ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಹಾರ್ದಿಕ್ ಪಟೇಲ್ 

 Hardik Patel with Congress

11-03-2019

ಪಾಟೀದಾರ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ  ಹೋರಾಟಗಾರ ಹಾರ್ದಿಕ್ ಪಟೇಲ್ ಕೊನೆಗೂ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಂಗತಿಯನ್ನು ಅಧಿಕೃತಕವಾಗಿ ಪ್ರಕಟಿಸಿದ್ದಾರೆ. ಹಾರ್ದಿಕ್ ಪಟೇಲ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದು.ಈ ಬಗ್ಗೆ ಸ್ವತಃ ಹಾರ್ದಿಕ್ ಪಟೇಲ್, ಮಾತನಾಡಿದ್ದು, ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 

ಕಾಂಗ್ರೆಸ್ ಸೇರ್ಪಡೆಯ ಜೊತೆಗೆ  ಜಾಮ್ ನಗರ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ  ಇಚ್ಛೆಯನ್ನು ಹಾರ್ದಿಕ್ ಪಟೇಲ್ ವ್ಯಕ್ತಪಡಿಸಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದಿದ್ದಾರೆ. 

ಮಧ್ಯಪ್ರದೇಶ ಚುನಾವಣೆ ವೇಳೆಯಲ್ಲಿಯೂ ಹಾರ್ದಿಕ್ ಪಟೇಕ್ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಹಾರ್ದಿಕ್ ಪಕ್ಷ ಸೇರ್ಪಡೆಗಾಗಿ  ಪಾಟೀದಾರ್ ಸಮುದಾಯದ ಕನಿಷ್ಠ 12 ಜನರಿಗೆ  ಟಿಕೇಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಟಿಕೇಟ್ ನೀಡದರೆ ಮಾತ್ರ ಬೆಂಬಲಿಸುವ  ಭರವಸೆ ನೀಡಿದ್ದರು. 

ಆದರೆ ಈಗ ಹಾರ್ದಿಕ್ ಯಾವ ಬೇಡಿಕೆಗಳನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಅಹಮದಬಾದಿನಲ್ಲಿ  ಮಾಚ್12 ರಂದು ನಡೆಯಲಿರುವ  ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಾರ್ದಿಕ್ ಪಟೇಲ್  ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದೆ. 
ಅಹಮದಾಬಾದ್‍ನ ವೀರಾಮ್ ಗ್ರಾಮದ 25 ವರ್ಷದ ಹಾರ್ದಿಕ್ ಪಟೇಲ್, ಬಿಕಾಂ ಪದವಿಧರರಾಗಿದ್ದು,  ಕೌಟುಂಬಿಕವೃತ್ತಿಯಾಗಿರುವ ಜಲಉದ್ಯಮವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇದರೊಂದಿಗೆ ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಹೋರಾಟವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈ ಹಿಂದೆಯೇ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರ್ಪಡೆ ಮಾತುಕೇಳಿಬಂದಿತ್ತಾದರೂ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಯುವ ಹೋರಾಟಗಾರ ಹಾರ್ದಿಕ್ ಕಾಂಗ್ರೆಸ್ ಜೊತೆ ಜೋಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Congress #Congress #Hardik Patel #Rahul Gandhi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ