ಅಭಿನಂದನ್ ಬಿಡುಗಡೆ ತಡೆ ಅರ್ಜಿ ವಜಾ 

ಅಭಿನಂದನ್ ಬಿಡುಗಡೆ ತಡೆ ಅರ್ಜಿ ವಜಾ 

01-03-2019

ಪಾಕ್ ಹಿಡಿತದಲ್ಲಿದ್ದ ಭಾರತೀಯ ವಾಯುಪಡೆಯ ಕಮಾಂಡರ್ ಅಭಿನಂದನ್ ವರ್ಧಮಾನ್ ಬಿಡುಗಡೆಗೆ ಪಾಕಿಸ್ತಾನ ನಿರ್ಧರಿಸಿರುವುದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತನೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನ್ ಹೈಕೋರ್ಟ್ ವಜಾಗೊಳಿಸಿದೆ. ಇದರ ಫಲವಾಗಿ ಅಭಿನಂದನ್ ದೇಶದ ಗಡಿ ತಲುಪಿದ್ದಾರೆ. 

ಭಾರತೀಯ ವಾಯುಗಡಿ ಉಲ್ಲಂಘಿಸಿದ್ದ ಪಾಕಿಸ್ತಾನದ ಎಫ್16 ಯುದ್ಧವಿಮಾನವನ್ನು ಹಾಗೂ ರಷ್ಯಾ ನಿರ್ಮಿತ ಮಿಗ್-21 ಬೈಸನ್ ಜೆಟ್ ಯುದ್ಧವಿಮಾನ ಬೆನ್ನಟ್ಟಿ ಹೋಗಿದ್ದ ಅಭಿನಂದನ್ ತಮ್ಮ ವಿಮಾನದಿಂದ ಜಿಗಿದು ಪ್ಯಾರಾಚೂಟ್ ಸಹಾಯದಿಂದ ಹಾರಾಟ ನಡೆಸುವ ವೇಳೆ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ದಾಟಿ ಅವರ ನೆಲದಲ್ಲಿ ಇಳಿದಿದ್ದರು. ಈ ವೇಳೆ ಅಭಿನಂದನ್ ಬಂಧಿಸಿದ ಪಾಕಿಸ್ತಾನ್ ಸೆರೆಯಾಳುವಾಗಿ ಇಟ್ಟುಕೊಂಡಿತ್ತು. 

ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ್ದರಿಂದ ಹಾಗೂ  ಜೀನಿವಾ ಒಪ್ಪಂದದ ಪ್ರಕಾರ ಪಾಕಿಸ್ತಾನ್ ಅಭಿನಂದನ್ ಬಿಡುಗಡೆಗೆ ನಿರ್ಧರಿಸಿತ್ತು. ಆದರೆ ಪಾಕಿಸ್ತಾನ ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ, ಅಲ್ಲಿನ ಸಾಮಾಜಿಕ ಕಾರ್ಯಕರ್ತನೊಬ್ಬ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅರ್ಜಿ ವಿಚಾರಣೆ ನಡೆಸಿದ ಪಾಕ್ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. 

ಹೀಗಾಗಿ ಈಗಾಗಲೇ ಪಾಕಿಸ್ತಾನ ಅಭಿನಂದನ್‍ರನ್ನು ವಾಘಾ ಗಡಿಗೆ ಕರೆತಂದಿದ್ದು, ಅಲ್ಲಿ ಹಸ್ತಾಂತರ ಪ್ರಕ್ರಿಯೆಗಳು ಮುಗಿದ ಬಳಿಕ ಅಭಿನಂದನ್ ಭಾರತಕ್ಕೆ ಮರಳಲಿದ್ದಾರೆ. ಈಗಾಗಲೇ ವಾಘಾ ಗಡಿಯಲ್ಲಿ ಅಭಿನಂದನ್ ಕುಟುಂಬ ವರ್ಗ ಕೂಡ ಆಗಮಿಸಿದ್ದು, ಮಗನನ್ನು ಕಾಣಲು ಕಾತರದಿಂದ ಕಾಯುತ್ತಿದ್ದಾರೆ. 
ಕೇವಲ ಪಾಕಿಸ್ತಾಮದ ಸಾಮಾಜಿಕ ಕಾರ್ಯಕರ್ತ ಮಾತ್ರವಲ್ಲ, ಸಚಿವ ಶೇಖ್ ರಶೀದ್ ಅಹಮ್ಮದ್ ಕೂಡ ಅಭಿನಂದನ್ ಹಿಂತಿರುಗಿಸುವುದಕ್ಕೆ  ವಿರೋಧ ವ್ಯಕ್ತಪಡಿಸಿದ್ದಾರೆ. ಯಾಕೆ ಹಿಂತಿರುಗಿಸಬೇಕೆಂದು ಪ್ರಶ್ನಿಸಿದ್ದಾರೆ. ಆದರೂ ಪಾಕ್ ಹೈಕೋರ್ಟ್ ಅರ್ಜಿ ವಜಾಗೊಳಿಸಿರೋದರಿಂದ ಅಭಿನಂದನ್ ಬಿಡುಗಡೆಯ ಹಾದಿ ಸುಗಮವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Abinandhan #High Court #Pakistan #Pulwama


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ