75 ವರ್ಷ ದಾಟಿದವರಿಗೆ ಕಡ್ಡಾಯ ನಿವೃತ್ತಿ ವಿಚಾರ ಮಾತು ತಪ್ಪುತ್ತಾ ಬಿಜೆಪಿ ?

 BJP to quit Compulsory Retirement For 75 Years

09-03-2019

ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ರಾಷ್ಟ್ರೀಯ ಪಕ್ಷ ಬಿಜೆಪಿ ತನ್ನ ವರಸೆ ಬದಲಾಯಿಸಿಕೊಂಡಿದೆ. ಲೋಕಸಭಾ  ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಪಡೆದು ಮತ್ತೊಮ್ಮೆ ಅಧಿಕಾರ ಸ್ಥಾಪಿಸುವ ಕನಸಿನಲ್ಲಿರುವ ಬಿಜೆಪಿ ಇದಕ್ಕಾಗಿ ತನ್ನ ನಿಯಮಗಳನ್ನು ತಾನೇ ಮುರಿಯಲು ಹೊರಟಿದೆ. ಹೌದು ಬಿಜೆಪಿಯಲ್ಲಿ ಈ  ಬಾರಿ 75 ವರ್ಷ ದಾಟಿದವರಿಗೂ ಟಿಕೇಟ್ ನೀಡಲು ನಿರ್ಧರಿಸಿದೆ. 

ಸ್ವತಃ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 75 ವರ್ಷ ದಾಟಿದ ನಾಯಕರಿಗೆ ಟಿಕೇಟ್ ನೀಡಬಾರದೆಂಬ ಪ್ರಸ್ತಾವಕ್ಕೆ ವಿರೋದ ವ್ಯಕ್ತಪಡಿಸಿದ್ದಾರೆ. 2014 ರ ಚುನಾವಣೆ ವೇಳೆ ಸ್ವತಃ ಬಿಜೆಪಿ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಪ್ರಕಟಿಸಿತ್ತು. ಮುಂದಿನ ಚುನಾವಣೆ ವೇಳೆ 75 ವರ್ಷ ದಾಟಿದವರಿಗೆ ಪಕ್ಷ ಟಿಕೇಟ್ ನೀಡದೆ ನಿವೃತ್ತಿ ನೀಡಲಿದೆ ಎಂದಿತ್ತು. ಆದರೆ ಈಗ ಸ್ವತಃ ರಾಷ್ಟ್ರಾಧ್ಯಕ್ಷರೇ ಉಲ್ಟಾ ಹೊಡೆದಿದ್ದಾರೆ. 

ಈ ನಿಯಮವನ್ನು  ಅನ್ವಯಗೊಳಿಸಿದ್ರೆ ಬಿಜೆಪಿಯ ಬ್ಯಾಕ್ ಬೋನ್‍ಗಳಂತಿರುವ ಎಲ್.ಕೆ.ಅಡ್ವಾನಿ, ಮುರಳಿ ಮನೋಹರ ಜೋಷಿ, ಕಲ್ರಾಜ್ ಮಿಶ್ರಾ, ಸುಮಿತ್ರಾ ಮಹಾಜನ್, ಹುಕುಂದೇವ್ ನಾರಾಯಣ ಸಿಂಗ್‍ರಂತಹ ಅಗ್ರಗಣ್ಯರಿಗೆ ಟಿಕೇಟ್ ನೀಡುವಂತಿಲ್ಲ. ಇದು ಬಿಜೆಪಿಯ ಲೋಕಸಭಾ ಚುನಾವಣೆಯ ರಿಸಲ್ಟ್ ಮೇಲೆ ಪ್ರಭಾವ ಬೀರೋದರಲ್ಲಿ ಅನುಮಾನವೇ ಇಲ್ಲ. 

ಇನ್ನು ರಾಜ್ಯದ ಮಟ್ಟಿಗಂತೂ ಬಿಜೆಪಿಯ ಸಿಎಂ ಕ್ಯಾಂಡಿಡೇಟ್ ಎಂದೇ ಕರೆಯಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಚುನಾವಣೆಯಿಂದ ಹೊರಗೆ ಉಳಿಯಬೇಕಾಗುತ್ತದೆ. ಇದು ರಾಜ್ಯದ ಬಿಜೆಪಿ ಭವಿಷ್ಯದ ಮೇಲೆ ಗಾಡ ಪರಿಣಾಮ ಬೀರೋದು ಗ್ಯಾರಂಟಿ. ದೇಶದ ಮಟ್ಟದಲ್ಲಿ ಬಿಜೆಪಿಯ ನರೇಂದ್ರ ಮೋದಿ, ಅಮಿತ್ ಶಾ ಮೋಡಿ ಕೆಲಸ ಮಾಡಿದರೂ ರಾಜ್ಯದ ವಿಷಯ ಬಂದಾಗ ಅಲ್ಲಿನ ನಾಯಕರಿಂದಲೇ ಒಂದಷ್ಟು ಕ್ಷೇತ್ರಗಳಲ್ಲಿ ಜಯ ಸಾಧಿಸಲು ಸಾಧ್ಯವಾಗೋದು ರಾಜಕೀಯ ಸಾಮಾನ್ಯ ಲೆಕ್ಕಾಚಾರ. 


ಇದನ್ನೆಲ್ಲ ಗಮನಿಸಿ ಖುದ್ದು ಅಮಿತ್ ಶಾ ಈ ನಿಯಮವನ್ನು  ವಿರೋದಿಸಿದ್ದಾರೆ ಎನ್ನಲಾಗಿದೆ. ಆದರೆ 2014 ಚುನಾವಣೆ ವೇಳೆ ಸ್ವತಃ ನರೇಂದ್ರ ಮೋದಿಯವರೇ ಈ ನಿಯಮವನ್ನು ಪ್ರಕಟಿಸಿದ್ದರಿಂದ ಈಗ ಮತ್ತೆ ನಿಯಮ ಮುರಿದು ಸೀಟು ನೀಡೋದು ಪ್ರತಿಪಕ್ಷಗಳ ಟೀಕೆಗೆ ಈಡೆ ಮಾಡಿಕೊಟ್ಟಂತಾಗಲಿದೆ. ಈ ಬಗ್ಗೆ ನಿನ್ನೆ ಬಿಜೆಪಿ  ಸಂಸದೀಯ ಮಂಡಳಿಯ ಸಭೆ ವೇಳೆ ಬಿಸಿ ಬಿಸಿ ಚರ್ಚೆ ನಡೆದಿದೆ. 

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ,  ಪಕ್ಷದ ಅಧ್ಯಕ್ಷ ಅಮಿತ್ ಶಾ, ಅರುಣ್ ಜೆಟ್ಲಿ, ಸುಷ್ಮಾ ಸ್ವರಾಜ್ ಹಾಗೂ ಹಲವು ಹಿರಿಯ ಮುಖಂಡರು ಪಾಲ್ಗೊಂಡಿದ್ದರು. ತಡರಾತ್ರಿಯವರೆಗೂ ನಡೆದ ಈ ಸಭೆಯಲ್ಲಿ 75 ವರ್ಷ ಮೀರಿದವರಿಗೆ ಟಿಕೇಟ್ ನೀಡಬೇಕೋ ಬೇಡವೋ ಎಂಬ ವಿಚಾರದ ಬಗ್ಗೆ ತೀವ್ರ ಚರ್ಚೆ ನಡೆದಿರುವ ಸಂಗತಿ ಬಯಲಾಗಿದ್ದು, ಯಾವ ತೀರ್ಮಾನಕೈಗೊಳ್ಳಲಾಯಿತು ಎಂಬುದು ತಿಳಿದುಬರಬೇಕಿದೆ. ಒಟ್ಟಿನಲ್ಲಿ ಬಿಜೆಪಿ ಕೂಡ ಚುನಾವಣೆಗಾಗಿ  ಮಾತುತಪ್ಪಿರೋದು ಚರ್ಚೆಗಿಡಾಗಿದೆ. 
 


ಸಂಬಂಧಿತ ಟ್ಯಾಗ್ಗಳು

#BJP #75 Years #Amith Sha # Retirement


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ