ಮೋದಿಗೆ ಸಿಯೋಲ್ ಶಾಂತಿ ಪ್ರಶಸ್ತಿ 

Modi Receives Seoul Peace Prize

22-02-2019

ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಮೋದಿ, ಇದು ಭಾರತೀಯರಿಗೆ ಸಂದ ಗೌರವ ಎಂದಿದ್ದಾರೆ. ಅಲ್ಲದೆ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಂದುಗೂಡುವ ಸಮಯ ಬಂದಿದೆ. ಇದರಿಂದ ಮಾತ್ರ ನಾವು ಸಾಮರಸ್ಯವನ್ನು ಮೂಡಿಸಲು ಸಾಧ್ಯ ಎಂದಿದ್ದಾರೆ. 

ಇದು ದಕ್ಷಿಣಾ ಕೋರಿಯಾಗೆ ಮೋದಿಯವರ ಎರಡನೇ ಭೇಟಿಯಾಗಿದೆ. ಈ ಭೇಟಿ ವೇಳೆ ಉಭಯ ರಾಷ್ಟ್ರಗಳು,  ಮೂಲಸೌಕರ್ಯ ಅಭಿವೃದ್ಧಿ, ಮಾಧ್ಯಮ ಸ್ಟಾರ್ಟ್ ಅಪ್, ಗಡಿಯಾಚೆಗಿನ ಭಯೋತ್ಪಾದನೆ ನಿರ್ಮೂಲನೆ, ಅಪರಾಧ ಮತ್ತಿತರ ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ 7 ಮಹತ್ವದ ಒಪ್ಪಂದಗಳಿಗೆ ಮೋದಿ ಸಹಿ ಹಾಕಿದ್ದಾರೆ.
 
ಇದಲ್ಲದೇ ವ್ಯಾಪಾರು, ಹೂಡಿಕೆ, ರಕ್ಷಣೆ ಹಾಗೂ ಭದ್ರತೆ ಸೇರಿದಂತೆ  ಅನೇಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರದ ನಾಯಕರ ನಡುವೆ ರಚನಾತ್ಮಕ ಮಾತುಕತೆ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯಾಚಯ ಮಾಹಿತಿ ನೀಡಿದೆ. 


ಸಂಬಂಧಿತ ಟ್ಯಾಗ್ಗಳು

#World #Narendra Modi #Seoul # Peace Prize


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ