ಪಾಕಿಸ್ತಾನ್‍ಕ್ಕೆ ಶಾಕ್ ನೀಡಿದ ರೈತರು

 Farmers Who Gave Shock to Pakistan

22-02-2019

ಪುಲ್ವಾಮಾ ದಾಳಿಗೆ ದೇಶ ಮಟ್ಟದಲ್ಲಿ ತಕ್ಕ ಉತ್ತರ ನೀಡಲು ಭಾರತ ಸಜ್ಜಾಗಿ ಪ್ಯ್ಲಾನ್ ರೂಪಿಸುತ್ತಿದ್ದರೇ ಅತ್ತ ಈ ದೇಶದ ರೈತರು ಪಾಪಿ ಪಾಕಿಸ್ತಾನಕ್ಕೆ  ಸರಿಯಾದ ಪಾಠ ಕಲಿಸಿದ್ದಾರೆ. ಪಾಕಿಸ್ತಾನಕ್ಕೆ ಪೊರೈಕೆಯಾಗುವ ಟೊಮೆಟೋ ರಫ್ತ್ ನ್ನು ರೈತರು ತಡೆಹಿಡಿದಿದ್ದಾರೆ. ಇದರಿಂದ ಪಾಕಿಸ್ತಾನದಲ್ಲಿ ಟೊಮೆಟೋ ಕೆಜಿಗೆ 180 ರೂಪಾಯಿ ದರ ತಲುಪಿದೆ. 

ಪಾಕಿಸ್ತಾನಕ್ಕೆ ಮಧ್ಯಪ್ರದೇಶದಿಂದ ಅಪಾರ ಪ್ರಮಾಣದ ಟೊಮೆಟೋ ರಫ್ತಾಗುತಿತ್ತು. ಆದರೆ ಪಾಕ್ ಬೆಂಬಲಿತ ಉಗ್ರರು ಪುಲ್ವಾಮಾದಲ್ಲಿ ದಾಳಿ ನಡೆಸಿದ ಬೆನ್ನಲ್ಲೇ ರೈತರು ತಮಗೆ ನಷ್ಟವಾದರೂ ಸರಿ ತಾವು ಬೆಳೆದ ಬೆಳೆಯನ್ನು ಪಾಕಿಸ್ತಾನಕ್ಕೆ ರಫ್ತು ಮಾಡೋದಿಲ್ಲ ಎಂದು ನಿರ್ಧರಿಸಿ ಮಾರಾಟ ನಿಲ್ಲಿಸಿದ್ದರು. ಹೀಗಾಗಿ ಅಗತ್ಯ ಪ್ರಮಾಣದ ಟೊಮೆಟೋ ಸಿಗದೆ ಪಾಕ್‍ನಲ್ಲಿ ಟೊಮೆಟೋ 180 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. 
 ಮಧ್ಯಪ್ರದೇಶ ಜಾಬುವಾದಿಂದ ಪಾಕ್‍ಗೆ ಟೊಮೆಟೋ ರವಾನೆಯಾಗುತ್ತಿತ್ತು. ಈ ಹಿಂದೆ ಉರಿಯಲ್ಲಿ ಉಗ್ರ ದಾಳಿ ನಡೆದಾಗಲೂ ರೈತರು ಟೊಮೆಟೋ ರಫ್ತು ನಿಲ್ಲಿಸಿದ್ದರು.  ರೈತರ ಈ ವಿನೂತನ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಪಾಕಿಸ್ತಾನ ಇದುವರೆಗೂ ಭಾರತದಿಂದಲೇ ಹೆಚ್ಚಿನ ಪ್ರಮಾಣದ ಟೊಮೇಟೋ ಆಮದು ಮಾಡಿಕೊಳ್ಳುತ್ತ ಬಂದಿತ್ತು. ಆದರೆ ಈಘ ರೈತರು ಟೊಮೆಟೋ ಪಾಕಿಸ್ತಾನಕ್ಕೆ ಮಾರಾಟ ಮಾಡಲು ಸಿದ್ಧವಿಲ್ಲ. 

ಭಾರತ ಕೂಡ ಪಾಕಿಸ್ತಾನದೊಂದಿಗೆ ತನ್ನ ಎಲ್ಲ ವ್ಯಾಪಾರ ಹಾಗೂ ವಾಣಿಜ್ಯ ಸಂಬಂಧಗಳನ್ನು ಕಡಿದುಕೊಂಡಿದೆ. ಇದರ ಬಿಸಿ ಪಾಕಿಸ್ತಾನಕ್ಕೆ ನಿಧಾರನಕ್ಕೆ ತಾಗತೊಡಗಿದೆ. ಪಾಕಿಸ್ತಾನದಲ್ಲಿ ದಿನಬಳಕೆ ವಸ್ತುಗಳ ಬೆಲೆ ನಿಧಾನಕ್ಕೆ ಏರತೊಡಗಿದೆ. ಕೇವಲ ಆಹಾರ ಪದಾರ್ಥ ಮಾತ್ರವಲ್ಲ, ಪಾಕಿಸ್ತಾನ್‍ದಿಂದ ಆಮದಾಗುತ್ತಿದ್ದ ಸಿಮೆಂಟ್ ಮೇಲೂ ಭಾರತ ನಿರ್ಬಂಧ ಹೇರಿದೆ. ಹೀಗಾಗಿ ಪಾಕಿಸ್ತಾನ ತನ್ನ ಭಯೋತ್ಪಾದನಾ ಚಟುವಟಿಕೆಯಿಂದ ಅಪಾರ ಪ್ರಮಾಣದ ನಷ್ಟ ಹಾಗೂ ಆರ್ಥಿಕ ಸಂಕಷ್ಟ ಎದುರಿಸುವ ಸ್ಥಿತಿ ಎದುರಾಗಿರೋದಂತು ಸುಳ್ಳಲ್ಲ. 


ಸಂಬಂಧಿತ ಟ್ಯಾಗ್ಗಳು

#pulwama #No Tomato #Terror Attack #Madhya Pradesh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ