ಆಸ್ಪತ್ರೆ ಸೇರಿದ ನಟಿ ವಿಜಯಲಕ್ಷ್ಮೀ 

 Actress Vijayalakshmi Enters Hospital

22-02-2019

 ಒಂದು ಕಾಲದಲ್ಲಿ ತೆರೆ ಮೇಲೆ ಹೀರೋಯಿನ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿದ್ದ  ನಟಿ ವಿಜಯಲಕ್ಷ್ಮೀ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಹಣವಿಲ್ಲದೇ ಚಿತ್ರರಂಗದ ಸಹಾಯ ಕೋರಿದ್ದಾರೆ. ಹೈಬಿಪಿ ಹಾಗೂ ತೀವ್ರ ಸುಸ್ತಿನಿಂದ ಬಳಲುತ್ತಿದ್ದ ವಿಜಯಲಕ್ಷ್ಮೀಯವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ವಿಜಯಲಕ್ಷ್ಮೀ  ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಕಳೆದ ಕೆಲದಿನಗಳಿಂದ ವಿಜಯಲಕ್ಷ್ಮೀಯವರ ತಾಯಿ ಅನಾರೋಗ್ಯಕ್ಕಿಡಾಗಿದ್ದರು. ಹೀಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ವಿಜಯಲಕ್ಷ್ಮೀ ತಾಯಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಈಗ ವಿಜಯಲಕ್ಷ್ಮೀ ಚಿಕಿತ್ಸೆಗೆ ಹಣವಿಲ್ಲದಂತಾಗಿದ್ದು, ಸಹಾಯ  ಕೋರಿದ್ದಾರೆ. 


ಒಂದು ಕಾಲದಲ್ಲಿ ಸ್ಯಾಂಡಲವುಡ್‍ನ ಬಹುಬೇಡಿಕೆಯ ನಟಿಯಾಗಿದ್ದ ವಿಜಯಲಕ್ಷ್ಮೀ ನಾಗಮಂಡಲ, ಜೋಡಿಹಕ್ಕಿ, ಭೂಮಿ ತಾಯಿಯ ಚೊಚ್ಚಲ ಮಗ , ಸ್ವಸ್ತಿಕ್, ಹಬ್ಬ,ಸೂರ್ಯವಂಶ್ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದರು.  ಕನ್ನಡದಲ್ಲಿ ಕೊನೆಯದಾಗಿ ನಾನಲ್ಲ ಚಿತ್ರದಲ್ಲಿ ನಟಿಸಿದ್ದ ವಿಜಯಲಕ್ಷ್ಮೀ ಕೆಲವು ವೈಯಕ್ತಿಕ ವಿಚಾರಗಳಿಂದ ಮುನಿಸಿಕೊಂಡು ತಮಿಳು ಚಿತ್ರರಂಗಕ್ಕೆ ವಲಸೆ ಹೋಗಿದ್ದರು. 


ಇದೀಗ ನಟನೆಯಿಂದ ದೂರ ಉಳಿದಿರುವ ವಿಜಯಲಕ್ಷ್ಮೀ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಕೌಟುಂಬಿಕ್ ಸಮಸ್ಯೆಗಳಿಂದ ವಿಜಯಲಕ್ಷ್ಮೀ ತಾಯಿ ಹಾಗೂ ಸಹೋದರಿಯನ್ನು ತಾವೆ ನೋಡಿಕೊಳ್ಳಬೇಕಾದ ಸ್ಥಿತಿ ಇದೆ. ಇದೀಗ ಸ್ವತಃ ವಿಜಯಲಕ್ಷ್ಮಿಯೇ ಅನಾರೋಗ್ಯಕ್ಕೆ ತುತ್ತಾಗಿರೋದರಿಂದ ಅವರ ಸಹೋದರಿ ಉಷಾದೇವಿ ಚಿತ್ರರಂಗದ ಸಹಾಯ ಕೋರಿದ್ದಾರೆ. ಸ್ಯಾಂಡಲವುಡ್ ಈಕೆಯ ಕಷ್ಟಕ್ಕೆ ಸ್ಪಂದಿಸಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Vijayalakshmi #Sandalwood #Hospital #Help


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ