ಬೃಹತ್ ಭಗವದ್ಗೀತೆ ನಾಳೆ ಲೋಕಾರ್ಪಣೆ

 Dedication of The Great Bhagavad Gita tomorrow

25-02-2019

ಅಂತಾರಾಷ್ಟ್ರೀಯ ಮಟ್ಟದಲ್ಲೂ  ಕೃಷ್ಣಭಕ್ತಿಯನ್ನು ಸಾರಿದ ಇಸ್ಕಾನ್ ಸಿದ್ಧಪಡಿಸಿರುವ ಬೃಹತ್ ಭಗವದ್ಗೀತಾ  ಗ್ರಂಥ ನಾಳೆ ಲೋಕಾರ್ಪಣೆಯಾಗಲಿದೆ.  670 ಪುಟಗಳಿರುವ 800 ಕೆಜಿ ತೂಕದ ಈ ಭಗವದ್ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಇಸ್ಕಾನ್ ದೇಗುಲ ಸಂಕೀರ್ಣದಲ್ಲಿ  ಲೋಕಾರ್ಪಣೆಗೊಳಿಸಲಿದ್ದಾರೆ. 

ಇಸ್ಕಾನ್ ಸಿದ್ದಪಡಿಸಿರುವ ಈ ಗ್ರಂಥ 2.8 ಮೀಟರ್ ಉದ್ದ, 2 ಮೀಟರ್ ಅಗಲವಿದೆ. ಅಲ್ಲದೆ ವಾಟರ್ ಪ್ರೂಫ್ ಸಿಂಥೆಟಿಕ್ ಹಾಳೆಗಳ ಮೇಲೆ 18 ಅತ್ಯುತ್ಕøಷ್ಠ ಚಿತ್ರಗಳು ಹಾಗೂ ಸುಂದರ ವಿನ್ಯಾಸವಿರುವ ಈ ಪುಸ್ತಕವನ್ನು ಇಟಲಿಯ ಮಿಲಾನ್‍ನಲ್ಲಿ ಮುದ್ರಿಸಲಾಗಿದೆ. 

ಈ ಗ್ರಂಥದ ಮುದ್ರಣ ಸೇರಿ ಒಟ್ಟು 1.5 ಕೋಟಿ ರೂಪಾಯಿ ವೆಚ್ಚವಾಗಿದ್ದು, ಇದಕ್ಕೆ ವಿವಿಧ ದೇಶಗಳ ದಾನಿಗಳು ನೆರವು ನೀಡಿದ್ದಾರೆ. ವಿಶ್ವದಾದ್ಯಂತ ಹರೇಕೃಷ್ಣ ಚಳುವಳಿ ಎಂದೇ ಹೆಸರುವಾಸಿಯಾಗಿರುವ ಇಸ್ಕಾನ್‍ನ ಅಧ್ವರ್ಯ ಭಕ್ತಿ ವೇದಾಂತ ಪ್ರಭುಪಾದರ ಜನಪ್ರಿಯ ಕೃತಿ ಭಗ್ದವದ್ಗೀತಾ ಯಥಾರೂಪ ಪ್ರಕಟಗೊಂಡು 2018 ಕ್ಕೆ 50 ವರ್ಷಗಳಾಗಿವೆ. 

ಈ ವೇಳೆ ಪ್ರಭುಪಾದರ ಕೃತಿಯ ಹಿರಿಮೆಯನ್ನು  ಜಗತ್ತಿಗೆ ಸಾರುವ ವಿನೂತನ ಬಗೆಯ ಬಗ್ಗೆ ಚಿಂತನೆ ನಡೆಸಿದ್ದಾಗ ಈ ಗ್ರಂಥ ರೂಪಿಸುವ ಕಲ್ಪನೆ ಮೂಡಿತು ಎಂದು ವಿವರಣೆ ನೀಡುತ್ತಾರೆ, ವೇದಾಂತ ಬುಕ್ ಟ್ರಸ್ಟ್‍ನ ಮಧ್ಯಪ್ರಾಚ್ಯ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಮಧುಸೇವಿತ್ ದಾಸ್. ಸ್ಕ್ರೂಗಳಿಂದ ಭದ್ರಗೊಳಿಸಿದ ಕಾರ್ಬನ್ ಫೈಬರನ್ ರಕ್ಷಾಪುಟವನ್ನು ಜಪಾನ್ ತಂತ್ರಜ್ಞಾನ ಪುಸ್ತಕಕ್ಕೆ ಹೊದೆಸಲಾಗಿದೆ. 

ರಕ್ಷಾ ಪುಟದ ಮೇಲಿರುವ ಕೃಷ್ಣಾರ್ಜುನರ ಆಕರ್ಷಕವಾದ ವರ್ಣಚಿತ್ರವನ್ನು ಚಿನ್ನ-ಬೆಳ್ಳಿಯಂತಹ ಲೋಹಗಳು ಮತ್ತು ಹರಳುಗಳಿಂದ  ಅಲಂಕರಿಸಲಾಗಿದೆ. ಮುಂದೆ ಇದೇ ರಕ್ಷಾಪುಟವನ್ನು ಬಳಸಿಕ ಇತರ ಸಣ್ಣ ಸಣ್ಣ ಪುಸ್ತಕಗಳನ್ನು ಹೊರತರುವ ಆಲೋಚನೆ ಇಸ್ಕಾನಿದೆ. ಒಟ್ಟಿನಲ್ಲಿ ಬೃಹತ್ ಭಗ್ದವವದ್ಗೀತೆಯೊಂದು  ರಾಷ್ಟ್ರಕ್ಕೆ ಸಮರ್ಪಣೆಯಾದಂತಾಗಿದೆ. 


ಸಂಬಂಧಿತ ಟ್ಯಾಗ್ಗಳು

#Bhagavad Gita #Iskcon #Dehli #Narendra Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ