ಲೋಕಸಮರದ ಎಫೆಕ್ಟ್ ಸಿನಿಮಾ ಬಿಡುಗಡೆಗೂ ಬಿತ್ತು ಬ್ರೇಕ್ 

 The Election Effect is a breakthrough for cinema release

12-03-2019

ಲೋಕಸಭೆ ಮತ ಸಮರಕ್ಕೆ ಮುಹೂರ್ತ ಫಿಕ್ಸ್ ಆಗಿರೋದರಿಂದ ರಾಜಕೀಯ ಕ್ಷೇತ್ರ ರಂಗೇರಿದ್ದರೇ, ಇತ್ತ ಸ್ಯಾಂಡಲವುಡ್ ಮಾತ್ರ ನೀತಿಸಂಹಿತೆಯ ಬಿಸಿಗೆ ಕಂಗಾಲಾಗಿದೆ. ಹೌದು ನೀತಿ ಸಂಹಿತೆ ಜಾರಿಯಾಗಿರೋದರಿಂದ ಹಲವು ಸ್ಯಾಂಡಲವುಡ್ ನಿರ್ಮಾಪಕರು  ಕಂಗಾಲಾಗಿದ್ದು, ಬಿಡುಗಡೆಗೆ ಸಿದ್ಧವಾಗಿರೋ ಸಿನಿಮಾಗಳನ್ನು  ಹಾಗೆಯೇ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. 
ಪೂರ್ವ ನಿಗದಿಯಂತೆ ಉಪೇಂದ್ರ ನಟಿಸಿರುವ ಐ ಲವ್ ಯೂ, ಸುಮಲತಾ ಅಂಬರೀಶ್ ನಟಿಸಿರುವ ಡಾಟರ್ ಆಫ್ ಪಾರ್ವತಮ್ಮ ಹಾಗೂ ನಿಖಿಲ್ ಕುಮಾರಸ್ವಾಮಿ, ದರ್ಶನ ಅಭಿನಯದ  ಮುನಿರತ್ನ ಕುರುಕ್ಷೇತ್ರ, ಪ್ರಕಾಶ್ ರೈ ಅಭಿನಯದ ಹಲವು ಕನ್ನಡ ಹಾಗೂ ತಮಿಳು ಚಿತ್ರೆಗಳು ತೆರೆಗೆ ಬರಬೇಕಿತ್ತು.  ಆದರೆ ನೀತಿಸಂಹಿತೆಯ ಅನ್ವಯ ಈ ಚಿತ್ರಗಳ ರಿಲೀಸ್ ಗೆ ಬ್ರೇಕ್ ಬಿದ್ದಿರೋದಿಂದ ನಿರ್ಮಾಪಕರು, ನಿರ್ದೇಶಕರು ಕಂಗಾಲಾಗಿದ್ದಾರೆ. 
ಐ ಲವ್ ಯೂ ಚಿತ್ರದ ನಿರ್ದೇಶಕ ಚಂದ್ರು ತಮ್ಮ ಚಿತ್ರವನ್ನು ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ದೊಡ್ಡಮಟ್ಟದಲ್ಲಿ  ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರಂತೆ. ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ  ಬಿಡುಗಡೆ ಮಾಡಲು ಪ್ಲ್ಯಾನ್ ಸಿದ್ಧವಾಗಿತ್ತಂತೆ. ಆದರೆ ತೆಲುಗಿನಲ್ಲಿ ಏನು ಸಮಸ್ಯೆ ಇಲ್ಲ. ಕನ್ನಡದಲ್ಲಿ ರಿಲೀಸ್ ಮಾಡಲು ಸಮಸ್ಯೆ ಆಗಬಹುದು. ಅದಕ್ಕಾಗಿ ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ ಎನ್ನುತ್ತಿದ್ದಾರೆ. 
ಉಪೇಂದ್ರ ಅವರ ನೂತನ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಪಕ್ಷದ ನಾನಾ ಕಡೆಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಪಕ್ಷಕ್ಕೆ ಉಪೇಂದ್ರ ಅಧ್ಯಕ್ಷರಾಗಿರೋದರಿಂದ ಚಿತ್ರ ಬಿಡುಗಡೆಗೆ ಅಡ್ಡಿಯಾಗಲಿದೆ. ಇನ್ನು ಮುನಿರತ್ನ ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿರುವ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರೋದರಿಂದ ಚಿತ್ರದ ರಿಲೀಸ್ ಚುನಾವಣೆ ಬಳಿಕವೇ ನಡೆಯಲಿದೆ. 
ಇನ್ನು ಏಪ್ರಿಲ್ ಮೊದಲ ವಾರದಲ್ಲಿ ರಿಲೀಸ್ ಆಗಬೇಕಿದ್ದ ಡಾಟರ್ ಆಫ್ ಪಾರ್ವತಮ್ಮ  ಕೂಡ ಮುಂದೂಡಿಕೆಯಾಗಲಿದ್ದು, ಪ್ರಕಾಶ್ ರೈಯವರ ಚಿತ್ರಗಳು ಕೂಡ ತೆರೆಯಿಂದ ಹೊರಗೆ ಉಳಿಯಲಿದೆ. ಒಟ್ಟಿನಲ್ಲಿ ಚುನಾವಣೆ ಕಾವಿನಲ್ಲಿ ಚಿತ್ರರಂಗ ಬಾಡಿಹೋದಂತಾಗಿದೆ. ಕಣಕ್ಕಿಳಿಯುವ ಅಭ್ಯರ್ಥಿಗಳು ಹಾಗೂ ರಾಜಕೀಯದಲ್ಲಿ ಸಕ್ರಿಯ ಪಾತ್ರವಹಿಸುವವರ ಚಿತ್ರಗಳ ಪ್ರದರ್ಶನಕ್ಕೆ ಬ್ರೇಕ್ ಬೀಳಲಿದ್ದು, ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Break #Film Release #Code Of Conduct


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ