ರೇಲ್ವೈ ನಿಲ್ದಾಣಕ್ಕೆ ಬಾಂಬ್ ಕರೆ 

Bomb Call  to the railway station

22-02-2019

ರಾಜ್ಯದ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ರೈಲ್ವೆ ನಿಯಂತ್ರಣ ಕೇಂದ್ರಕ್ಕೆ  ಬೆದರಿಕೆ ಕರೆ ಬಂದಿದ್ದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ರೈಲ್ವೆ ನಿಲ್ದಾಣಗಳನ್ನು ತಪಾಸಣೆ ನಡೆಸಲಾಗಿದೆ.

ನಗರದ ಕೇಂದ್ರ ರೈಲ್ವೆ ನಿಯಂತ್ರಣ ಕೊಠಡಿಗೆ ಗುರುವಾರ ಮಧ್ಯರಾತ್ರಿ 1.30ರ ವೇಳೆಗೆ ಕರೆಮಾಡಿದ ಅನಾಮಧೇಯ ವ್ಯಕ್ತಿಯೊಬ್ಬ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಇಟ್ಟು  ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ಕರೆ ಸ್ಥಗಿತ ಗೊಳಿಸಿದ್ದಾನೆ.

ಕೂಡಲೇ ಬೆಂಗಳೂರು, ಮೈಸೂರು, ಚಾಮರಾಜನಗರ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ತುಮಕೂರು, ರಾಯಚೂರು, ಮಂಗಳೂರು ಸೇರಿದಂತೆ, ರಾಜ್ಯದ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮುಂಜಾನೆವರೆಗೆ ತಪಾಸಣೆ ನಡೆಸಿದೆಯಾದರೂ ಎಲ್ಲಿಐ ಬಾಂಬ್ ಪತ್ತೆಯಾಗಿಲ್ಲ

ಯಾವುದೇ ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್ ಆಗಲಿ, ಇನ್ನಿತರ ಸ್ಫೋಟಕವಾಗಲಿ ಪತ್ತೆಯಾಗಿಲ್ಲ. ಇದೊಂದು ಹುಸಿಕರೆಯಾಗಿದ್ದು, ಕರೆ ಮಾಡಿದ ವ್ಯಕ್ತಿಗಾಗಿ ಪ್ರಕರಣ ದಾಖಲಿಸಿರುವ ರೈಲ್ವೆ ಪೆÇಲೀಸರು ತೀವ್ರ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Karnataka #Mysore #Bomb Call #Bangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ