ಎಂಪಿಯಾಗೋ  ಪ್ರಜ್ವಲ್ ಕನಸಿಗೆ ಅಡ್ಡಿಯಾಗ್ತಾರಾ ಮಾಜಿ ಸಚಿವ ಎ.ಮಂಜು 

Former Minister A Manju dismisses the Mp dream of Prajwal Revanna

12-03-2019

ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದಲೂ ಪ್ರತಿಷ್ಠೆಯ ಕಣವಾಗಿರುವ ಮಂಡ್ಯದಲ್ಲಿ ಗೌಡ್ರ ಮೊಮ್ಮಗನ ಸೋಲಿಗೆ ಸುಮಲತಾ ಅಂಬರೀಶ್ ಅಡ್ಡಿಯಾಗಿ ತಲೆನೋವಾಗಿದ್ದರೇ, ಅತ್ತ ಹಾಸನದಲ್ಲೂ ಪ್ರಜ್ವಲ್ ರೇವಣ್ಣ ಗೆಲುವಿಗೆ ಮತ್ತೊಂದು ಅಡ್ಡಿ ಎದುರಾಗೋ ಲಕ್ಷಣ ದಟ್ಟವಾಗಿದೆ. ಹೌದು ಪ್ರಜ್ವಲ್ ರೇವಣ್ಣ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರೇ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಎ.ಮಂಜು ಪಟ್ಟು ಹಿಡಿದಿದ್ದಾರೆ.
 
ಕೇವಲ ಪ್ರಜ್ವಲ್ ರೇವಣ್ಣ ಎದುರು ಸ್ಪರ್ಧಿಸುವುದು ಮಾತ್ರವಲ್ಲದೇ ತಾವು ಬಹುಕಾಲದಿಂದ ನೆಚ್ಚಿಕೊಂಡು ಬಂದಿದ್ದ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರ್ಪಡೆಯಾಗಲು ಕೂಡ ಎ.ಮಂಜು ನಿರ್ಧರಿಸಿದ್ದಾರಂತೆ. ಈ ಕುರಿತು ಸ್ವತಃ ಎ.ಮಂಜು ಅವರೇ ಹಾಸನದಲ್ಲಿ ಮಾಹಿತಿ ನೀಡಿದ್ದಾರೆ. 

ದೇವೆಗೌಡರು, ರೇವಣ್ಣ ಸೇರಿದಂತೆ ಗೌಡ್ರ ಕುಟುಂಬದ ಪ್ರಬಲ ವಿರೋಧಿಯಾಗಿರುವ ಎ.ಮಂಜು ಹಲವಾರು ಬಾರಿ ರೇವಣ್ಣ ಸೇರಿದಂತೆ ದೇವೆಗೌಡರ್ ಕುಟುಂಬದ ವಿರುದ್ಧ ಭೂಕಬಳಿಕೆ ಸೇರಿದಂತೆ ಹಲವು ಆರೋಪ ಮಾಡಿದ್ದರು. ಜೆಡಿಎಸ್‍ನ ಗಟ್ಟಿನೆಲವಾಗಿದ್ದ ಹಾಸನದಲ್ಲಿ ಕಾಂಗ್ರೆಸ್‍ನ್ನು ಉಳಿಸಿ ಬೆಳೆಸಿ ಎಮ್‍ಎಲ್‍ಎಯಾಗಿ 
ಮಂತ್ರಿಯಾಗುವಲ್ಲಿಯೂ ಯಶಸ್ವಿಯಾಗಿದ್ದರು.
 
ಆದರೆ ಪ್ರಸಕ್ತ ಬಾರಿ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಆರಂಭದಿಂದಲೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಪ್ರಜ್ವಲ್ ರೇವಣ್ಣ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗುವುದು ತೀವ್ರವಾಗಿ ವಿರೋದ ವ್ಯಕ್ತಪಡಿಸಿದ್ದ ಅವರು, ಪ್ರಜ್ವಲ್‍ಗೆ ಟಿಕೇಟ್ ನೀಡಿದರೆ ನಾನು ಕೂಡ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದರು. 
ಇದೀಗ ಪ್ರಜ್ವಲ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಖಚಿತವಾಗಿರೋದರಿಂದ ಎ.ಮಂಜು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದು, ಬಿಜೆಪಿಯಿಂದ ಪ್ರಜ್ವಲ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಸಧ್ಯದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. 

ಆದರೆ ಜೆಡಿಎಸ್ ವಿರೋದಿಸುವುದಕ್ಕಾಗಿ ಬಿಜೆಪಿ ಸೇರ್ಪಡೆಯಾಗುತ್ತಿರುವ ಮಾಜಿ ಸಚಿವ ಎ.ಮಂಜುಗೆ ಬಿಜೆಪಿಗರ ವಿರೋದ ವ್ಯಕ್ತವಾಗಿದೆ. ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಸೇರಿದಂತೆ ಹಲವರು ಮಂಜು ಸೇರ್ಪಡೆ ವಿರೋಧಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Hasan #Mp Fight #A Manju #Prajwal Revanna


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ