ಫೋನ್ ಕದ್ದಾಲಿಕೆ ಪ್ರಕರಣ ನಗರ ಪೊಲೀಸ್ ಆಯುಕ್ತರ ಅನುಮಾನ ನಡೆ !

Kannada News

07-06-2017

ಬೆಂಗಳೂರು:- ಕಳೆದ ಸೆಪ್ಟೆಂಬರ್ ನಲ್ಲಿ ನಗರದ ಹೆಚ್ಚವರಿ ಪೊಲೀಸ್ ಆಯುಕ್ತರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಡಿಸಿಪಿಯಾಗಿದ್ದ ಮತ್ತೊಬ್ಬ ಐಪಿಎಸ್ ಅಧಿಕಾರಿಯ ಫೋನ್ ಸಂಭಾಷಣೆಯ ಕದ್ದಾಲಿಕೆಯ ಕುರಿತು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಯಾವುದೇ ವಿಚಾರಣೆ ನಡೆಸದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಕಾವೇರಿ ಗಲಾಟೆ ಸಂದರ್ಭದಲ್ಲಿ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಚರಣ್‍ರೆಡ್ಡಿ ಅವರು ಕನ್ನಡ ಪರ ಕಾರ್ಯಕರ್ತನೊಂದಿಗೆ ನಡೆಸಿದ ಟೆಲಿಪೋನ್ ಸಂಭಾಷಣೆಯನ್ನು ಪಶ್ಚಿಮ ವಲಯದ ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಅವರು ಸೋರಿಕೆ ಮಾಡಿದ ದೂರನ್ನು ಪ್ರವೀಣ್‍ಸೂದ್ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಸೆಪ್ಟೆಂಬರ್  ನಲ್ಲಿ ನಡೆದ ಕಾವೇರಿ ಗಲಭೆಯ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಹಾಗೂ ಕನ್ನಡ ಪ್ರಕಾಶ್ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ನಡುವೆ ಫೋನ್ ಸಂಭಾಷಣೆ ನಡೆದಿತ್ತು. ಆದರೆ ಡಿಸಿಪಿ ಅಜಯ್ ಹಿಲೋರಿ ಬಳಿಕ ಈ ಸಂಭಾಷಣೆಯನ್ನು ಸೋರಿಕೆ ಮಾಡಿದ್ದರು, ಇದನ್ನು ತಿಳಿದ ಚರಣ್‍ರೆಡ್ಡಿ ಅವರು ಅಂದಿನ ಪೊಲೀಸ್ ಆಯುಕ್ತ ಮೇಘರಿಕ್ ಅವರಿಗೆ ದೂರು ಸಲ್ಲಿಸಿದ್ದರು. ಮೇಘರಿಕ್ ಅವರು ದೂರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರ್ಗಾಹಿಸಿದ್ದು ಇದರ ಕುರಿತು ವಿಚಾರಣೆ ನಡೆಸುವಂತೆ ಡಿಜಿಪಿ ಆರ್.ಕೆ ದತ್ತ ಅವರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ಈಗಾಗಲೇ ಮೂರು ಬಾರಿ ನೋಟಿಸ್ ನೀಡಿದ್ದಾರೆ.ಆದರೆ ಸೂದ್ ಅವರು ಯಾವುದೇ ತನಿಖೆ ನಡೆಸದೇ ನಿರ್ಲಕ್ಷ ವಹಿಸಿರುವುದು ಡಿಸಿಪಿ ಅಜಯ್ ಹಿಲೋರಿಗೆ ರಕ್ಷಣೆ ನೀಡುತ್ತಿದ್ದಾರಾ ಎನ್ನುವ ಅನುಮಾನ ಉಂಟಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ