ಉಗ್ರನನ್ನು ಮಸೂದ್‍ಜೀ ಎಂದ ರಾಹುಲ್ ಗಾಂಧಿ

 Rahul Gandhi Called  the terrorist as Masoodji

12-03-2019

ಸದಾ ತಮ್ಮ ಎಡವಟ್ಟುಗಳಿಂದಲೇ ಸುದ್ದಿಯಾಗುವ ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಮತ್ತೊಮ್ಮೆ ತಮ್ಮ ಭಾಷಣದಿಂದಾಗಿ ಚರ್ಚೆಗೀಡಾಗಿದ್ದಾರೆ. ಹೌದು ರಾಹುಲ್ ಗಾಂಧಿ ಭಾಷಣದ ವೇಳೆ ಉಗ್ರ ಸಂಘಟನೆಯ ಮುಖ್ಯಸ್ಥ  ಮಸೂದ್ ಅಜರ್‍ನನ್ನು  ಮಸೂರ್ ಅಜರ್ ಜೀ ಎಂದು ಸಂಭೋದಿಸಿದ್ದು,  ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ. 
 ದೆಹಲಿಯಲ್ಲಿ ಕೆಲದಿನಗಳ ಹಿಂದೆ  ನಡೆದ ಪಕ್ಷದ ರ್ಯಾಲಿಯೊಂದರಲ್ಲಿ  ರಾಷ್ಟ್ರೀಯ ಭದ್ರತಾ ಸಲಹೆಗಾರ  ಅಜಿತ್ ಧೋವಲ್ ಅವರನ್ನು ಟೀಕಿಸುವ ಭರದಲ್ಲಿ ರಾಹುಲ್ ಗಾಂಧಿ,  ಅಜರ್ ಮಸೂದ್ ಜೀ ಎಂದು  ಸಂಭೋದಿಸಿದ್ದರು. ಈಭಾಷಣದ ತುಣುಕು ಇದೀಗ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಈ ವಿಡಿಯೋ ನೋಡಿ ರಾಹುಲ್ ಗಾಂಧಿ ಮೂರ್ಖತನ ಕಂಡು ನಗುತ್ತಿದ್ದಾರೆ. 

ತಮ್ಮ ಭಾಷಣದಲ್ಲಿ ಕಂದಹಾರ್ ವಿಮಾನ ಅಪಹರಣ ಪ್ರಸ್ತಾಪಿಸಿದ  ರಾಹುಲ್ ಗಾಂಧಿ, ಈ ಹಿಂದಿನ ಎನ್‍ಡಿಎ ಸರ್ಕಾರದ ಅವಧಿಯಲ್ಲಿ  ಅಜಿತ್ ಧೋವಲ್ ಅವರು, ಮಸೂದ್ ಅಜರ್ ಜೀ ಜೊತೆ ವಿಮಾನದಲ್ಲಿ  ಅಪಘಾನಿಸ್ತಾನದ ರಾಜಧಾನಿ  ಕಂದಹಾರ್‍ಗೆ ತೆರಳಿ ಆತನನ್ನು ಬಿಟ್ಟು ಬಂದರು  ಎಂದಿದ್ದರು. 

ರಾಹುಲ್ ಈ ಎಡವಟ್ಟಿನ ವಿಡಿಯೋವನ್ನು ಸೋಮವಾರ ಬಿಜೆಪಿ ತನ್ನ ಟ್ವಿಟರ್‍ನಲ್ಲಿ ಹಂಚಿಕೊಂಡಿದೆ. ಅಲ್ಲದೆ ಪಾಕಿಸ್ತಾನ್ ಮತ್ತು ರಾಹುಲ್ ಅವರ ಮಧ್ಯೆ  ಒಂದು ಸಾಮ್ಯತೆ ಇದೆ. ಅದೇನೆಂದರೆ ಇಬ್ಬರು ಭಯೋತ್ಪಾದಕರನ್ನು ಪ್ರೀತಿಸುತ್ತಾರೆ ಎಂದು  ಕೇಂದ್ರ ಸಚಿವೆ ಸ್ಮøತಿ ಇರಾನಿ ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ.  ಇನ್ನು ಈ ವಿಡಿಯೋವನ್ನು  ಅನೇಕ ಬಿಜೆಪಿ ನಾಯಕರು ಟೀಕಿಸಿದ್ದು, ಇದು ಕಾಂಗ್ರೆಸ್ ನಾಯಕರ ಮನಸ್ಥಿತಿ ತೋರಿಸುತ್ತಿದೆ ಎಂದಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Rahul Gandhi #Speach #Masood Ajar #Bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ