ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಒಸಾಮಾ ಬಿಲ್ ಲಾಡೆನ್ ಪುತ್ರ 

Osama bin Laden son To The United Nations blacklist

02-03-2019

ಹಲವು ಉಗ್ರ ಚಟುವಟಿಕೆಗಳಿಂದ ವಿಶ್ವದಾದ್ಯಂತ ಕುಖ್ಯಾತಿ ಪಡೆದಿದ್ದ ಅಲ್ ಖೈದಾ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹಾದಿಯಲ್ಲೇ ಪುತ್ರ  ಹಮ್ಜಾ ಬಿನ್ ಲಾಡೆನ್ ಕೂಡ ಸೇರ್ಪಡೆಗೊಂಡಿದ್ದಾನೆ. ಹೌದು ಒಸಾಮಾ ಬಿನ್ ಲಾಡೆನ್ ಪುತ್ರ  ಹಮ್ಜಾ ಲಾಡೆನ್‍ನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ. 

ಹಮ್ಜಾ ಲಾಡೆನ್‍ನನ್ನು   ಉಗ್ರ ಸಂಘಟನೆಯ ಈಗಿನ ಮುಖ್ಯಸ್ಥ  ಐಮಾನ್ ಅಲ್ ಜವಾಹರಿಯ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿದೆ. ಇದುವರೆಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೂ  1267  ಇಸಿಸ್ ಮತ್ತು ಅಲ್ ಖೈದಾ ಉಗ್ರ ಸಂಘಟನೆಯ ಸದಸ್ಯರನ್ನು ನಿರ್ಬಂಧಿಸಿದ್ದು, ಇದೀಗ ಈ ಸಾಲಿಗೆ ಲಾಡೆನ್ ಪುತ್ರ ಹಮ್ಜಾನನ್ನು ಸೇರ್ಪಡೆಗೊಳಿಸಿದೆ. 

 ಕೇವಲ ಕಪ್ಪು ಪಟ್ಟಿಗೆ ಸೇರಿಸಿರುವುದು ಮಾತ್ರವಲ್ಲದೇ ಹಮ್ಜಾ ಸುಳಿವು ನೀಡಿದವರಿಗೆ  ಒಂದು ಬಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿತ್ತು. ಇದಕ್ಕೆ ಪೂರಕವಾಗಿ  ಸೌದಿ ಸರ್ಕಾರ ಹಮ್ಜಾ ಬಿನ್ ಲಾಡೆನ್‍ನ  ಸೌದಿ ಅರೇಬಿಯಾದ ಪೌರತ್ವವನ್ನು ರದ್ದುಗೊಳಿಸಿದೆ.  

ಅಲ್ ಜವಾಹರಿ ಸೌದಿ ಅರೇಬಿಯಾ ಮೂಲದ ಹಮ್ಜಾ ಬಿನ್ ಲಾಡೆನ್ ಅಲ್ ಖೈದಾದ ಅಧಿಕೃತ ಸದಸ್ಯನೆಂದು ಪ್ರಕಟಿಸಿದ್ದಾನೆ. ಜೊತೆಗೆ ಭಯೋತ್ಪಾದಕ ದಾಳಿಯನ್ನು ನಡೆಸಲು  ಅಲ್ ಖೈದಾದ ಅನುಯಾಯಿಗಳಿಗೆ ಹಮ್ಜಾ ಕರೆ ನೀಡಿದ್ದಾನೆ.  ಹೀಗಾಗಿ ಅಲ್ ಜವಾಹರಿಯ ಸಂಭವನೀಯ ಉತ್ತರಾಧಿಕಾರಿಯಾಗಿರುವ ಹಮ್ಜಾನನ್ನು ಕಪ್ಪುಪಟ್ಟಿಗೆ ಸೇರಿಸುತ್ತಿರುವುದಾಗಿ  15 ಸದಸ್ಯರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇಳಿದೆ. 


ಹಮ್ಜಾನನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ  ಈ ಸಂಘಟನೆಗಳಿಗೆ ಎಲ್ಲೆಡೆಯಿಂದ ಹರಿದು ಬರುವ  ನೆರವು, ಹಣಕಾಸಿನ ಸೌಲಭ್ಯ ಸೇರಿದಂತೆ ಎಲ್ಲ ಬೆಂಬಲವನ್ನು ತಡೆಯುವುದು ವಿಶ್ವಸಂಸ್ಥೆಯ ಉದ್ದೇಶವಾಗಿದೆ. ಜೊತೆಗೆ ಕಪ್ಪುಪಟ್ಟಿಗೆ ಸೇರೋದರಿಂದ  ಈ ಉಗ್ರರು ಬೇರೆ ರಾಷ್ಟ್ರಕ್ಕೆ  ಪ್ರವಾಸ ಕೈಗೊಳ್ಳುವುದು ತಪ್ಪಲಿದ್ದು, ಇದರೊಂದಿಗೆ ಶಸ್ತ್ರಾಸ್ತ್ರಗಳ ಸರಬರಾಜಿಗೂ ಕೂಡ ಕಡಿವಾಣ ಬೀಳಲಿದೆ ಎಂಬುದು ವಿಶ್ವಸಂಸ್ಥೆಯ ಲೆಕ್ಕಾಚಾರ.  


ಸಂಬಂಧಿತ ಟ್ಯಾಗ್ಗಳು

#United Nations # Blacklist #Osama bin Laden #Hamza bin laden


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ