ಪಾಕ್‍ನಿಂದ ಮುಂದುವರಿದ ಗುಂಡಿನ ದಾಳಿ

 Continuous Firing by Pak

02-03-2019

ಭಾರತದ ವಿಂಗ್ ಕಮಾಂಡರ್ ನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ ಬೆನ್ನಲ್ಲೇ  ಪಾಕಿಸ್ತಾನ ತನ್ನ ವಿಕೃತಿ ಮೆರೆದಿದೆ.  ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಮತ್ತೆ ಶೆಲ್ ದಾಳಿ ನಡೆಸಿದ್ದು, ಈ ದಾಳಿಗೆ  ಇಬ್ಬರು ಮಕ್ಕಳು ಸೇರಿ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಓರ್ವ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗಡಿ ನಿಯಂತ್ರಣ ರೇಖೆ ಬಳಿಯ ರಜೌರಿ, ಪೂಂಚ್ ಹಾಗೂ ಮೇಂದಾರ್ ವಲಯಗಳಲ್ಲಿ ಪಾಕ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ನಾಗರಿಕ ವಸತಿ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು,  ಈ ದಾಳಿಗೆ ಇಬ್ಬರು ಪುಟ್ಟ ಮಕ್ಕಳು ಬಲಿಯಾಗಿದ್ದಾರೆ. 

ರುಬಾನಾ ಕೌಸರ್, ಫಜಾನ್, ಶಬನಂ ಮೃತ ದುರ್ದೈವಿಗಳಾಗಿದ್ದು,  ರುಬಾನಾ ಪತಿ ಮೊಹಮ್ಮದ್ ಯೂನಿಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇವಲ ಈ ಪ್ರದೇಶ ಮಾತ್ರವಲ್ಲದೇ ಇತರೆಡೆಯೂ ಪಾಕ್ ಬೆಂಬಲಿತ ಉಗ್ರರು ಹಾಗೂ ಯೋಧರು ದಾಳಿ ಮುಂದುವರೆಸಿದ್ದಾರೆ. 

 ಮನ್‍ಕೋಟ್‍ನಲ್ಲಿ ಇಂತಹುದೇ ದಾಳಿಯಲ್ಲಿ ನಸೀಂ ಅಖ್ತರ್ ಎಂಬ ಮಹಿಳೆ ಗಾಯಗೊಂಡಿದ್ದಾರೆ. ಇನ್ನು ಕೃಷ್ಣಘಾಟಿ, ಬಾಲ್‍ಕೋಟ್ ಸೇರಿದಂತೆ ಹಲವೆಡೆ ಪಾಕ್‍ಉಗ್ರರು ದಾಲಿ ನಡೆಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಾಗರಿಕ ವಸತಿ ಪ್ರದೇಶದ ಮೇಲೆ ತೀವ್ರತರದ ದಾಳಿ ನಡೆಸಿದ ಪಾಕ್ ಯೋಧರು  ಮಾರ್ಟಾರ್ ಬಾಂಬ್‍ಗಳನ್ನು ಸಿಡಿಸುತ್ತಿದ್ದಾರೆ. ಅಲ್ಲದೇ  ಹೋವಿಟ್ಜರ್ 105 , ಎಂಎಂ ಸೇರಿ ಭಾರಿ ಗನ್‍ಗಳನ್ನು ಬಳಸಿ ಗುಂಡಿನ ದಾಳಿ ನಡೆಸಿ ನಾಗರಿಕರನ್ನು ಸಂಕಷ್ಟಕ್ಕಿಡುಮಾಡುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#India #Pakistan #Border #Firing


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ