ವಿಧಾನಸೌಧ ಹೆಸರಿನಲ್ಲಿ ಮತ್ತೊಂದು ವಂಚನೆ 

Another fraud in the name of Vidhansoudha

25-02-2019

ವಿಧಾನಸೌಧದಲ್ಲಿ ಅಧಿಕಾರಿಗಳ ಬಳಕೆಗೆ ಇನ್ನೋವಾ ಕಾರುಗಳು ಬಾಡಿಗೆ ಬೇಕಾಗಿದ್ದು ತಿಂಗಳಿಗೆ 30 ಸಾವಿರ ರೂ. ನೀಡುವುದಾಗಿ ನಂಬಿಸಿ ವಂಚನೆ ನಡೆಸಿರುವ ಸಂಬಂಧ ಆರ್‍ಎಂಸಿ ಯಾರ್ಡ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ತಲಾ ಮೂರು ಲಕ್ಷದಂತೆ  15 ಮಂದಿ ಚಾಲಕರಿಂದ 45 ಲಕ್ಷ ರೂಗಳನ್ನು ಪಡೆದು ವಂಚನೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಸಿ ರಾಜಪ್ಪ ಆರ್‍ಎಂಸಿ ಪೆÇಲೀಸ್ ಠಾಣೆಯಲ್ಲಿ ಕೃಷ್ಣ, ಮಂಜುನಾಥ್, ಸಂಪತ್ ಎಂಬ ಆರೋಪಿಗಳ ವಿರುದ್ದ ದೂರು ನೀಡಿದ್ದಾರೆ.

ರಾಜಪ್ಪ ಮನೆಯಲ್ಲಿ ಬಾಡಿಗೆಗಿದ್ದ  ಆರೋಪಿ ಕೃಷ್ಣ ಎಂಬಾತ ನಿಮ್ಮ ಕಾರನ್ನು ವಿಧಾನಸೌಧಕ್ಕೆ ಬಾಡಿಗೆಗಾಗಿ ಆಡಳಿತ ಮತ್ತು ಸಿಬ್ಬಂದಿ ನಿರ್ವಹಣಾ ಇಲಾಖೆಗೆ  ಅಟ್ಯಾಚ್ ಮಾಡಿಸಿದರೆ ನಿಮಗೆ ತಿಂಗಳಿಗೆ 34 ಸಾವಿರ ರೂ. ಸಿಗಲಿದೆ ಎಂದು ಆಮಿಷ ಹಾಕಿದ್ದಾರೆ.

ಇದನ್ನು ನಂಬಿ ಅವರು ಹಣ ಕಟ್ಟಿದ್ದಾರೆ. ಇದೇ ವೇಳೆ ಇನ್ನಷ್ಟು ಕಾರು ಬಾಡಿಗೆ ದೊರಕುವಂತೆ ಮಾಡಿದರೆ ಅವರಿಗೂ ಹಣ ನೀಡುವುದಾಗಿ ನಂಬಿಸಿದ್ದಾನೆ. ಈ ಮಾತನ್ನು ನಂಬಿ 15 ಮಂದಿ ಚಾಲಕರನ್ನು ಸಂಪರ್ಕಿಸಿ ಅವರಿಂದ ತಲಾ ಒಬ್ಬ ವ್ಯಕ್ತಿಗೆ ಮೂರು ಲಕ್ಷ ರೂ.ನಂತೆ 45 ಲಕ್ಷ ರೂ. ಹಣ ಕಟ್ಟಿಸಿಕೊಂಡಿದ್ದಾರೆ. ಈವರೆಗೂ ಯಾವುದೇ ರೀತಿಯ ಬಾಡಿಗೆ ಹಣ ನೀಡದೆ ಮೋಸ ಮಾಡಿದ್ದಾರೆ ಎಂದು ರಾಜಪ್ಪ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಆರ್‍ಎಂಸಿ ಯಾರ್ಡ್ ಪೆÇಲೀಸರು ಹೇಳುವುದೇ ಬೇರೆಯಾಗಿದೆ. ದೂರು ನೀಡಿರುವ ರಾಜಪ್ಪನೇ ಆರೋಪಿಯಾಗಿದ್ದು, ಹಣ ವಂಚನೆ ಕೇಸ್‍ನಲ್ಲಿ ಈ ಹಿಂದೆ ಈತನ ಪತ್ನಿ ಜೈಲು ಸೇರಿದ್ದರು. ಈತನ ವಿರುದ್ಧ ಪ್ರಕರಣ ದಾಖಲಿಸಿದ್ದು, ಸದ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗಿದ್ದಾನೆ ಎಂದು ತಿಳಿಸಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

#VidhanSoudha #Arrest #Cheating #Car


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ