ಮಾಲ್ಗುಡಿ ಸ್ಮಾರಕವಾಗಲಿದೆ ಅರಸಾಳು

 Arsalu Will Be a  Malgudi Memorial

08-03-2019

ಮಾಲ್ಗುಡಿ ಡೇಸ್ ಹಲವರು ಖ್ಯಾತನಾಮರಿಗೆ ಹೆಸರು ತಂದುಕೊಟ್ಟ  ಹಿಂದಿ ಧಾರಾವಾಹಿ.  ಈ ಧಾರಾವಾಹಿಗೂ ಕರ್ನಾಟಕಕ್ಕೂ ಅವಿನಾಭಾವ ನಂಟಿದೆ. ಈ ಧಾರಾವಾಹಿ ಚಿತ್ರೀಕರಣಗೊಂಡಿದ್ದೇ, ಶಿವಮೊಗ್ಗದಲ್ಲಿ. ಈ ಧಾರಾವಾಹಿಯ ನೆನಪನ್ನು ಸ್ಮರಣಿಯವಾಗಿಸುವ ನಿಟ್ಟಿನಲ್ಲಿ ಇದೀಗ ಶಿವಮೊಗ್ಗದ ಅರಸಾಳು ರೇಲ್ವೆ ನಿಲ್ದಾಣಕ್ಕೆ  ಮಾಲ್ಗುಡಿ ರೈಲು ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ. 
ಖ್ಯಾತ ಸಾಹಿತಿ ಕೆ.ನಾರಾಯಣ ಅವರ್ ಸಣ್ಣ ಕಥೆಗಳನ್ನು ಆಧರಿಸಿ  ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ ದಿ.ಶಂಕರ್ ನಾಗ್ ಮಾಲ್ಗುಡಿ ಡೇಸ್ ಹೆಸರಿನಲ್ಲಿ ಧಾರಾವಾಹಿ ನಿರ್ಮಿಸಿದ್ದರು.  1980 ದಶಕದ ಅಂತ್ಯದಲ್ಲಿ ಟಿವಿಯಲ್ಲಿ ಪ್ರಸಾರವಾದ  ಈ ಧಾರಾವಾಹಿಯಲ್ಲಿ ಆಗುಂಬೆ, ಅರಸಾಳು,ಶಿವಮೊಗ್ಗ,ಸಾಗರ ರೈಲು ನಿಲ್ದಾಣಗಳನ್ನು ಬಳಸಿಕೊಳ್ಳಲಾಗಿತ್ತು. 


ಈ ಸ್ಥಳವನ್ನು ಮಾಲ್ಗುಡಿ ನೆನಪಿಗಾಗಿ ಕಾಯ್ದಿರಿಸುವಂತೆ ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ  ಅರಸಾಳು ರೈಲ್ವೆ ನಿಲ್ದಾಣವನ್ನು  ಮ್ಯೂಸಿಯಂ ಮಾಡುವುದರ ಜೊತೆಗೆ ಅಭಿವೃದ್ಧಿಗೊಳಿಸಿ ಮಾಲ್ಗುಡಿ ರೇಲ್ವೈ ನಿಲ್ದಾಣ ಎಂದು ಮರುನಾಮಕರಣ ಮಾಡಲು  ರೈಲ್ವೆ ಇಲಾಕೆ ನಿರ್ಧರಿಸಿದೆ. 

ದಟ್ಟ ಅಡವಿಯ ನಡುವಿನ ಈ ಪ್ರದೇಶ ಮಾಲ್ಗುಡಿ ಧಾರಾವಾಹಿಯಲ್ಲಿ ಸುಂದರವಾಗಿ ಚಿತ್ರೀಸಲ್ಪಟ್ಟಿತ್ತು.  ಇದೀಗ ರೈಲು ನಿಲ್ದಾಣವನ್ನು  1.3 ಕೋಟಿರೂಪಾಯಿ ಅನುದಾನ ಬಳಸಿ  ಅಭಿವೃದ್ಧಿ ಪಡಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕೆ ಸ್ಥಳೀಯರು ಬೆಂಬಲ ನೀಡಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Malgudi Days #Shivmogga # Arsalu #Memory


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ