ಮಹಿಳಾ ಆಯೋಗಕ್ಕೆ ಬಂದ ನಟ ದುನಿಯಾ ವಿಜಯ್

Actor Duniya Vijay arrives at the women

22-02-2019

ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಧಿಸಿದಂತೆ ನಟ ದುನಿಯಾ ವಿಜಯ್ ಅವರು ಶುಕ್ರವಾರ ವಿಚಾರಣೆಗಾಗಿ ಮಹಿಳಾ ಆಯೋಗದ ಮುಂದೆ ಹಾಜರಾದರು.

ಮಹಿಳಾ ಆಯೊಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರ ಮುಂದೆ ಹಾಜರಾದ ವಿಜಯ್ ಅವರು ಸುಮಾರು 1 ಗಂಟೆಗೂ ಹೆಚ್ಚು ಕಾಲ ನಡೆಸಿದ ವಿಚಾರಣೆಯಲ್ಲಿ ಯಾವ ಕಾರಣಕ್ಕೂ ಪತ್ನಿ ನಾಗರತ್ನ ಜೊತೆ ಬಾಳಲು ಸಾಧ್ಯವಿಲ್ಲ.ಆದರೆ ಮಕ್ಕಳ ಜವಾಬ್ದಾರಿ ನನ್ನದು ಎಂದು ವಿಜಯ್ ಹೇಳಿದ್ದಾರೆ.

ವಿವಾಹವಾಗಿ ಮೂವರು ಮಕ್ಕಳಿದ್ದರೂ ನನ್ನನ್ನು ಬಿಟ್ಟು ಬೇರೊಬ್ಬಳನ್ನು ದುನಿಯಾ ವಿಜಯ್ ವಿವಾಹವಾಗಿ ಆನ್ಯಾಯ ಮಾಡಿದ್ದಾರೆ ಎಂದು ಮೊದಲ ಪತ್ನಿ ನಾಗರತ್ನ ವಿಜಯ್ ವಿರುದ್ಧ ದೂರು ನೀಡಿದ್ದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್,  ಘಟನೆ ಸಂಬಂಧ ಮಹಿಳಾ ಆಯೋಗದವರು ಕೆಲವೊಂದು ದಾಖಲೆಗಳನ್ನು ಕೇಳಿದ್ದಾರೆ. ಅವರು ಕೇಳಿದ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಸಲ್ಲಿಸುತ್ತೇನೆ. ಪ್ರಕರಣ ಕೋರ್ಟಿನಲ್ಲಿ ಇರುವುದರಿಂದ ವೈಯಕ್ತಿಕ ಮಾಹಿತಿ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕೂಡಾ ತನಿಖೆಗೆ ಕರೆದರೆ ಖಂಡಿತ ಸಹಕರಿಸುತ್ತೇನೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Duniya Vijay #Nagrathna #Womans Comission #Enquiry


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ