ಸುಮಲತಾ ರಾಜಕೀಯ ಪ್ರವೇಶ, ಕುಮಾರಸ್ವಾಮಿ ಲೆಕ್ಕಾಚಾರ ತಪ್ಪಿದ್ದೆಲ್ಲಿ? 

 Sumalatha Political Entrance, Kumaraswamy Did not Calculate?

01-03-2019

ರಾಜಕೀಯ ಲೆಕ್ಕಾಚಾರದಲ್ಲಿ ಸದಾ ನಿಪುಣತೆ ತೋರುವ ಕುಮಾರಸ್ವಾಮಿಯವರು ಮೊದಲ ಬಾರಿಗೆ ತಮ್ಮ ಲೆಕ್ಕ ತಪ್ಪಿದ ದುಃಖದಲ್ಲಿಂದ್ದತಿದೆ. ಹೌದು ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವುದು ಹಾಗೂ ನಟ ಅಂಬರೀಶ್ ಸಾವಿನ ಶೋಕವನ್ನು ಮತವಾಗಿ ಮಾರ್ಪಡಿಸಿಕೊಳ್ಳುವ ಸಿಎಂ ಲೆಕ್ಕಾಚಾರ ತಪ್ಪಿದ್ದು, ಅದೇ ದುಃಖದಲ್ಲೇ ಕುಮಾರಸ್ವಾಮಿ ಅಂಬರೀಶ್ ವಿಚಾರದಲ್ಲಿ ತಮ್ಮ ಮನಸ್ಸಿನಲ್ಲಿದ್ದ ಎಲ್ಲವನ್ನು ಕಕ್ಕಿ ನಿಜ ಬುದ್ದಿ ತೋರಿಸಿದ್ದಾರೆ.  

ಹೌದು ರಾಜಕೀಯದಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಕುಮಾರಸ್ವಾಮಿ ಹಾಗೂ ದೇವೆಗೌಡರ್ ಕುಟುಂಬಕ್ಕೆ ಕರಗತವಾಗಿರುವ ಕಲೆ. ಈ ಕಲೆಯನ್ನು ಸಿಎಂ ಕುಮಾರಸ್ವಾಮಿ ಅಂಬರೀಶ್ ನಿಧನದ ವೇಳೆಯಲ್ಲೂ ಬಳಸಿಕೊಂಡ್ರು ಅನ್ನೋದು ಈಗ ಗುಟ್ಟಾಗಿ ಉಳಿದಿಲ್ಲ. 
ನಟ ಅಂಬರೀಶ್ ನಿಧನರಾದಾಗ ಇಡಿ ಮಂಡ್ಯವೇ ಶೋಕದಲ್ಲಿ ಮುಳುಗಿತ್ತು. ರಾಜಕೀಯವಾಗಿ ಅಂಬರೀಶ್‍ಗೆ ಅಸ್ತಿತ್ವವನ್ನು ಭವಿಷ್ಯವನ್ನು ನೀಡಿದ್ದ ಮಂಡ್ಯದ ಜನರು ಅಕ್ಷರಷಃ ನಾಯಕನನ್ನು ಕಳೆದುಕೊಂಡು ಕಣ್ಣೀರಾಗಿದ್ದರು. ಈ ವೇಳೆ ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಬೇಕೆ ಬೇಡವೇ ಎಂಬ ಚರ್ಚೆಯೂ ಆರಂಭವಾಗಿತ್ತು. 

ಭದ್ರತೆಯ ಕಾರಣದಿಂದ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದು ಬೇಡ ಎಂಬ ಮಾತು ಕೇಳಿಬಂದಿತ್ತು. ಈ ವೇಳೆ ಕರ್ತವ್ಯದಂತೆ ಅಂಬರೀಶ್ ನಿಧನದ ವಿಚಾರಕ್ಕೆ ಸ್ಪಂದಿಸಿದ ಕುಮಾರಸ್ವಾಮಿ, ಯಾವುದೇ ವಿವಾದವಿಲ್ಲದೇ, ಅಂಬರೀಶ್ ಅಂತ್ಯಸಂಸ್ಕಾರಕ್ಕೆ ಜಾಗ ಒದಗಿಸಿದ್ರು. ಅಷ್ಟೇ ಅಲ್ಲ ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ಕೊಂಡ್ಯೊಯ್ದು ಅಭಿಮಾನಿಗಳ ದರ್ಶನಕ್ಕೂ ವ್ಯವಸ್ಥೆ ಕಲ್ಪಿಸಿದ್ದರು. ತಕ್ಷಣಕ್ಕೆ ಇದು ಸಿಎಂ ಆಗಿ ಕುಮಾರಸ್ವಾಮಿ ತಮ್ಮ ಕರ್ತವ್ಯ ಮಾಡಿದ್ರೂ ಅನ್ನೋ ಅರ್ಥವನ್ನು ಕೊಟ್ಟರೂ ಅಲ್ಲಿ ಕುಮಾರಸ್ವಾಮಿಯವರ ರಾಜಕೀಯ ಲೆಕ್ಕಾಚಾರ ಬೇರೆಯೇ ಇತ್ತು. 

ಕುಮಾರಸ್ವಾಮಿ ಲೋಕಸಭೆ ಚುನಾವಣೆಯ ಸಿದ್ಧತೆಯಲ್ಲಿ ಅದಾಗಲೇ ತೊಡಗಿಬಿಟ್ಟಿದ್ದರು. ರೇವಣ್ಣ ಪುತ್ರನಿಗೆ ಹಾಸನದಲ್ಲಿ ಸೀಟು ಕೊಡ್ತಾರೆ ದೊಡ್ಡಗೌಡ್ರು ಅಂತ ಗೊತ್ತಾದಾಗಲೇ, ತಮ್ಮ ಮಗನಿಗೂ ಮಂಡ್ಯದಲ್ಲಿ ಸೀಟು ಫಿಕ್ಸ್ ಮಾಡಿಸಿಕೊಂಡಿದ್ರು. ಹೀಗೆ ಚೊಚ್ಚಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂಧಾಗಿದ್ದ ಮಗನ ರಾಜಕೀಯ ಭವಿಷ್ಯವನ್ನು ಹಸನಾಗಿಸಲು ಸಿಎಂ ಅಂಬರೀಶ್ ಸಾವನ್ನು ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದಂತಿತ್ತು.

ಕುಮಾರಸ್ವಾಮಿಯವರಿಗೆ ಸುಮಲತಾ ಅಂಬರೀಶ್ ರಾಜಕೀಯಕ್ಕೆ ಬರಬಹುದೆಂದ ಸಣ್ಣ ಕಲ್ಪನೆಯೂ ಇರಲಿಲ್ಲ. ಅಂಬರೀಶ್ ನಿಧನದ ವೇಳೆ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಸುಮಲತಾ ಹಾಗೂ ಅಭಿಷೇಕ ಅಂಬರೀಶ್ ತಮ್ಮ ಮಗನ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಇದರಿಂದ ಅಪಾರ ಪ್ರಮಾಣದಲ್ಲಿರುವ ಅಂಬರೀಶ್ ಅಭಿಮಾನಿಗಳು  ನಿಖಿಲ್ ಕುಮಾರಸ್ವಾಮಿಯವರನ್ನು ಬೇಷರತ್ತಾಗಿ ಬೆಂಬಲಿಸುತ್ತಾರೆ ಎಂದು ಕುಮಾರಸ್ವಾಮಿ ಲೆಕ್ಕಾಚಾರ ಹಾಕಿದ್ದರು. 

ಆದರೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸುಮಲತಾ ಸ್ವತಃ ಸ್ಪರ್ಧೆಗೆ ಮುಂದಾಗಿರೋದು ಸಿಎಂ ಕುಮಾರಸ್ವಾಮಿ ಪಾಲಿಗೆ ನುಂಗಲಾರದ ತುತ್ತಾಗಿದ್ದು, ತಮ್ಮ ಮಗನ ರಾಜಕೀಯ ಭವಿಷ್ಯಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿರೋದನ್ನು ಸಹಿಸೋಕೆ ಸಾಧ್ಯ ಆಗ್ತಿಲ್ಲ. ಅದೇ ಹತಾಶೆಯಲ್ಲೇ ಕುಮಾರಸ್ವಾಮಿ ಅಂಬರೀಶ್ ಪಾರ್ಥೀವ ಶರೀರದ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡು ತಮ್ಮ ಬುದ್ಧಿಮಟ್ಟವನ್ನು ಜಗಜ್ಜಾಹೀರು ಮಾಡಿದ್ದಾರೆ. ಜೆಡಿಎಸ್‍ನಿಂದ ಸುಮಲತಾರನ್ನು ಕಣಕ್ಕಿಳಿಸಬೇಕೆಂಬ ಕೆಲ ಕಾರ್ಯಕರ್ತರ ಒತ್ತಾಯವೂ ಕುಮಾರಸ್ವಾಮಿಯವರಿಗೆ ತಲೆನೋವಾಗಿ ಪರಿಣಮಿಸಿದ್ದು, ಮಗನನ್ನು ಬಿಟ್ಟುಕೊಡುವಂತಿಲ್ಲ, ತಮ್ಮ ಕೋಪವನ್ನು ತೋರಿಸಿಕೊಳ್ಳುವಂತಿಲ್ಲ ಎಂಬ ಸ್ಥಿತಿ ಇದೆ. ಆದರೂ ಮಾತೃಪ್ರೇಮವನ್ನು ತೋರಿರುವ ಕುಮಾರಸ್ವಾಮಿ ಮಗನಿಗಾಗಿ ಯಾರನ್ನು ಬೇಕಾದ್ರೂ ಎದುರು ಹಾಕಿಕೊಳ್ಳಲು ಸಿದ್ಧ ಎಂಬಂರ್ಥದಲ್ಲಿ ರಾಜಕಾರಣಕ್ಕೆ ಮುಂಧಾಗಿದ್ದಾರೆ. ಇದೇ ಕಾರಣಕ್ಕೆ, ಪತಿಯನ್ನು ಕಳೆದುಕೊಂಡು, ಪತಿಯ ಅಭಿಮಾನಿಗಳ ಆಶಯ ಈಡೇರಿಕೆಗೆ ರಾಜಕೀಯಕ್ಕೆ ಬರುತ್ತಿರುವ ಸುಮಲತಾರನ್ನು ಟೀಕಿಸೋದಿಕ್ಕೂ ಹಿಂಜರಿಯದಷ್ಟು ಭಂಡತನವನ್ನು ತೋರುತ್ತಿದ್ದಾರೆ ಕುಮಾರಸ್ವಾಮಿ. ಸುಮಲತಾ ಸ್ಪರ್ಧೆ ಖಚಿತವಾದಲ್ಲಿ ಅವರನ್ನು ಕಟ್ಟಿಹಾಕೋಕೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಯಾವ ಹಂತಕ್ಕೆ ಇಳಿಯೋದಿಕ್ಕೂ ಸಿದ್ಧ ಎಂಬಂತ ಸ್ಥಿತಿ ಇದ್ದು, ಏನಾಗುತ್ತೆ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Karnataka #Sumalatha #Mandya #Kumarswamy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ