ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶಗಳ ಮೇಲೆ ಚೀನಾ ಕಣ್ಣು !

Kannada News

06-06-2017

ನವದೆಹಲಿ:- ಪಾಕ್ ಆಕ್ರಮಿಯತ ಕಾಶ್ಮೀರದ ಪ್ರಮುಖವಾದ ಭಾಗಗಳಾದ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ನನ್ನು ಪಾಕಿಸ್ತಾನ ಚೀನಾ ಮತ್ತು ಅಲ್ಲಿನ ಕಂಪನಿಗಳಿಗೆ ಮಾರಲು ಹೊರಟಿರುವದನ್ನು ಖಂಡಿಸಿ ಅಲ್ಲಿನ ಸ್ಥಳೀಯರು ಪ್ರತಿಭಟಿಸುತ್ತಿದ್ದಾರೆ. ಪಾಕಿಸ್ತಾನವು ಚೀನಾ ಕಂಪನಿ ಮತ್ತು ರೆಡ್ ಆರ್ಮಿಗೆ ಭೂಮಿಯನ್ನು ಹಸ್ತಾಂತರಿಸುತ್ತಿರುವುದನ್ನು ತೀವ್ರವಾಗಿ ವಿರೋಧಿಸಲಾಗುತ್ತಿದೆ. ಚೀನಾ ಮತ್ತು ಪಾಕಿಸ್ತಾನದ ಆರ್ಥಿಕ ಯೋಜನೆಗೆ ಪಾಕಿಸ್ತಾನವು ಅಲ್ಲಿನ ಸ್ಥಳೀಯರಿಂದ ಒತ್ತಾಯ ಪೂರ್ವಕವಾಗಿ ಭೂಮಿಯನ್ನು ಕಸಿದುಕೊಳ್ಳುತ್ತಿರುವುದು ತಿಳಿದು ಬಂದಿದೆ. ಅಲ್ಲದೆ ಇಲ್ಲಿನ ಪ್ರದೇಶಗಳಲ್ಲಿ ಯಾವುದೇ ವಿಚಾರಣೆ ಇಲ್ಲದಯೇ ಈ ರೀತಿಯ ದುಷ್ಕೃತ್ಯ ಎಸಗುತ್ತಿದೆ ಎಂದು ಆರೋಪಿಸಿದ್ದಾರೆ. ಸಾವಿರಾರು ಜನರ ಭೂಮಿಯನ್ನು ಚೀನಾದ ಮಿಲಿಟರಿ ಮತ್ತು ಕಂಪನಿಗಳು ವಶಪಡಿಸಿಕೊಳ್ಳುತ್ತಿದ್ದು ಇದರ ವಿರುದ್ಧ ಧ್ವನಿ ಎತ್ತಲು ಯಾರಿಗೂ ಧೈರ್ಯ ಇಲ್ಲದಂತಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಥಿಂಕರ್ಸ್ ಫೋರಮ್ ನ ಮುಖಂಡ ಹೇಳುವಂತೆ ನಮ್ಮ ಪ್ರದೇಶಗಳಲ್ಲಿ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಹೆದರಿಕೆಯಾಗುತ್ತಿದೆ, ಪಾಕಿಸ್ತಾನಿ ಪಡೆಗಳು ಮತ್ತು ಚೀನಾ ಪಡೆಗಳು ಇಲ್ಲಿ ಬೀಡುಬಿಟ್ಟಿವೆ. ಭಾರತದ ಪ್ರಧಾನಿ ನರೇಂದ್ರ  ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶಗಳಲ್ಲಿ ಪಾಕಿಸ್ತಾನ ನಡೆಸುತ್ತಿರುವ ಅಕ್ರಮಗಳ ಮತ್ತು ಅಲ್ಲಿನ ಜನವಿರೋಧಿ ಕಾರ್ಯಗಳ ಬಗ್ಗೆ ವಿಚಾರವನ್ನು ಪ್ರಸ್ತಾಪಿಸಿದ್ದರು, ಆಗ ಈ ಪ್ರದೇಶಗಳಲ್ಲಿ ಹೊಸಸೊಂದು ಭರವಸೆ ಮೂಡಿತ್ತು ಆದರೆ ಇದೀಗ ಎಲ್ಲವೂ ಇಲ್ಲವಾಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ