ಪುಲ್ವಾಮಾ ಇದು ಟೈಟಲ್ ಫೈಟ್ 

 Pulwama Its A  Title Fight

01-03-2019

ಅತ್ತ ದೇಶದ ಗಡಿಯಲ್ಲಿ ಉದ್ವಘ್ನ ಸ್ಥಿತಿನಿರ್ಮಾಣವಾಗಿ ನಮ್ಮ ವಾಯುಸೇನೆಯ ಕಮಾಂಡರ್ ಅಭಿನಂದನ್ ಬಿಡುಗಡೆಯಾಗಲಿ ಎಂದು ರಾಷ್ಟ್ರಕ್ಕೆ ರಾಷ್ಟ್ರವೇ ಪ್ರಾರ್ಥಿಸುತ್ತಿದ್ದರೇ, ಅತ್ತ ಬಾಲಿವುಡ್ ನಿರ್ಮಾಪಕರು ಇದೇ ವಿಚಾರಕ್ಕೆ ಕಿತ್ತಾಡುತ್ತಿದ್ದಾರೆ. ದೇಶದ ಭದ್ರತೆಗೂ ಬಾಲಿವುಡ್ ನಿರ್ಮಾಪಕರಿಗೂ ಏನು ಸಂಬಂಧ ಅಂದ್ರಾ....ಬಾಲಿವುಡ್ ನಿರ್ಮಾಪಕರುಗಳು ಹೊಡೆದಾಡ್ತಿರೋದು ಭದ್ರತೆ ವಿಚಾರಕ್ಕಲ್ಲ....ಬದಲಾಗಿ ಟೈಟಲ್‍ಗೆ. 

ಹೌದು ಫೆಬ್ರವರಿ 14 ರಂದು ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಭಾರತೀಯ ಯೋಧರ ಮೇಲೆ ಆತ್ಮಹತ್ಯಾ ದಾಳಿ ನಡೆಸಿ 44 ಯೋಧರ ಸಾವಿಗೆ ಕಾರಣವಾಗಿದ್ದರು. ಅದಾದ ಬಳಿಕ ಭಾರತವೂ ಪಾಕಿಸ್ತಾನ್‍ದ ಬಾಲ್‍ಕೋಟ್ ಸೇರಿದಂತೆ ಹಲವೆಡೆ ಏರ್ ಸ್ಟ್ರೈಕ್ ನಡೆಸಿತ್ತು. 

ಈ ಮಧ್ಯೆ ಅಭಿನಂದನ್ ಎಂಬ ಭಾರತೀಯ ವಾಯುಸೇನೆಯ ಕಮಾಂಡರ್‍ನನ್ನು ಪಾಕಿಸ್ತಾನ್ ಸೆರೆ ಹಿಡಿದಿತ್ತು. ಈ ಘಟನೆಗೆ ರಾಷ್ಟ್ರದಾದ್ಯಂತ ತೀವ್ರ ಸಂತಾಪ ವ್ಯಕ್ತವಾಗಿದ್ದು, ಎಲ್ಲೆಡೆ ಅಭಿನಂದನ್ ಸುರಕ್ಷಿತ ಬಿಡುಗಡೆಗಾಗಿ  ಪ್ರಾರ್ಥನೆ-ಪೂಜೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳು ಬಾಲಿವುಡ್ ಮಂದಿಯ ಗಮನ ಸೆಳೆದಿದ್ದು, ದೇಶಭಕ್ತಿಯನ್ನು ಜಾಗೃತಗೊಳಿಸಿದ ಈ ಬೆಳವಣಿಗೆಗಳನ್ನು ಆಧರಿಸಿ ಚಿತ್ರ ನಿರ್ಮಾಣಕ್ಕೆ  ಬಾಲಿವುಡ್ ನಿರ್ಮಾಪಕರು ಮುಗಿಬಿದ್ದಿದ್ದಾರೆ. 

ವಿವಿಧ ಟೈಟಲ್‍ಗಳ ರಜಿಸ್ಟ್ರೇಶನ್‍ಗಾಗಿ 10ಕ್ಕೂ ಹೆಚ್ಚು ನಿರ್ಮಾಪಕರು ಮುಂಬೈ ಫಿಲ್‍ಂ ಚೇಂಬರ್ ಎದುರು ಕ್ಯೂನಲ್ಲಿ ನಿಂತಿದ್ದಾರೆ. ಪುಲ್ವಾಮಾ: ದಿ ಟೆರರ್ ಅಟ್ಯಾಕ್, ಪುಲ್ವಾಮಾ  ಅಟ್ಯಾಕ್, ಸರ್ಜಿಕಲ್ ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್ ಆಂಡ್ ಬಾಲ್ ಕೋಟ್, ಅಭಿನಂದನ್ ದ್ ವಾರಿಯರ್ ಸೇರಿದಂತೆ ಹಲವು ಟೈಟಲ್‍ಗಳನ್ನು ರಜಿಸ್ಟರ್ ಮಾಡಲು ಪೈಪೋಟಿಯಲ್ಲಿದ್ದಾರೆ. 
ಈಗಾಗಲೇ ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಉರಿ ದ್ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನಿರ್ಮಾಣವಾಗಿದ್ದು, ಬಾಕ್ಸಾಪೀಸ್‍ನಲ್ಲಿ ಹಿಟ್ ಆಗಿ ಪ್ರದರ್ಶನ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಇದೀಗ ಏರ್ ಸ್ಟ್ರೈಕ್ ಹಾಗೂ ಪುಲ್ವಾಮಾ ದಾಳಿ  ನಿರ್ಮಾಪಕರ ಗಮನ ಸೆಳೆದಿದೆ. 
ಆದರೆ ಈ ಘಟನೆಗಳು ದೇಶದ ಭದ್ರತೆ ಹಾಗೂ ಸೈನ್ಯದ ಕುರಿತಾದ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುವುದರಿಂದ  ಸಿನಿಮಾ ನಿರ್ಮಾಣಕ್ಕೆ ಅನುಮತಿ ನೀಡುತ್ತಾ ಅನ್ನೋದು ಮಹತ್ವದ ಸಂಗತಿ. ಒಟ್ಟಿನಲ್ಲಿ  ದೇಶದೆಲ್ಲೆಡೆ ಗಡಿಭದ್ರತೆ, ಪಾಕಿಸ್ತಾನ ಹಾಗೂ ಭಯೋತ್ಪಾದನೆ ವಿಚಾರಗಳು ಪ್ರಾಮುಖ್ಯತೆ ಪಡೆದುಕೊಂಡಿದ್ದರೇ, ಸಿನಿಮಾಮಂದಿ ಮಾತ್ರ ಫಿಲ್‍ಂ ಟೈಟಲ್ ಗಾಗಿ ಪೈಪೋಟಿಗಿಳಿದಿರೋದು ಚರ್ಚೆಗೆ ಗ್ರಾಸವಾಗಿದೆ. 
 


ಸಂಬಂಧಿತ ಟ್ಯಾಗ್ಗಳು

#Pulwama #Chember #Cinema #Fight


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ