ರಾಜ್ಯದಲ್ಲಿ ಜಾರಿಯಾಗಿದೆ ನೀತಿಸಂಹಿತೆ 

Code Of Conduct In State

11-03-2019

ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ಘೋಷಿಸುವಂತಿಲ್ಲ. ಜೊತೆಗೆ ರಾಜಕಾರಣಿಗಳ ಸರ್ಕಾರಿ ಕಾರು ಬಳಕೆ ಮೇಲೂ ಕಡಿವಾಣ ಬಿದ್ದಿದ್ದು, ಸರ್ಕಾರಿ  ಲಾಂಛನಗಳು,ವಾಹನಗಳು ಹಾಗೂ ಇತರ ಸೌಲಭ್ಯಗಳನ್ನು ರಾಜಕಾರಣಿಗಳು ಚುನಾವಣಾ ಲಾಭಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. 

ಏಪ್ರಿಲ್‍ನಲ್ಲಿ ನಡೆಯಬೇಕಿದ್ದ  ಶಿಕ್ಷಕರ ನೇಮಕ ಹಾಗೂ ಎಫ್‍ಡಿಎ,ಎಸ್‍ಡಿಎ  ನೇಮಕ ಪ್ರಕ್ರಿಯೆಗಳು ಕೂಡ ಮುಂದೂಡಿಕೆಯಾಗುವ ಸಾಧ್ಯತೆ ಇದ್ದು,  ಸಿಇಟಿ ಪರೀಕ್ಷೆ ಕೂಡ ಮುಂದೂಡಿಕೆಯಾಗಲಿದೆ.  ಇನ್ನು ಲೋಕಸಭಾ ಚುನಾವಣೆಗೆ  ಸ್ಪರ್ಧಿಸುವ ಪ್ರತಿಯೊಬ್ಬ ವ್ಯಕ್ತಿಗೂ  ಈ ಬಾರಿ ಚುನಾವಣಾ ವೆಚ್ಚಕ್ಕೆ 70 ಲಕ್ಷ ನಿಗದಿಪಡಿಸಲಾಗಿದ್ದು,ರಾಜಕೀಯ ಪಕ್ಷಗಳಿಗೆ ಯಾವುದೇ ಮಿತಿ ಇಲ್ಲ. ಅಭ್ಯರ್ಥಿಗಳು ಫಲಿತಾಂಷ ಪ್ರಕಟಗೊಂಡ 30 ದಿನದೊಳಗೆ  ಖರ್ಚಿನ ವಿವರವನ್ನು ಆಯೋಗಕ್ಕೆ ಸಲ್ಲಿಸಬೇಕಿದೆ. ಇನ್ನು ರಾಜಕೀಯ  ಪಕ್ಷಗಳಿಗೆ ಚುನಾವಣೆ ನಡೆದ 75 ದಿನಗಳವರೆಗೆ ಖರ್ಚಿನ ವಿವರ ಸಲ್ಲಿಸಲು ಅವಕಾಶವಿದೆ. 

ನಿನ್ನೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನಗರ ಸೇರಿದಂತೆ ರಾಜ್ಯದ ಎಲ್ಲೆಡೆ ಸರ್ಕಾರಿ ಜಾಹೀರಾತು ಫಲಕ  ತೆರವು ಕಾರ್ಯಾಚರಣೆ ಆರಂಭವಾಗಿದೆ. ರಾಜ್ಯದಲ್ಲಿ ಒಟ್ಟು 5 ಕೋಟಿ 3 ಲಕ್ಷ 46 ಸಾವಿರದ 721 ಮತದಾರರಿದ್ದು, 58 ಸಾವಿರದ 186 ಮತಗಟ್ಟಗಳಿವೆ. ಇನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಬಾರಿ  ಪ್ರತಿಯೊಬ್ಬ ಅಭ್ಯರ್ಥಿಯೂ  ತಮ್ಮ ಅಪರಾಧ ಹಿನ್ನೆಲೆಯ ಬಗ್ಗೆ ಕಡ್ಡಾಯವಾಗಿ  ಪ್ರಮಾಣಪತ್ರ ನೀಡುವುದು  ಕಡ್ಡಾಯ. 
ಫಾರ್ಮ್ ನಂಬರ್ ಸಿ(1)ಯಲ್ಲಿ ಅಭ್ಯರ್ಥಿಯು  ತಮ್ಮ ಮೇಲೆ ಇರುವ ಎಲ್ಲ  ಕ್ರಿಮಿನಲ್ ಪ್ರಕರಣಗಳ  ಬಗ್ಗೆ ಪತ್ರಿಕೆ ಹಾಗೂ  ಟಿವಿಯಲ್ಲಿ ಪ್ರಕಟಣೆ  ನೀಡಬೇಕಾಗುತ್ತದೆ. 
ಮಾತ್ರವಲ್ಲದೇ ರಾಜಕೀಯ ಪಕ್ಷಗಳು ಕೂಡ  ತಮ್ಮ ಅಧಿಕೃತ ವೆಬ್‍ಸೈಟ್‍ನಲ್ಲಿ  ಅಭ್ಯರ್ಥಿಗಳ ಕ್ರಿಮಿನಲ್  ಹಿನ್ನೆಲೆಯನ್ನು ಪ್ರಕಟಿಸಬೇಕಾಗುತ್ತದೆ. ಇನ್ನೊಂದೆಡೆ ಎಪ್ರಿಲ್ 18 ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಇದಕ್ಕೆ ರಜೆಗಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಸಾಲು-ಸಾಲು ರಜೆಗಳಿಂದಾಗಿ ಯುವಜನತೆ ಹಾಗೂ ಉದ್ಯೋಗಿಗಳು ಪ್ರವಾಸಿತಾಣಗಳಿಗೆ ತೆರಳೋ ಸಾಧ್ಯತೆ ಇರೋದರಿಂದ ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಕೂಡ ಇದೆ. 
 


ಸಂಬಂಧಿತ ಟ್ಯಾಗ್ಗಳು

#Election 2019 #Code Of Conduct #Lokshabha #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Inpatient Alcohol Rehabilitation Centers Drug Rehab Centers Alcohol Rehab Near Me Alcohol Rehab Centers Coed Rehab Near Me http://aaa-rehab.com JamesBesee
  • JamesBesee
  • Construction, facilities