲಕ್ಷ್ಮಣ್‍ಅಥವಾ ಇನ್ನಿತರ ಯಾವುದೇ ದೊಡ್ಡ ಮಟ್ಟದ ರೌಡಿಶೀಟರ್‍ಗೆ ಹೊಡಿಬೇಕು ಅಂದರೆ ದೊಡ್ಡ ಬ್ಯಾಕ್ ಗ್ರೌಂಡ್ ಇರಬೇಕು. ಹಾಗೆ ಸುಮ್ಮನೆ ಹೊಡಿಯಲು ಸಾಧ್ಯವಿಲ್ಲ. ಹಾಗಾಗಿ ಇದನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ವಿಚಾರದಲ್ಲಿ ಸಾಕಷ್ಟು ರೌಡಿಗಳ ಹೆಸರು ತಳಕು ಹಾಕಿಕೊಂಡಿವೆ. ಹಾಗಾಗಿ ಎಲ್ಲರನ್ನೂ ವಿಚಾರಣೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

ಮತ್ತೊಂದೆಡೆ ಕೊಲೆಯಾದ ದಿನ ಲಕ್ಷಣ್ ಆರ್ ಜಿ ಪ್ಯಾಲೇಸ್‍ನಲ್ಲಿ ರೂಂ ಬುಕ್ ಮಾಡಿದ್ದ ಎನ್ನುವ ಮಾಹಿತಿ ಇದೆ. ಯಾರ ಸಲುವಾಗಿ ಲಕ್ಷ್ಮಣ್‍ರೂಮ್  ಬುಕ್ ಮಾಡಿದ್ದ. ಯಾತಕ್ಕಾಗಿ ಅಲ್ಲಿ ಹೋಗಿದ್ದ ಈ ರೀತಿ ಸಾಕಷ್ಟು ಅನುಮಾನಗಳು ಎದ್ದಿವೆ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇನ್ನು ಬಂಧಿತ ಆರೋಪಿಗಳನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ವಿನ ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳುತ್ತೆವೆ ಎಂದಿದ್ದಾರೆ.
ರೂಪೇಶ್ ಮೂಲತಃ ಮಂಡ್ಯ-ಮದ್ದೂರಿನವಾಗಿದ್ದು,ಈ ಹಿಂದೆ 2018 ಮೇ ತಿಂಗಳಲ್ಲಿ ಮಂಡ್ಯ ಶಾಸಕರಾಗಿರುವ ಅನ್ನದಾನಿ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದನು.ಈ ಕುರಿತು ಪೆÇಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತುರೂಪೇಶ್ ರೌಡಿ ಎಂಬ ಕಾರಣಕ್ಕೆ ವರ್ಷಿಣಿ ಮನೆಯವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ವರ್ಷಿಣಿ ತಂದೆ ರೂಪೇಶ್‍ಗೆ ಎಚ್ಚರಿಕೆ  ಮಾಡುವಂತೆ ಲಕ್ಷ್ಮಣನ ಬಳಿ ಹೇಳಿದ್ದರು.ಎರಡು ಮೂರು ಬಾರಿ ಲಕ್ಷ್ಮಣ ವರ್ಷಿಣಿ ಸಹವಾಸಕ್ಕೆ ಬರದಂತೆ ರೂಪೇಶ್‍ಗೆ ಬೆದರಿಕೆ ಹಾಕಿದ್ದ ಎಂದು ಮೂಲಗಳು ತಿಳಿಸಿವೆ
ಈ ಘಟನೆ ಬಳಿಕ ಲಕ್ಷ್ಮಣ ಮತ್ತು ವರ್ಷಿಣಿ ನಡುವೆ ಸಲುಗೆ ಹೆಚ್ಚಾಗಿತ್ತು. ಇಬ್ಬರು ನಡುವೆ ಸಂಬಂಧವಿತ್ತು. ಲಕ್ಷ್ಮಣ ಕೊಟ್ಟ ಹಣವನ್ನು ವರ್ಷಿಣಿ ರೂಪೇಶ್‍ಗೆ ನೀಡಿದ್ದಳು. ತಮ್ಮ ಪ್ರೀತಿಗೆ ಅಡ್ಡವಾದ ಲಕ್ಷ್ಮಣನನ್ನು ಹತ್ಯೆ ಮಾಡಲು ಕ್ಯಾಟ್ ರಾಜ ಜೊತೆ ಸೇರಿ ರೂಪೇಶ್ ಸಂಚು ರೂಪಿಸಿದ್ದ.
ಅದಕ್ಕಾಗಿ ವರ್ಷಿಣಿ ಸಹಾಯ ಪಡೆದಿದ್ದ. ಮಾರ್ಚ್ 7ರಂದು ವರ್ಷಿಣಿ ಲಕ್ಷ್ಮಣನಿಗೆ ಕರೆ ಮಾಡಿ ಹೋಟೆಲ್‍ಗೆ ಬರುವಂತೆ ತಿಳಿಸಿದ್ದಳು. ಮನೆಯಿಂದ ಲಕ್ಷ್ಮಣ ಹೋಟೆಲ್‍ಗೆ ಹೋಗುವಾಗ ಸ್ಕಾರ್ಪಿಯೋ ವಾಹನದಲ್ಲಿ ಅವನ ಇನ್ನೋವಾ ಕಾರನ್ನು ಅಡ್ಡಗಟ್ಟಿದ ರೂಪೇಶ್, ಕ್ಯಾಟ್ ರಾಜ ಮತ್ತು ಇತರ ಆರೋಪಿಗಳು ಆತನ ಮೇಲೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ವರ್ಷಿಣಿ ಅವರ ತಾಯಿ ಪದ್ಮಾ ಹರೀಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿ ಕೊಲೆಯಲ್ಲಿ ನನ್ನ ಮಗಳ ಪಾತ್ರವಿಲ್ಲ. ರಾಜಕೀಯ ದ್ವೇಷದಿಂದ ಅವಳ ಹೆಸರು ಸೇರಿಸಲಾಗಿದೆ. ಬದುಕಿದ್ದಾಗಲೂ ಲಕ್ಷ್ಮಣ ನಮ್ಮ ಕುಟುಂಬಕ್ಕೆ ತೊಂದರೆ ಕೊಟ್ಟಿದ್ದ. ಸತ್ತ ಮೇಲೂ ತೊಂದರೆ ಕೊಡುತ್ತಿದ್ದಾನೆ' ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

#Lakshman #Bangalore #Murder Case #CCB


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ