ಭಾರತಕ್ಕೆ ಪಾಕ್ ತಿರುಗೇಟು

 Pakistan tossed into India

22-02-2019

ಯೋಧರ ಮೇಲೆ ಪ್ರಾಣಘಾತಕ ದಾಳಿ ನಡೆಸಿದ ಪಾಕಿಸ್ತಾನ್‍ಕ್ಕೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ  ಪಾಕಿಸ್ತಾನಕ್ಕೆ ನದಿ ನೀರು ಹರಿಯುವುದನ್ನು ನಿಲ್ಲಿಸಿ, ನದಿ ತಿರುವು ಜಾರಿ ಮಾಡಲು ಭಾರತ ಚಿಂತನೆ ನಡೆಸುತ್ತಿರುವುದಾಗಿ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಆದರೆ ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನಕೈಗೊಳ್ಳುವ ಮುನ್ನವೇ ಪಾಕಿಸ್ತಾನ್ ಭಾರತದ ಈ ನಿರ್ಧಾರದಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂಬ ದುರಂಹಕಾರದ ಹೇಳಿಕೆ ನೀಡಿದೆ. 

1960 ರ ಸಿಂಧೂ ಜಲ ಒಪ್ಪಂದದಂತೆ  ಝೇಲಂ ಮತ್ತು ಚೆನಾಬ್ ಎರಡು ನದಿಗಳನ್ನು ಪಶ್ಚಿಮದ ನದಿಗಳು ಎಂದು ಪರಿಗಣಿಸಲಾಗಿದ್ದು, ಈ ಎರಡು ನದಿಗಳ ನೀರನ್ನು ಪಾಕಿಸ್ತಾನಕ್ಕೆ ಯಾವುದೆ ಷರತ್ತು ಇಲ್ಲದೆ ಬಳಸಲು ಅವಕಾಶ  ಕಲ್ಪಿಸಲಾಗಿತ್ತು.  

ಆದರೆ ಇದೀಗ ಪುಲ್ವಾಮಾದಲ್ಲಿ ನಡೆದ ವಿದ್ವಂಸಕ ಕೃತ್ಯದ ನಂತರ ಭಾರತ ಈ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸುವುದನ್ನು ನಿಲ್ಲಿಸುವ ಕುರಿತು ಚರ್ಚೆ ಆರಂಭಿಸಿತ್ತು. ಆದರೆ ಈ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿರುವಾಗಲೇ ಪಾಕ್ ಉದ್ಧಟತನ ಮೆರೆದಿದ್ದು, ಭಾರತದ ನೀರು ನಿಲ್ಲಿಸುವ ನಿರ್ಧಾರದಿಂದ ನಮಗೆ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ. 

ಪಾಕಿಸ್ತಾನದ ಜಲಸಂಪನ್ಮೂಲ ಇಲಾಕೆಯ ಕಾರ್ಯದರ್ಶಿ ಖವಾಜಾ ಶುಮೈಲ್ ಡಾನ್ ಪತ್ರಿಕೆಗೆ ನೀಡಿದ  ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು,  ನಾವು ಸಿಂಧು ನದಿ ಒಪ್ಪಂದಕ್ಕೆ ಬದ್ಧರಾಗಿದ್ದೇವೆ.  ಒಂದು ವೇಳೆ ಪಶ್ಚಿಮದ ನದಿಗಳಾದ ಛೆನಾಬ್,ಸಿಂಧು,ಝೇಲಂ ನದಿಗಳ ತಂಟೆಗೆ ಬಂದೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. 

ಕಣಿವೆ ರಾಜ್ಯದ ಪ್ರಮುಖ ನದಿಗಳ ಪೈಕಿ ಸಟ್ಲೆಜ್, ಬೀಯಸ್,ರಾವಿ ಭಾರತಕ್ಕೆ ಸಿಕ್ಕಿದೆ.  ಇನ್ನು ಝೇಲಂ ಹಾಗೂ ಇಂಡಸ್ ಪಾಕಿಸ್ತಾನ್‍ಕ್ಕೆ ಸಿಗಲಿದೆ. ಶೇ 94 ರಷ್ಟು ಜಲಸಂಪತ್ತು ಭಾರತದಲ್ಲಿ ಬಳಕೆಯಾದರೆ ಉಳಿದ ಪಾಲು ಪಾಕಿಸ್ತಾನಕ್ಕೆ ಹರಿಯಲಿದೆ.  ಆದರೆ ಈಗ ಭಾರತ ಉಳಿದ ನೀರಿನ ಮೇಲೂ ಪ್ರಭುತ್ವ ಸಾಧಿಸಿ ಪಾಕ್‍ಗೆ ಬುದ್ಧಿ ಕಲಿಸಲು ಮುಂದಾಗಿದೆ. 


ಸಂಬಂಧಿತ ಟ್ಯಾಗ್ಗಳು

#River #Pakistan #Water #India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ