ಚುನಾವಣಾ ಅಕ್ರಮಗಳ ಮೇಲೆ "ಸಿ-ವಿಜಿಲ್' ಆ್ಯಪ್ ಹದ್ದಿನಕಣ್ಣು

 The C-Vigil App is An Eagle on Election Irregularities

11-03-2019

ಚುನಾವಣೆ ದಿನಾಂಕ ನಿಗಧಿಯಾಗಿರುವ ಬೆನ್ನಲ್ಲೇ ಯಾವುದೇ ವ್ಯಕ್ತಿ ಕಾನೂನು ಬಾಹಿರ ಚಟುವಟಿಕೆ, ಅಕ್ರಮ, ಆಮಿಷ ಒಡ್ಡುವುದು ಕಂಡು ಬಂದರೆ ಯಾವುದೇ ನಾಗರಿಕರು ವಿಶೇಷ ಅಪ್ಲಿಕೇಶನ್ ಮೂಲಕ ದೂರು ದಾಖಲಿಸುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ.

ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗವು `ಸಿ-ವಿಜಿಲ್' ಮೊಬೈಲ್ ಅಪ್ಲಿಕೇಶನ್ ಮೂಲಕ ಆಮಿಷದ ವಿಡಿಯೋ,ಫೆÇೀಟೋ ಕಳಿಸಿದರೆ ಅದನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ.ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1950 ದೇಶದ ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆಗಳಲ್ಲೂ ಸಕ್ರಿಯವಾಗಿದೆ ಅದರ ಮೂಲಕವು ದೂರು ನೀಡಬಹುದಾಗಿದೆ.

ಚುನಾವಣೆಗೆ ಬೇಕಾಗಿರುವಂತಹ ಎಲ್ಲಾ ಮಾಹಿತಿಗಳು, ಫೀಡ್ ಬ್ಯಾಕ್, ಸಲಹೆಗಳು ಮತ್ತು ದೂರುಗಳನ್ನು ಇಲ್ಲಿ ನೊಂದಾಯಿಸಬಹುದಾಗಿದೆ. ಈ ಕರೆಯು ಉಚಿತವಾಗಿರಲಿದ್ದು ದೇಶದ ಯಾವುದೇ ಭಾಗದಿಂದಲೂ ಕರೆಯನ್ನು ಮಾಡಬಹುದಾಗಿದೆ.

ಸುವಿಧ ಹೆಸರಿನಲ್ಲಿ ಏಕಗವಾಕ್ಷಿ ಅನುಮತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. 24 ಗಂಟೆಯಲ್ಲಿ ಚುನಾವಣೆಗೆ ಬೇಕಾಗಿರುವ ಎಲ್ಲಾ ರೀತಿಯ ಅನುಮತಿಗಳನ್ನು ಪಡೆಯಲು ಏಕಗವಾಕ್ಷಿ ಅನುಮತಿ ನೀಡುವ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.

ಈ ವ್ಯವಸ್ಥೆಯಲ್ಲಿ ಒಂದೇ ಕಡೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು - ಸಭೆ,ರ್ಯಾಲಿಗಳು, ವಾಹನಗಳು, ತಾತ್ಕಾಲಿಕ ಚುನಾವಣಾ ಕಚೇರಿಗಳು, ಲೌಡ್ ಸ್ಪೀಕರ್‍ಗಳಿಗೆ ಬೇಕಾಗಿರುವ ಅನುಮತಿಯನ್ನು ಇಲ್ಲಿ ಪಡೆಯಬಹುದಾಗಿದೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಇಲಾಖೆಗಳನ್ನು ಸಮನ್ವಯಗೊಳಿಸುವ ಮೂಲಕ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.ಈ ವ್ಯವಸ್ಥೆಯನ್ನು ಎಲ್ಲಾ ಸಬ್‍ಡಿವಿಸನ್ ಗಳ ರಿಟರ್ನಿಂಗ್ ಅಧಿಕಾರಿಗಳ ಮಟ್ಟದಲ್ಲಿ ರೂಪಿಸಲಾಗುವುದು. ಈ ವ್ಯವಸ್ಥೆಯಲ್ಲಿ ಒಂದೇ ಕಡೆ ಅರ್ಜಿ ಸಲ್ಲಿಸಬಹುದಾಗಿದೆ.

ವಿಶೇಷ ಚೇತನರಿಗೆ ಸಹಾಯ

ಚುನಾವಣಾಧಿಕಾರಿ/ಜಿಲ್ಲಾ ಚುಣಾವಣಾಧಿಕಾರಿಗಳಿಂದ ನೇಮಿಸಲ್ಪಟ್ಟ ಸ್ವಯಂ ಸೇವಕರು ಗುರುತಿಸಲಾದ ವಿಶೇಷ ಚೇತನರಿಗೆ ಸಹಾಯ ಮಾಡುವವುದು. ಮತಗಟ್ಟೆಗಳಲ್ಲಿ ಅವರಿಗೆ  ನಿರ್ದಿಷ್ಟ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಲ್ಲದೆ, ವಿಶೇಷ ಚೇತನ ಮತದಾರರಿಗೆ ಮತಗಟ್ಟೆಗಳನ್ನು ಪ್ರವೇಶಿಸಲು ಆದ್ಯತೆ ನೀಡಲು ನಿರ್ದೇಶಿಸಲಾಗಿದೆ. ಮತ್ತು ಮತಗಟ್ಟೆಯ ಆವರಣದ ಪ್ರವೇಶದಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಒದಗಿಸಲಾಗುವುದು ಮತ್ತು ಮಾತು ಮತ್ತು ಶ್ರವಣದೋಷ ಇರುವವರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದು ಆಯೋಗ ತಿಳಿಸಿದೆ.

ವಿಶೇಷ ಚೇತನರಿಗೆ ಬೇಕಾದ ನಿರ್ದಿಷ್ಟ ಬೇಡಿಕೆಗಳ ಕುರಿತು ಮತಗಟ್ಟೆಯ ಸಿಬ್ಬಂದಿಗೆ ತಿಳುವಳಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ಒತ್ತು ಕೊಡಲಾಗುತ್ತೆ. ಮತದಾನಕ್ಕೆ ಸಹಾಯ ಮಾಡಲಿದ್ದಾರೆ. ವಿಶೇಷ ಚೇತನ ಮತದಾನಕ್ಕೆ ಮತಗಟ್ಟೆಗಳಲ್ಲಿ ವಿಶೇಷವಾದ ಅನುಕೂಲತೆಗಳನ್ನು ಕೂಡಾ ಮಾಡಲಾಗುವುದು. ಅಲ್ಲದೆ, ವಿಶೇಷ ಚೇತನರು ಮತಗಟ್ಟೆಗಳಲ್ಲಿ ಒಳಬರಲು ಆದ್ಯತೆ ನೀಡಲಾಗುವುದು ಹಾಗೂ ಮತಗಟ್ಟೆ ಕೇಂದ್ರಗಳಲ್ಲಿ ವಿಶೇಷ ಚೇತನರು ತಮ್ಮ ವಾಹನಗಳನ್ನು ನಿಲ್ಲಿಸಲೂ ಕೂಡಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೆ ಮೂಗ ಮತ್ತು ಕಿವುಡರಿಗೆ ವಿಶೇಷ ಒತ್ತು ನೀಡಲಾಗುವುದು. ಅವರಿಗೆ ಅಗತ್ಯವಾಗಿ ಬೇಕಾಗಿರುವ ಸೂಕ್ಷ್ಮ ಸಂವೇದನೆಗಳ ಬಗ್ಗೆ ಗಮನ ಹರಿಸಲು ಮತಗಟ್ಟೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Election 2019 # C-Vigil 2019 # Election Irregularities #Application


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ