ಕನ್ನಡಕ್ಕೆ ಬರ್ತಿದ್ದಾರೆ ಬೊಮನ್ ಇರಾನಿ

 Bommen Irani In  to Kannada Cinima

12-03-2019

ಸ್ಯಾಂಡಲವುಡ್‍ನ ನಟ-ನಟಿಯರು ಪರಭಾಷೆಯಲ್ಲಿ ನಟಿಸಿ ಸೈ ಎನ್ನಿಸಿಕೊಂಡ ಬೆನ್ನಲ್ಲೆ ಈಗ ಕನ್ನಡಕ್ಕೆ ಪರಭಾಷಾ ನಟರ ಆಗಮನ ಆರಂಭವಾಗಿದೆ. ಸುನೀಲ್ ಶೆಟ್ಟಿ, ಅರ್ಬಾಜ್ ಖಾನ್ ಬಳಿಕ ಇದೀಗ ಹೊಸ ಚಿತ್ರವೊಂದಕ್ಕಾಗಿ ಬಾಲಿವುಡ್‍ನ ಖ್ಯಾತ ನಟ ಬೊಮನ್ ಇರಾನಿ ಸ್ಯಾಂಡಲವುಡ್‍ಗೆ ಪಾದಾರ್ಪಣೆ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ಬೊಮನ್ ನಟಿಸಲಿದ್ದಾರೆ. 

ಈಗಾಗಲೆ ಯುವರತ್ನ ಚಿತ್ರತಂಡ ಬೊಮನ್ ಇರಾನಿಯವರನ್ನು ಸಂಪರ್ಕಿಸಿದ್ದು, ಪಾತ್ರ ಮಾಡಲು ಇರಾನಿ ಜೈ ಎಂದಿದ್ದಾರೆ. ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಅದಕ್ಕಾಗಿ ಬೊಮನ್ ಇರಾನಿ ಮೈಸೂರಿಗೆ ಆಗಮಿಸಲಿದ್ದಾರೆ. ಹಾಸ್ಯ ಪಾತ್ರಗಳ ಜೊತೆ ಹಲವು ಗಂಭೀರ ಪಾತ್ರಗಳಲ್ಲೂ ನಟಿಸಿರುವ ಬೊಮನ್ ಇರಾನಿಯ ಹಿಂದಿಯ ಬಹುಬೇಡಿಕೆಯ ನಟರು. 

ಇದು ಬೊಮನ್ ಇರಾನಿಯವರ ಮೊದಲ ಕನ್ನಡ ಚಿತ್ರವಾಗಿದ್ದು, ಕತೆ ಕೇಳಿ ಇಷ್ಟಪಟ್ಟು ಈ ಚಿತ್ರವನ್ನು ಇರಾನಿ ಒಪ್ಪಿಕೊಂಡಿದ್ದಾರಂತೆ. ಈ ಚಿತ್ರವನ್ನು ಆನಂದ್ ರಾಮ್ ನಿರ್ದೇಶಿಸಿದ್ದು,  ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಿಸುತ್ತಿದೆ. ನಟಸಾರ್ವಭೌಮ ಯಶಸ್ಸಿನ ಬಳಿಕ ಅಪ್ಪು ನಟಿಸುತ್ತಿರುವ ಚಿತ್ರ ಇದಾಗಿದ್ದು, ವಿಭಿನ್ನ ಕತೆಯೊಂದಿಗೆ ಈ ಚಿತ್ರ ಮೋಡಿ ಮಾಡಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು. 


ಸಂಬಂಧಿತ ಟ್ಯಾಗ್ಗಳು

#Sandalwood #Puneeth Rajkumar #Yuvrathna #Bomman Irani


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ