ಬಿಜೆಪಿಯಲ್ಲಿ 75 ಕ್ಕೆ ನಿವೃತ್ತಿ  ಕಡ್ಡಾಯವೇ? 

 Should BJP Leaders Retire at 75?

23-02-2019

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಈ ಬಾರಿ  ಎಷ್ಟು ಜನರಿಗೆ ನಿವೃತ್ತಿ ಭಾಗ್ಯ ಸಿಗಬಹುದೆಂಬ ಚರ್ಚೆ ಆರಂಭವಾಗಿದೆ. ಇದಕ್ಕೆ ಕಾರಣ ಬಿಜಪಿಯೇ ರೂಪಿಸಿದ ನೀತಿ. ಹೌದು ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 75 ವರ್ಷ ದಾಟಿದ ರಾಜಕಾರಣಿಗಳಿಗೆ ಕಡ್ಡಾಯ ನಿವೃತ್ತಿ ನೀಡಲಿದ್ದು, ಪಕ್ಷದಲ್ಲಿ ಹೊಸಬರಿಗೆ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದಿತ್ತು. ಹೀಗಾಗಿ ಬಿಜೆಪಿಯಿಂದ ನಿವೃತ್ತಿಯಾಗುವ ರಾಜಕಾರಣಿಗಳ್ಯಾರು ಎಂಬ ಚರ್ಚೆ ಆರಂಭವಾಗಿದೆ.

ಕಳೆದ  2018 ರ ವಿಧಾನಸಭಾ  ಚುನಾವಣೆ ವೇಳೆಯಲ್ಲೂ  ಬಿಜೆಪಿ  75 ವರ್ಷ ಮೀರಿದ ಯಾವುದೆ ರಾಜಕಾರಣಿಗೆ ಪಕ್ಷದ ಟಿಕೇಟ್ ನೀಡುವುದಿಲ್ಲ ಎಂಬ ವಿಚಾರ ಚರ್ಚೆಗೆ ಬಂದಿತ್ತು. 75 ವರ್ಷ ದಾಟಿದವರ ಬದಲಾಗಿ ಯುವಜನತೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿಕೊಂಡಿತ್ತು. ಈ ವೇಳೆ ಕೆಜೆಪಿಯಿಂದ ಬಿಜೆಪಿಗೆ ವಾಪಸ್ಸಾಗಿದ್ದ ಬಿ.ಎಸ್.ಯಡಿಯೂರಪ್ಪನವರಿಗೂ ಟಿಕೇಟ್ ನೀಡಬಾರದೆಂಬ ಒತ್ತಾಯ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಯಡಿಯೂರಪ್ಪನವರ ವಯಸ್ಸು. 

ಹೌದು 1943 ರಲ್ಲಿ ಜನಿಸಿದ ಯಡಿಯೂರಪ್ಪನವರಿಗೆ ಈಗ 76 ವರ್ಷ ವಯಸ್ಸು. ಚುನಾವಣೆ ವೇಳೆ ಅವರಿಗೆ 75 ವರ್ಷ ವಯಸ್ಸಾಗಿದ್ದರಿಂದ ಅವರನ್ನು ಚುನಾವಣೆಯಿಂದ ಹೊರಗಿಡಬೇಕೆಂಬ ಆಗ್ರಹ ವ್ಯಕ್ತವಾಗಿತ್ತು. ಕೊನೆಯಲ್ಲಿ ಚರ್ಚೆ ನಡೆಸಿ ಚುನಾವಣೆ ವೇಳೆ ಯಡಿಯೂರಪ್ಪನವರಿಗೆ 74 ವರ್ಷ ವಯಸ್ಸಾಗಿದೆ ಎಂದು ವಾದಿಸಿ ಟಿಕೇಟ್ ನೀಡಲಾಗಿತ್ತು. ಆದರೆ ಹಲವರು ನಾಯಕರಿಗೆ ಇದೇ ಕಾರಣಕ್ಕೆ ಟಿಕೇಟ್ ನೀಡದ ಬಿಜೆಪಿ ಹಲವರ ಅಸಮಧಾನಕ್ಕೆ ಗುರಿಯಾಗಿತ್ತು. 

ಇದೀಗ ಮತ್ತೊಮ್ಮೆ ಲೋಕಸಭಾ ಚುನಾವಣೆ ಎದುರಾಗಿದ್ದು, ಪಕ್ಷಕ್ಕಾಗಿ ದುಡಿದು ಈಗ ವೃದ್ಧಾಪ್ಯದ ಅಂಚಿನಲ್ಲಿರುವ ನಾಯಕರಿಗೆ ನಡುಕ ಶುರುವಾಗಿದೆ. ಈಗಾಗಲೇ ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಷಿ, ಕಾಲರಾಜ್ ಮಿಶ್ರಾ, ಸುಮಿತ್ರಾ ಮಹಾಜನ್,  ಹುಕುಂ ದೇವ್ ನಾರಾಯಣ ಸಿಂಗ್ ಯಾದವ್ ರನ್ನು ಚುನಾವಣೆಯಿಂದ ಹೊರಗಿಡಲಾಗಿದ್ದು, ಯಾವುದೇ ಚುನಾವಣೆಗೂ ಟಿಕೇಟ್ ನೀಡದಿರಲು ನಿರ್ಧರಿಸಲಾಗಿದೆ. ಇದು ಈ ಹಿರಿಯ ನಾಯಕರು ಹಿಡಿತ ಹೊಂದಿರುವ ಗುಜರಾತ, ಮಧ್ಯಪ್ರದೇಶ,ಬಿಹಾರದಂತಹ ರಾಜ್ಯಗಳ ಬಿಜೆಪಿ ಪ್ರಾಬಲ್ಯದ ಮೇಲೆ ಪರಿಣಾಮ  ಬೀರಿದೆ.  

ಈ 75 ವರ್ಷದ ಸ್ಟ್ಯಾಟಜಿಯನ್ನು ಬಿಜೆಪಿ ಪಕ್ಕಾ ಚುನಾವಣೆ ಗಿಮಿಕ್ ಆಗಿ ಬಳಸಿಕೊಳ್ಳಲು ಸಜ್ಜಾಗಿತ್ತು. ಆದರೆ ಈಗ ಬಿಜೆಪಿಯ ತೀರ್ಮಾನವೇ ಪಕ್ಷದ ಪಾಲಿಗೆ ಮುಳುವಾಗಿದ್ದು, ಚುನಾವಣೆ ಆರಂಭವಾಗುತ್ತಿದ್ದಂತೆ ಯಾರು ಯಾರಿಗೆ ಟಿಕೇಟ್ ಇಲ್ಲ ಅನ್ನೋ ಚರ್ಚೆಯೂ ರಂಗೇರತೊಡಗಿದೆ. ಒಂದೊಮ್ಮೆ ಬಿಜೆಪಿ 75 ವರ್ಷ ದಾಟಿದ ಪಕ್ಷದ ರಾಜಕಾರಣಿಗೇ ಟಿಕೇಟ್ ನೀಡಿದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‍ಗೆ  ಒಂದು ಅಸ್ತ್ರ ಸಿಕ್ಕಂತಾಗಲಿದೆ. 

ಇನ್ನು ಬಿ.ಎಸ್‍ಯಡಿಯೂರಪ್ಪನವರಿಗೆ 2018 ರ ಚುನಾವಣೆಯೇ ಕೊನೆಯ ಚುನಾವಣೆಯಾಗಿರೋದರಿಂದಲೇ ಅವರು  ಅಧಿಕಾರ ಪಡೆಯಲು ಹಪಾಹಪಿ ನಡೆಸಿದ್ದು, ಮತ್ತೆ ಮತ್ತೆ ಆಫರೇಶನ್ ಕಮಲಕ್ಕೆ ಮುಂಧಾಗುತ್ತಿರೋದು ಇದೇ ಕಾರಣಕ್ಕೆ ಅಂತಿದ್ದಾರೆ ಅವರ ಆಪ್ತರು. ಈ ಐದು ವರ್ಷದ ಕಾಲಾವಧಿಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗದೇ ಹೋದಲ್ಲಿ ಮತ್ತೆಂದೂ ಅವರಿಗೆ ಅವಕಾಶವಿಲ್ಲ. ಹೀಗಾಗಿ ಅವರು ಶತಾಯ ಗತಾಯ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿ ಏರಲೇಬೇಕೆಂದು ಹಗಲಿರುಳು ಶ್ರಮಿಸುತ್ತಿದ್ದಾರೆ.
ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ನೋಡೋದಾದರೇ ಈ 75 ವರ್ಷ ನೀತಿ ಇಲ್ಲಿನ ರಾಜಕಾರಣದ ಮೇಲೆ ಅಂತಹ ಪ್ರಭಾವ ಬೀರೋದು ಅನುಮಾನ. ಯಾಕೆಂದರೆ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೊರತು ಪಡಿಸಿದರೇ,  ಪ್ರಸ್ತುತ ರಾಜ್ಯ ಬಿಜೆಪಿಯ ಟಿಕೇಟ್ ಆಕಾಂಕ್ಷಿಗಳೆಲ್ಲರೂ 75 ರ ಗಡಿಯೊಳಗಿನವರೇ ಆಗಿರೋದರಿಂದ ಬಿಜೆಪಿ ಅಸಮಧಾನದ ಅಲೆಗಳಿಂದ ಬಚಾವಾಗಿದೆ.ಆದರೆ ಕೇಂದ್ರದಲ್ಲಿ ಈ ಬಾರಿಯೂ ಬಿಜೆಪಿ ಲಿಮಿಟ್ 75 ನಿಂದ ಒಂದಷ್ಟು ಅಂತಃಕಲಹವನ್ನು ಎದುರಿಸೋದು ಅನಿವಾರ್ಯವಾಗಲಿದೆ. 


ಸಂಬಂಧಿತ ಟ್ಯಾಗ್ಗಳು

#BJP #Retire #Karnataka #75


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇದು ನಮ್ಮ ಕರ್ನಾಟಕದ ರಾಜಕಾರಣದಲ್ಲಿ ಅಸಾದ್ಯದ ಮಾತು.
  • ಜಗದೀಶ
  • ೩೭