ಮತಸಮರಕ್ಕೆ ಮುಹೂರ್ತ ಫಿಕ್ಸ್, 7 ಹಂತದಲ್ಲಿ ಚುನಾವಣೆ ಮೇ 23ಕ್ಕೆ ರಿಸಲ್ಟ್

Election Date Announced May 23 Result

11-03-2019

ದೇಶದ 17 ನೇ ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಕೇಂದ್ರ ಚುನಾವಣಾ ಆಯೋಗ ಸುದ್ಧಿಗೋಷ್ಠಿ ನಡೆಸಿ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 23 ರಂದು  ಮತ ಎಣಿಕೆ ನಡೆಯಲಿದೆ. 

ಏಪ್ರಿಲ್ 11 ರಿಂದ ಮತದಾನ ಆರಂಭವಾಗಲಿದ್ದು, ದೇಶದಾದ್ಯಂತ ನಿನ್ನೆ ಸಂಜೆ 5 ಗಂಟೆಯಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಏಪ್ರಿಲ್ 18 ಹಾಗೂ 23 ರಂದು ಮತದಾನ ನಡೆಯಲಿದೆ. 

ಆಂಧ್ರಪ್ರದೇಶ್, ಅರುಣಾಚಲ ಪ್ರದೇಶ,ಸಿಕ್ಕಿಂ,ಓಡಿಶ್ಸಾ ವಿಧಾನಸಭೆಗೆ ಏಪ್ರಿಲ್ 11 ರಂದು, ಮೊದಲ ಹಂತದಲ್ಲಿ, ಎರಡನೇ ಹಂತದಲ್ಲಿ ಕರ್ನಾಟಕ,ಮಣಿಪುರ,ರಾಜಸ್ಥಾನ,ತ್ರಿಪುರದಲ್ಲಿ , ಮೂರನೇ ಹಂತದಲ್ಲಿ ಅಸ್ಸಾಂ,ಛತ್ತೀಸ್‍ಗಡ್, 4 ನೇ ಹಂತದಲ್ಲಿ  ಜಾರ್ಖಂಡ್, ಮಧ್ಯಪ್ರದೇಶ್,ಮಹಾರಾಷ್ಟ್ರ

5 ನೇ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರ್,7 ಹಂತದಲ್ಲಿ ಬಿಹಾರ, ಉತ್ತರ ಪ್ರದೇಶ್, ಪಶ್ಚಿಮಬಂಗಾಳದಲ್ಲಿ  ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಅಧಿಸೂಚನೆ ಪ್ರಕಟ ಸೇರಿದಂತೆ ವಿವಿಧ ಚುನಾವಣಾ ಪ್ರಕ್ರಿಯೆಗಳು ಮಾರ್ಚ್ 19 ರಿಂದ ಆರಂಭವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 18 ರಂದು, ಉಡುಪಿ-ಚಿಕ್ಕಮಗಳೂರು, ಹಾಸನ,ದಕ್ಷಿಣ ಕನ್ನಡ,ಚಿತ್ರದುರ್ಗ,ತುಮಕೂರು,ಮಂಡ್ಯ,ಮೈಸೂರು,ಚಾಮರಾಜನಗರ,ಬೆಂಗಳೂರು ಗ್ರಾಮಾಂತರ,ಬೆಂಗಳೂರು ಉತ್ತರ,ಬೆಂಗಳೂರು ಸೆಂಟ್ರಲ್,ಬೆಂಗಳೂರು ದಕ್ಷಿಣ,ಚಿಕ್ಕಬಳ್ಳಾಪುರ,ಕೋಲಾರ ದಲ್ಲಿ ಮತದಾನ ನಡೆಯಲಿದೆ. 

ಇನ್ನು ಏಪ್ರಿಲ್ 23 ರಂದು ಚಿಕ್ಕೋಡಿ,ಬೆಳಗಾವಿ,ಬಾಗಲಕೋಟೆ,ವಿಜಯಪುರ,ಕಲಬುರಗಿ,ರಾಯಚೂರು,ಬೀದರ್,ಕೊಪ್ಪಳ,ಬಳ್ಳಾರಿ,ಹಾವೇರಿ,ಧಾರವಾಡ,ಉತ್ತರ ಕನ್ನಡ,ದಾವಣಗೆರೆ,ಶಿವಮೊಗ್ಗದಲ್ಲಿ ಮತದಾನ ನಡೆಯಲಿದೆ. ಒಟ್ಟು ದೇಶದ 543ಲೋಕಸಭಾ ಕ್ಷೇತ್ರಗಳಿಗಾಗಿ 90ಕೋಟಿ ಮತದಾರರು 10 ಲಕ್ಷ ಮತಗಟ್ಟೆಗಳಲ್ಲಿ ಮತಚಲಾಯಿಸಲಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#India #April Voting #Election #May23 Counting


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ