ಬಿಎಸ್‍ವೈಗೆ ರಿಲೀಫ್- ವಿಚಾರಣೆಗೆ ತಡೆ ನೀಡಿದ ಹೈಕೋರ್ಟ್ 

 Relief for BSY- The High Court forbid hearing

22-02-2019

2019 ರ ಲೋಕಸಭೆ ಚುನಾವಣೆ ವೇಳೆ  ಸಂಕಷ್ಟಕ್ಕೆ ಸಿಲುಕಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಆಫರೇಶನ್ ಕಮಲಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ಹಾಗೂ ಇತರರ ಮೇಲೆ ಕಲ್ಬುರ್ಗಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದ್ದು, ಬಿಎಸ್‍ವೈ ಸಧ್ಯಕ್ಕೆ ನಿರಾಳವಾದಂತಾಗಿದೆ. 

ಕಲ್ಬುರ್ಗಿಯ  ಜೆಡಿಎಸ್ ಶಾಸಕ ನಾಗನಗೌಡ್ ಕುಂದಕೂರು ಅವರ ಪುತ್ರ ಶರಣ್ ಗೌಡ್, ಬಿಎಸ್‍ವೈ ಆಪ್ತರು ನನಗೆ ಬಿಜೆಪಿಗೆ ಬರುವಂತೆ ಬೆದರಿಕೆ ಹಾಕಿದ್ದಾರೆ. ಹಣದ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿ ದೇವದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಈ ಪ್ರಕರಣ ದಾಖಲಿಸಿಕೊಂಡಿದ್ದ ದೇವದುರ್ಗ ಪೊಲೀಸರು ವಿಚಾರಣೆ ಆರಂಭಿಸಿದ್ದರು. 

ಇನ್ನು ಆರೋಪಿ ಸ್ಥಾನದಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಇತರರು ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠ ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿತ್ತು. 
ಇದೀಗ ಹೈಕೋರ್ಟ್ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ.
 
ಹೈಕೋರ್ಟ್ ಆದೇಶದಿಂದ ಯಡಿಯೂರಪ್ಪ ಮಾತ್ರವಲ್ಲದೇ  ಇತರ ಮೂವರು ಆರೋಪಿಗಳಾದ ಶಾಸಕ ಪ್ರೀತಂ ಗೌಡ್, ದೇವದುರ್ಗ ಶಾಸಕ ಶಿವನಗೌಡ್ ಎಫ್‍ಆಯ್‍ಆರ್‍ನಿಂದ ಪಾರಾಗಿದ್ದಾರೆ. ಯಡಿಯೂರಪ್ಪ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ಪಿಜಿಎಂ ಪಾಟೀಲ್ ಎಫ್‍ಆಯ್‍ಆರ್ ಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Karnataka #Highcourt #FIR #Bsy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ