ಅಲ್ಲಿ ಬಿಟ್ಟು,  ಇಲ್ಲಿ ಬಿಟ್ಟು ಎಲ್ಲಿ ನಿಲ್ತಾರೆ ದೊಡ್ಡಗೌಡ್ರು?

 Which is the Lok Sabha constituency of Deve Gowda?

02-03-2019

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಣ ನಿಧಾನಕ್ಕೆ ರಂಗೇರುತ್ತಿದೆ. ಲೋಕಸಭಾ ಚುನಾವಣೆಗಿಂತ ಹೆಚ್ಚು ಸದ್ದು ಮಾಡುತ್ತಿರೋದು ಜೆಡಿಎಸ್‍ನ ಮೂರು ಮುತ್ತುಗಳ ಸೀಟು ಹಂಚಿಕೆ. ಹೌದು 2019 ರ ಲೋಕಸಭಾ ಚುನಾವಣೆಯ ಮೂಲಕ ದೇವೆಗೌಡರ್ ಕುಟುಂಬದ ಮೂರನೇ ತಲೆಮಾರು ರಾಜಕೀಯ ಪ್ರವೇಶ ಮಾಡ್ತಿದೆ. ಈಗಾಗಲೇ ದೇವೆಗೌಡರ್ ಗಟ್ಟಿನೆಲವಾಗಿದ್ದ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅದೃಷ್ಟ ಪರೀಕ್ಷೆಗೆ ಮುಂಧಾಗಿದ್ದರೇ, ಇತ್ತ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಎನ್ನಲಾಗ್ತಿದೆ. ಹಾಗಿದ್ದರೇ ಈ ಎರಡೂ ಕ್ಷೇತ್ರ ಬಿಟ್ಟು ದೊಡ್ಡಗೌಡ್ರು ಎಲ್ಲಿ ಚುನಾವಣೆಗೆ ನಿಲ್ತಾರೆ ಅನ್ನೋದೆ ಸಧ್ಯದ ಕುತೂಹಲ. 

ಮತ್ತೊಮ್ಮೆ ಪ್ರಧಾನಿಯಾಗುವ ಕನಸಿನಲ್ಲಿರುವ ದೇವೆಗೌಡರು, ಅತ್ಯಂತ ಚಾಣಾಕ್ಷತನದಿಂದ ತಮ್ಮ ರಾಜಕೀಯ ದಾಳಗಳನ್ನು ಎಸೆಯುತ್ತಿದ್ದಾರೆ. ಮೊದಲು ಕುಟುಂಬ ರಾಜಕಾರಣವನ್ನು ಸಮತೂಗಿಸಲು ಮುಂಧಾದ ಗೌಡರು, ತಮ್ಮ ನೆಚ್ಚಿನ ನೆಲವಾಗಿದ್ದ ಹಾಸನವನ್ನು ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣನಿಗೆ ಬಿಟ್ಟು ಕೊಟ್ಟರೇ, ಜೆಡಿಎಸ್‍ನ ತವರಿನಂತಿದ್ದ ಮಂಡ್ಯವನ್ನು ನಿಖಿಲ್ ಕುಮಾರಸ್ವಾಮಿಗೆ ಬಿಟ್ಟು ಕೊಡಲು ನಿರ್ಧರಿಸಿದ್ದರು. ಆದರೆ ದೊಡ್ಡಗೌಡ್ರು ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. 

ಮೂಲಗಳ ಮಾಹಿತಿ ಪ್ರಕಾರ ದೇವೆಗೌಡರು ಈ ವಿಚಾರವನ್ನು ಕೊನೆಯ ಕ್ಷಣದವರೆಗೂ ಗೌಪ್ಯವಾಗಿ ಇಡಲು ಬಯಸುತ್ತಿದ್ದಾರಂತೆ. ಇತರ ರಾಜಕೀಯ ಪಕ್ಷಗಳಿಗೆ ತಮ್ಮ ಸ್ಪರ್ಧೆ ಹಾಗೂ ಕ್ಷೇತ್ರದ ಮಾಹಿತಿ ಲಭ್ಯವಾದರೇ ಪ್ರತಿತಂತ್ರ ರೂಪಿಸುವ ಅವಕಾಶವಿರೋದರಿಂದ ಗೌಡ್ರು ಯಾವ ಕ್ಷೇತ್ರದಲ್ಲಿ ನಿಲ್ಲಲಿದ್ದಾರೆ ಎಂಬ ಮಾಹಿತಿ ಬಿಟ್ಟು ಕೊಡುತ್ತಿಲ್ಲ. ದೇವೆಗೌಡರು ತುಮಕೂರು , ಮೈಸೂರು ಹಾಗೂ ಬೆಂಗಳೂರು ಉತ್ತರ ಈ ಮೂರು ಕ್ಷೇತ್ರದಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. 
 
ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡ್ರು ಬಿಜೆಪಿಯಿಂದ ಕಣಕ್ಕಿಳಿಯೋದರಿಂದ ಪೈಪೋಟಿ ಗೌಡ್ರರಿಗೆ ಈ ಕ್ಷೇತ್ರ ಅಷ್ಟೊಂದು ಸುಲಭವಲ್ಲ. ಇನ್ನು ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ದೇವೆಗೌಡರು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಚುನಾವಣೆ ಎದುರಿಸಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಶುಕ್ರವಾರ ಮೈಸೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಮೈಸೂರಿನಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಬೇಕೆಂಬ ಕೂಗು ಬಲವಾಗಿ ಕೇಳಿಬಂದಿದೆ. 

ಹೀಗಾಗಿ ಸಧ್ಯ ದೇವೆಗೌಡರು ತುಮಕೂರು ಕ್ಷೇತ್ರವನ್ನು ಆಯ್ದುಕೊಳ್ಳುವ ಸಾಧ್ಯತೆ ಇದೆ. ರಾಜ್ಯ ಗುಪ್ತಚರ ವರದಿಗಳ ಪ್ರಕಾರವೂ ದೇವೆಗೌಡರಿಗೆ ತುಮಕೂರು ಕ್ಷೇತ್ರ ಬೆಸ್ಟ್ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೇವೆಗೌಡರು ಕಲ್ಪತರು ನಾಡಿನತ್ತ ಮುಖಮಾಡುವ ಸಾಧ್ಯತೆ ಇದೆ ಎನ್ನುತ್ತಿವೆ ಜೆಡಿಎಸ್ ಮೂಲಗಳು. ಆದರೆ ಸೂಕ್ಷ್ಮವಾಗಿ ರಾಜಕೀಯ ಲೆಕ್ಕಾಚಾರಗಳ ಮೂಲಕ ನಿರ್ಧಾರಕ್ಕೆ ಬರುವ ದೊಡ್ಡಗೌಡ್ರ ತಲೆಯಲ್ಲಿ ಏನು ನಡೆಯುತ್ತಿದೆ ಎಂಬುದು ಸ್ವತಃ ಅವರ ಮಕ್ಕಳಿಗೂ ಗೊತ್ತಿರೋದಿಲ್ಲ. ಹೀಗಾಗಿ ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಗಿಂತ, ದೊಡ್ಡಗೌಡ್ರ ಕ್ಷೇತ್ರ ಆಯ್ಕೆಯೇ ಅತಿಹೆಚ್ಚು ಕುತೂಹಲ ಮೂಡಿಸಿದೆ. 


ಸಂಬಂಧಿತ ಟ್ಯಾಗ್ಗಳು

#Karnataka # Constituency #Deve Gowda #Lok Sabha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ