ಮೋದಿ ಸಮ್ಮುಖದಲ್ಲಿ ಕಮಲ  ಹಿಡಿಯಲಿರುವ ಡಾ.ಉಮೇಶ್ ಜಾಧವ್

 Dr Umesh Jadhav, who is Joining Bjp  in Modi

01-03-2019

ಅತೃಪ್ತರ ಶಾಸಕರ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್ ಕೊನೆಗೂ ಬಿಜೆಪಿ ಸೇರ್ಪಡೆಯ ಮುಹೂರ್ತ ಸನ್ನಿಹಿತವಾಗಿದೆ. ಹೌದು ಸಾಕಷ್ಟು ಗಾಸಿಪ್ ಹಾಗೂ ಊಹಾಪೋಹಗಳ ಬಳಿಕ ಇದೀಗ ಡಾ.ಉಮೇಶ್ ಕಮಲ ಮುಡಿಯೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. 

ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಲ್ಬುರ್ಗಿಯಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದೇ ಸಮಾವೇಶದಲ್ಲಿ ಡಾ.ಉಮೇಶ್ ಮೋದಿ ಸಮಕ್ಷಮದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. 

ಇದೇ ಸಮಾವೇಶದಲ್ಲಿ ಉಮೇಶ್ ಜಾಧವ್ ಅವರನ್ನು ಕಲ್ಬುರ್ಗಿಯ ಲೋಕಸಭಾ ಅಭ್ಯರ್ಥಿಯನ್ನಾಗಿ ಸಹ ಬಿಜೆಪಿ ಘೋಷಿಸಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ. 
ಇನ್ನು ಈ ಬಗ್ಗೆ ಈಗಾಗಲೇ ಉಮೇಶ್ ಜಾಧವ್ ಸುಪ್ರೀಂ ಕೋರ್ಟ್ ವಕೀಲರ ಬಳಿ ಚರ್ಚಿಸಿದ್ದು, ಕಾನೂನಾತ್ಮಕವಾಗಿ  ಕೈಗೊಳ್ಳಬೇಕಾದ ಮುಂಜಾಗ್ರತೆಗಳನ್ನು ಅನುಸರಿಸಲು ಮುಂಧಾಗಿದ್ದಾರೆ ಎನ್ನಲಾಗಿದೆ. ಸಧ್ಯದಲ್ಲೇ ಉಮೇಶ್ ಜಾಧವ್ ಈ ವಿಚಾರವನ್ನು ಬಹಿರಂಗವಾಗಿ ಘೋಷಿಸಲಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಲಿದ್ದಾರೆ. 

ಮಾರ್ಚ್ 6 ರಂದು ಕಲ್ಬುರ್ಗಿಯಲ್ಲಿ ಮೋದಿ ರ್ಯಾಲಿ ಹಾಗೂ ಸಮಾವೇಶ ಇದ್ದು, ಅಷ್ಟರೊಳಗೆ ಜಾಧವ್ ರಾಜೀನಾಮೆ ನೀಡಿ ತಮ್ಮ ಬಿಜೆಪಿ ಪ್ರಯಾಣದ ಹಾದಿ ಸುಗಮಗೊಳಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Karnataka #Bjp #Dr. Umesh Jhadav #Narendra Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ