ಒಐಸಿ ಸಮಾವೇಶದಿಂದ ಹೊರಗುಳಿದ ಪಾಕಿಸ್ತಾನ

 Pakistan Out of OIC conference

01-03-2019

ಮಹತ್ವದ ಬೆಳವಣಿಗೆಯೊಂದರಲ್ಲಿ ಅಬುದಾಬಿಯಲ್ಲಿ ನಡೆದ ಒಐಸಿ ಸಮಾವೇಶಕ್ಕೆ ಪಾಕಿಸ್ತಾನ ಗೈರಾಗಿದೆ. ಈ ಸಮಾವೇಶದಲ್ಲಿ  ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಲ್ಗೊಂಡ ಹಿನ್ನೆಲೆಯಲ್ಲಿ ಪಾಕ್ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದೆ. 


ಇನ್ನು ಭಾರತ ಇಸ್ಲಾಮಿಕ್ ಸಹಕಾರ ಸಂಘಟನೆ ಸದಸ್ಯತ್ವವನ್ನು ಹೊಂದಿರದೇ ಇದ್ದರೂ ಸಮಾವೇಶದಲ್ಲಿ ಪಾಲ್ಗೊಂಡಿದೆ. ಪಾಕಿಸ್ತಾನ ಒಐಸಿ ಸದಸ್ಯತ್ವವನ್ನು ಹೊಂದಿದ್ದರೂ ಕೂಡ ಭಾರತದ ಪಾಲ್ಗೊಳ್ಳುವಿಕೆಯನ್ನು ವಿರೋಧಿಸಿ ಪಾಕ್ ಹೊರಗುಳಿದಿದೆ.  ಇನ್ನು ಸಮಾವೇಶದಲ್ಲಿ ಸುಷ್ಮಾ ಸ್ವರಾಜ್ ಭಯೋತ್ಪಾದನೆ ವಿರುದ್ಧ ಕಟುವಾದ ಶಬ್ದಗಳಿಂದ ಟೀಕಿಸಿದ್ದಾರೆ. 

ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸುಷ್ಮಾ ಸ್ವರಾಜ್,  ಭಯೋತ್ಪಾದನೆಯಿಂದ ವಿಶ್ವದಲ್ಲೇ ಹಿಂಸಾಚಾರ ಹೆಚ್ಚಾಗಿದೆ. ಇಂತಹ ಭಯೋತ್ಪಾದನೆ ವಿರುದ್ಧ ಜಗತ್ತಿನ ದೇಶಗಳೆಲ್ಲಾ ಒಟ್ಟಾಗಿ ಹೋರಾಡಬೇಕಿದೆ ಎಂದರು. ಇಸ್ಲಾಂಧರ್ಮದಲ್ಲಿ ಶಾಂತಿಯನ್ನು ಹೇಳಿಕೊಡಲಾಗುತ್ತದೆ. ಆದರೆ ಕೆಲ ದೇಶಗಳು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ.  ಭಯೋತ್ಪಾದನೆಗೆ ಹಣ, ಆಶ್ರಯ ನೀಡುವ ದೇಶಗಳ ಬಣ್ಣ ಬಯಲು ಮಾಡಬೇಕಿದೆ ಎಂದಿದ್ದಾರೆ. 


ಒಐಸಿ ಸಮಾವೇಶಕ್ಕೆ ಸುಷ್ಮಾ ಸ್ವರಾಜ್ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಭಾರತ ಹಾಗೂ ಗಲ್ಪ್ ರಾಷ್ಟ್ರಗಳ ನಡುವಿನ ಉತ್ತಮ ಬಾಂಧ್ಯವವನ್ನು ಸ್ಮರಿಸಿದ ಸುಷ್ಮಾ ತಮ್ಮ ಭಾಷಣದುದ್ದಕ್ಕೂ ಪಾಕಿಸ್ತಾನದ ದುವರ್ತನೆಯನ್ನು ಖಂಡಿಸಿದರು.


ಸಂಬಂಧಿತ ಟ್ಯಾಗ್ಗಳು

#Abudabi #Sushma Swaraj #OIC conference #Speach


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ