ಶೂಟಿಂಗ್‍ಗೆ ಮರಳಿದ ರಾಧಿಕಾ ಕುಮಾರಸ್ವಾಮಿ 

Radhika Kumaraswamy returns to shooting

02-03-2019

ಸಶ್ಮಾನದಲ್ಲಿ ಗಾಯಗೊಂಡು ಮನೆ ಸೇರಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಶೂಟಿಂಗ್ ಸೆಟ್‍ಗೆ ಮರಳುತ್ತಿದ್ದಾರೆ.ಒಂದು ತಿಂಗಳ ರೆಸ್ಟ್ ಬಳಿಕ ಇದೀಗ ರಾಧಿಕಾ ಶೂಟಿಂಗ್ ಮರಳುತ್ತಿದ್ದು, ಇದರಿಂದ ರಾಧಿಕಾ ಬಗ್ಗೆ ಸೃಷ್ಟಿಯಾಗಿರುವ ಎಲ್ಲ ಗಾಸಿಪ್‍ಗಳಿಗೂ ಬ್ರೇಕ್ ಬಿದ್ದಿದೆ. 
ಭೈರಾದೇವಿ ಶೂಟಿಂಗ್ ವೇಳೆ ಶಾಂತಿನಗರ ಸಶ್ಮಾನದಲ್ಲಿ ರಾಧಿಕಾ ಗೋರಿ ಮೇಲೆಯೇ ಬಿದ್ದಿದ್ದರು. ಇದರಿಂದ ರಾಧಿಕ ಕುಮಾರಸ್ವಾಮಿ ಬೆನ್ನಿಗೆ ಗಾಯವಾಗಿತ್ತು. ತಕ್ಷಣ ವೈದ್ಯರ ಸಲಹೆ ಪಡೆದಿದ್ದ ರಾಧಿಕಾಗೆ ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ಡಾಕ್ಟರ್ ಹೇಳಿದ್ದರು. ಹೀಗಾಗಿ ರಾಧಿಕಾ ಕಳೆದ ಒಂದು ತಿಂಗಳಿನಿಂದ ವಿಶ್ರಾಂತಿಯಲ್ಲಿದ್ದರು. 

ಅಷ್ಟೇ ಅಲ್ಲ,  ರಾಧಿಕಾ ಗೋರಿ ಮೇಲೆ ಅಮಾವಾಸ್ಯೆದಿನ ಜಾರಿ ಬಿದ್ದಿದ್ದರಿಂದ ಜ್ಯೋತಿಷ್ಯಿಗಳು ರಾಧಿಕಾಗೆ ಕೆಲವು ಪೂಜೆ ಮಾಡಿಸುವಂತೆಯೂ ಸಲಹೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ರಾಧಿಕಾ ಕುರಿ ಬಲಿ ಸೇರಿದಂತೆ ಹಲವು ರೀತಿಯಲ್ಲಿ ಪರಿಹಾರ ಪೂಜೆಯನ್ನು ಮಾಡಿಸಿಕೊಂಡಿದ್ದಾರೆ. 

ಮಾರ್ಚ್ 5 ರಿಂದ  ರಾಧಿಕಾ ದಮಯಂತ್ರಿ ಚಿತ್ರದ ಶೂಟಿಂಗ್‍ನಲ್ಲಿ ಭಾಗವಹಿಸಲಿದ್ದು, ಮಾರ್ಚ್ 17 ರ ನಂತರ ಭೈರಾದೇವಿ ಚಿತ್ರದ ಬಾಕಿ ಇರುವ ದೃಶ್ಯಗಳು ಹಾಗೂ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ಸ್ವತಃ ರಾಧಿಕಾ ಮಾಹಿತಿ ನೀಡಿದ್ದು, ಆರೋಗ್ಯ ಸರಿಹೋಗಿದೆ. ಹೀಗಾಗಿ ಶೂಟಿಂಗ್ ಆರಂಭಿಸುತ್ತಿದ್ದೇನೆ ಎಂದಿದ್ದಾರೆ. 

ರಾಧಿಕಾ ಕುಮಾರಸ್ವಾಮಿ,ಭೈರಾದೇವಿ ಚಿತ್ರವನ್ನು ತಮ್ಮ ಸ್ವಂತ ಬ್ಯಾನರ್‍ನಲ್ಲಿ ನಿರ್ಮಿಸುತ್ತಿದ್ದು,  ಶ್ರೀಜೈ ಈ ಚಿತ್ರಕ್ಕೆ ನಿರ್ದೇಶನವಿದೆ. ಥ್ರೀಲ್ಲರ್ ಕತೆ ಹೊಂದಿರುವ ಈ ಚಿತ್ರದಲ್ಲಿ ಮೊದಲ ಬಾರಿಗೆ  ಹಿರಿಯ ನಟ ರಮೇಶ್ ಅರವಿಂದ್  ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಇನ್ನು ಈ ವರ್ಷದಲ್ಲಿ ರಾಧಿಕಾ ಕಾಣಿಸಿಕೊಳ್ಳುತ್ತಿರುವ ಇನ್ನೊಂದು ಚಿತ್ರ ದಮಯಂತಿ, ನವರಸನ್ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಗೋರಿ ಮೇಲೆ ಜಾರಿ ಬಿದ್ದು, ಹಲವು ಗಾಸಿಪ್‍ಗೆ ತುತ್ತಾಗಿದ್ದ ರಾಧಿಕಾ ಮತ್ತೊಮ್ಮೆ ಬಣ್ಣ ಹಚ್ಚೋಕೆ ರೆಡಿ ಆಗಿರೋದಂತು ಸತ್ಯ. 
 


ಸಂಬಂಧಿತ ಟ್ಯಾಗ್ಗಳು

#Radhika Kumarswamy #Bhairadevi #Movie #Damyanthi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ