ಸೋಷಿಯಲ್ ಮೀಡಿಯಾದಲ್ಲಿ ಮಂಡ್ಯ ರಾಜಕೀಯ

Mandya Politics on Social Media

08-03-2019

ಒಂದು ಕಾಲದಲ್ಲಿ ಚುನಾವಣೆ ಅಂದರೆ ಹಬ್ಬದ ವಾತಾವರಣ ಸೃಷ್ಟಿಯಾಗತ್ತಿತ್ತು. ಊರಿಗೆಲ್ಲಾ ಪ್ಲೆಕ್ಸ್, ಬಂಟಿಂಗ್ಸ್ ಕಟ್ಟಿ, ಅಭ್ಯರ್ಥಿ ಗಳು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಭಾಷಣ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಎಲ್ಲರೂ ಅಂತರ್ಜಾಲದಲ್ಲಿ ಚುನಾವಣಾ ವ್ಯೂಹ ಹಣೆಯುತ್ತಿದ್ದಾರೆ.

ಅಬ್ಬರದ ಮೈಕ್ ಸೆಟ್ಸ್, ಸದ್ದು ಮಾಡುತ್ತ ಒಡಾಡುತ್ತಿದ್ದ ಹತ್ತಾರು ಕಾರುಗಳ ದರ್ಬಾರು, ಪಕ್ಷಗಳ ಧ್ವಜ ಹಿಡಿದು ಅವರ ಹಿಂದೆ ಹೋಗುತ್ತಿದ್ದ ಹಳ್ಳಿಯ ಮಕ್ಕಳು ಹೀಗೆ ಒಂದು ಜಾತ್ರೆಯ ವಾತಾವರಣ ಇರುತ್ತಿತ್ತು.

ಆದರೆ ಕಾಲ ಬದಲಾದಂತೆ ಪ್ರಚಾರದ ಆಟೋದ ಬದಲು ವಿಡಿಯೋ ಮಾಡಿ ಮೊಬೈಲ್‍ಗೆ ಬಿಡಲಾಗುತ್ತದೆ. ಸೋಷಿಯಲ್ ಮೀಡಿಯಾ ಬಂದಾಗಿನಿಂದ ಮೈಕ್, ಆಟೋ, ಬ್ಯಾನರ್-ಬಂಟಿಗ್ಸ್ ಮೂಲೆಗುಂಪಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ ಆದರೆ ಸಾಕು, ಮತದಾರರ ಬಳಿ ಆರಾಮವಾಗಿ ತಲುಪಬಹುದು ಎಂಬ ಕಲ್ಪನೆ ದೃಢವಾಗಿದೆ.

ಅದಕ್ಕೆ ಉದಾರಹಣೆ ಎಂಬಂತೆ ಮಂಡ್ಯ ಲೋಕಸಭಾ ಚುನಾವಣೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಜೆಡಿಎಸ್ ಹಾಗೂ ಸುಮಲತಾ ಅಭಿಮಾನಿಗಳ ನಡುವೆ ಪದಗಳ ಜಟಾಪಟಿ ಶುರುವಾಗಿದೆ. ಸುಮಲತಾ ಅಭಿಮಾನಿಗಳು ಒಂದು ಪ್ರಶ್ನೆ ಕೇಳಿದರೆ, ಜೆಡಿಎಸ್ ಕಾರ್ಯಕರ್ತರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಆ ಮೂಲಕ ಚುನಾವಣಾ ಪ್ರಚಾರ ಜೋರಾಗಿಯೇ ನಡೆಯುತ್ತಿದೆ.

ಅಂತರ್ಜಾಲದಲ್ಲಿ ಸುಮಲತಾಗೆ ಜೆಡಿಎಸ್ ಕಾರ್ಯಕರ್ತರು ಪ್ರಶ್ನೆ ಮಾಡಿದರೆ, ಅದಕ್ಕೆ ವಿರುದ್ಧವಾಗಿ ಅಂಬಿ ಅಭಿಮಾನಿಗಳು ಖಾರವಾಗಿಯೇ ಪ್ರಶ್ನೆ ಹಾಕಲು ಶುರು ಮಾಡಿದ್ದಾರೆ. ಸದ್ಯ ಈ ಜಾಲತಾಣದ ವಾರ್ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಕುಟುಂಬದ ಹಿನ್ನೆಲೆಗೂ ತಲುಪಿದೆ. ದೇವೇಗೌಡರ ಕುಟುಂಬದ ಮತ್ತೊಬ್ಬ ಸೊಸೆಗೂ ಟಿಕೆಟ್ ನೀಡಿ ಅನ್ನೋ ಮಟ್ಟಿಗೆ ಅಭಿಮಾನಿಗಳು ಮಾತನಾಡುತ್ತಿದ್ದಾರೆ.

ಇನ್ನು ಲಕ್ಷ್ಮೀ ಅಶ್ವಿನ್ ಗೌಡ ಅಭಿಮಾನಿಗಳ ಗುಂಪು ಕೂಡ ಸಕ್ರಿಯವಾಗಿದ್ದು, ಜೆಡಿಎಸ್‍ಗಾಗಿ ಅಧಿಕಾರ ಬಿಟ್ಟು ಬಂದರೂ ಟಿಕೆಟ್ ಕೊಡದೆ ಮೋಸ ಮಾಡಲಾಗಿದೆ ಎಂದು ಬರೆಯಲಾಗಿದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಎರಡೂ ಕಡೆಯ ಅಭಿಮಾನಿಗಳು ನೆಟ್ ವಾರ್ ಶುರುಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Karnataka #Political #Mandya #Social Media


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ