ಪೈಲ್ವಾನ್‍ಗಾಗಿ ಬಂದ ಬಾಲಿವುಡ್ ಚೆಲುವೆ

 Bollywood Beauty  For Phailwan

25-02-2019

ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಚಿತ್ರ ಪೈಲ್ವಾನ್ ಗೆ ಬಾಲಿವುಡ್ ಸುಂದರಿಯೊಬ್ಬರು ಜೊತೆಯಾಗಿದ್ದಾರೆ. ಅರೇ ಇದೇನು ಬಿಡುಗಡೆ ಹೊತ್ತಿನಲ್ಲಿ ಬಾಲಿವುಡ್ ಬೆಡಗಿ ಚಿತ್ರತಂಡ ಸೇರ್ಕೋಂಡು ಏನು ಮಾಡ್ತಾರೆ ಅಂದ್ರಾ, ಬಾಲಿವುಡ್ ಬೆಡಗಿ ಪೈಲ್ವಾನ್ ಚಿತ್ರದ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ. 

ಪೈಲ್ವಾನ್ ಚಿತ್ರದ ಐಟಂ ಸಾಂಗ್‍ಗೆ ಬಾಲಿವುಡ್ ಬೆಡಗಿ  ಆಕಾಂಕ್ಷ ಸಿಂಗ್ ಹೆಜ್ಜೆ ಹಾಕಿದ್ದಾರೆ. ಮುಂಬಯಿನಲ್ಲಿ ಚಿತ್ರದ ಶೂಟಿಂಗ್ ನಡೆದಿದ್ದು, ಈ ಪೆಪ್ಪಿ ನಂಬರ್ ಹಾಡಿಗಾಗಿ ವಿಶೇಷ ಸೆಟ್‍ಗಳನ್ನು ಕೂಡ ಹಾಕಲಾಗಿದೆ. 

 ಏನು ಮಾಡಲಿ  ಹೊಡೀತು ಕಣ್ಣು ಎನ್ನುವ ಪಕ್ಕಾ ಐಟಂ ಸಾಂಗ್ ಸಾಹಿತ್ಯದ ಈ ಹಾಡಿನಲ್ಲಿ  ಕಿಚ್ಚ ಸುದೀಪ್ ಕೂಡ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ.  ಅಷ್ಟೇ ಕಿಚ್ಚನಿಗಾಗಿ ವಿಶೇಷ ವಿನ್ಯಾಸದ ಡ್ರೆಸ್‍ಗಳನ್ನು ಸಿದ್ಧಪಡಿಸಲಾಗಿದೆ. 

ಆಕಾಂಕ್ಷ್ ಸಿಂಗ್ ಮೈ ಬಳುಕಿಸಿರುವ ಈ ಹಾಡಿಗಾಗಿ  ಬಾಲಿವುಡ್‍ನ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ನೃತ್ಯ ಸಂಯೋಜನೆ ಮಾಡಿದ್ದಾರೆ.  ಈ ಹಾಡನ್ನು ಸುಂದರವಾಗಿ ಚಿತ್ರಿಸುವ ಉದ್ದೇಶದಿಂದ ಆಕಾಂಕ್ಷ್‍ಗೂ ಸ್ಪೆಶಲ್ ಕಾಸ್ಟ್ಯೂಮ್ ರೆಡಿ ಮಾಡಿಸಲಾಗಿದೆ. ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಅಪ್ಪಟ ಗ್ರಾಮೀಣ ಪ್ರದೇಶದ ಕ್ರೀಡೆಯೊಂದನ್ನು ಆಧರಿಸಿ ಸಿದ್ಧವಾಗುತ್ತಿರುವ ಸಿನಿಮಾ. 


ಸಂಬಂಧಿತ ಟ್ಯಾಗ್ಗಳು

# Phailwan #Akanksha singh #Movie #Sudeep


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ