ಸಿಸಿಬಿಯಿಂದ ರೌಡಿಶೀಟರ್ ಗೆ ಗುಂಡೇಟು 

 Gunfire from CCB to Rowdy

12-03-2019

ಹಾಡುಹಗಲೇ ಕುಖ್ಯಾತ ರೌಡಿ ಲಕ್ಷ್ಮಣನನ್ನು ಕೊಚ್ಚಿ ಕೊಲೆಗೈದ ರಾಮನಗರ ಮೂಲದ ಕುಖ್ಯಾತ ರೌಡಿ ಹೇಮಂತ್ ಕುಮಾರ್ ಅಲಿಯಾಸ್ ಹೇಮಿ ಕಾಲಿಗೆ ಗುಂಡಿಕ್ಕಿ ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.ಪೊಲೀಸರು ಗುಂಡಿಕ್ಕಿ ಬಂಧಿಸಿರುವ ರೌಡಿ ಕಿತ್ತನಹಳ್ಳಿಯ ವಿಶ್ವೇಶ್ವರ ಲೇಔಟ್‍ನ ಹೇಮಂತ್ ಕುಮಾರ್ (32) ಕುಖ್ಯಾತ ರೌಡಿ ಲಕ್ಷ್ಮಣನನ್ನು ಹಾಡುಹಗಲೇ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದಲ್ಲದೇ ಮೂರು ಕೊಲೆ ಸೇರಿ 7 ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು  ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಬಲಗಾಲಿಗೆ ಪೆÇಲೀಸರ ಗುಂಡೇಟು ತಗುಲಿ ಗಾಯಗೊಂಡಿರುವ ಹೇಮಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು ಕೊಲೆಗಳಿಂದಲೇ ಈತ ಕುಖ್ಯಾತಿ ಪಡೆದಿದ್ದನು,ರೌಡಿ ಲಕ್ಷ್ಮಣನ ಕೊಲೆ ಪ್ರಕರಣದಲ್ಲಿ ರೌಡಿ ಕ್ಯಾಟ್ ರಾಜನಿಗೆ ಗುಂಡಿಕ್ಕಿ ಬಂಧಿಸಿದ ನಂತರ ತನಿಖೆಯನ್ನು ಕೈಗೆತ್ತಿಕೊಂಡ ಸಿಸಿಬಿ ಪೆÇಲೀಸರು ಕಾರ್ಯಾಚರಣೆ ನಡೆಸಿದ್ದು, ರೌಡಿ ಲಕ್ಷ್ಮಣನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 11 ಮಂದಿಗಾಗಿ ತೀವ್ರ ಶೋಧ ನಡೆಸಿದ್ದರು.

ರೌಡಿ ಹೇಮಿಯ ಬಂಧನಕ್ಕೆ ಶೋಧ ನಡೆಸಿದ್ದ ಸಿಸಿಬಿ ಪೆÇಲೀಸ್ ಇನ್ಸ್‍ಪೆಕ್ಟರ್ ಎಂ.ಆರ್. ಹರೀಶ್ ಅವರಿದ್ದ ತಂಡ ನಾಗರಬಾವಿಯ ಹನುಮಗಿರಿಯ ದೇವಸ್ಥಾನದ ಬಳಿ ಇಂದು ಮುಂಜಾನೆ ಹೇಮಿ ಅಡಗಿರುವುದನ್ನು ಪತ್ತೆಹಚ್ಚಿದ್ದರು. ಕೂಡಲೇ ಕಾರ್ಯಾಚರಣೆ ಕೈಗೊಂಡು ಮುಂಜಾನೆ 5ರ ವೇಳೆ ಹೇಮಿಯನ್ನು ಬಂಧಿಸಲು ಹೋದಾಗ ಪೆÇಲೀಸರತ್ತ ಹಲ್ಲೆ ನಡೆಸಲು ಮುಂದಾಗಿದ್ದಾನೆ.

ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಇನ್ಸ್‍ಪೆಕ್ಟರ್ ಶರಣಾಗುವಂತೆ ಎಚ್ಚರಿಕೆ ನೀಡಿದರೂ, ಹಲ್ಲೆ ನಡೆಸಲು ಮುಂದಾಗುತ್ತಿದ್ದ ಆತನ ಮೇಲೆ ಮತ್ತೊಂದು ಗುಂಡು ಹಾರಿಸಿದ್ದು, ಬಲಗಾಲಿಗೆ ಗುಂಡು ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.ಕೂಡಲೇ ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.


ರೌಡಿ ಲಕ್ಷ್ಮಣ ಸೇರಿದಂತೆ, ಮೂರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹೇಮಿ, ಡಕಾಯಿತಿ, ಕಳವು, ಕೊಲೆಯತ್ನ ಸೇರಿದಂತೆ, 6ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಮನಗರ, ಚನ್ನಪಟ್ಟಣ ಪೆÇಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಹೇಮಿಯನ್ನು ಮತ್ತೊಬ್ಬ ರೌಡಿ ರೂಪೇಶ್, ರೌಡಿ ಲಕ್ಷ್ಮಣನ ಕೊಲೆಗೆ ಬಳಸಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ.

ಬಂಧಿತ ರೂಪೇಶ್ ನೀಡಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ರೌಡಿ ಹೇಮಿ ನಾಗರಬಾವಿಯ ಹನುಮಗಿರಿಯ ದೇವಸ್ಥಾನದ ಬಳಿ ಇರುವುದನ್ನು ಪತ್ತೆಹಚ್ಚಿ ಗುಂಡಿಕ್ಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ


ಸಂಬಂಧಿತ ಟ್ಯಾಗ್ಗಳು

#Bangalore #Shoots #Rowdy #CCB


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ