ಸಂಕಷ್ಟಕ್ಕೆ ಸಿಲುಕಿದ ಭಾರತ

 India is in trouble

22-02-2019

ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ್‍ದ ಜೊತೆ ಎಲ್ಲ ರೀತಿಯ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿರುವ ಭಾರತಕ್ಕೆ ಕ್ರೀಡೆಯ ದೃಷ್ಟಿಯಿಂದ ಈ ನಿರ್ಧಾರ ಮುಂದಿನ ದಿನಗಳಲ್ಲಿ ದುಷ್ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗ ತೊಡಗಿದೆ. ನವದೆಹಲಿಯಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಿ ಶೂಟರ್‍ಗಳಿಗೆ ಭಾರತ ವೀಸಾ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ ತೀವ್ರ ಮುಜುಗರಕ್ಕೆ ಒಳಗಾಗಿದೆ. 

ಪಾಕಿಸ್ತಾನಿ ಶೂಟರ್‍ಗಳಿಗೆ ವೀಸಾ ನಿರಾಕರಿಸಿರೋದರಿಂದ ಒಲಂಪಿಕ್‍ಗೆ ಸಂಬಂಧಿಸಿದಂತೆ ಯಾವುದೇ ಜಾಗತಿಕ ಕ್ರೀಡಾಕೂಟಗಳನ್ನು ಭಾರತದಲ್ಲಿ ನಡೆಸದಿರಲು ನಿರ್ಧರಿಸಿದೆ. ಅಲ್ಲದೆ ಭಾರತದೊಂದಿಗೆ ಎಲ್ಲ ಮಾತುಕತೆಗಳನ್ನು ಸ್ಥಗಿತಗೊಳಿಸಲು ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ ನಿರ್ಧರಿಸಿದೆ. 
ಪುಲ್ವಾಮಾ ದಾಳಿಯಿಂದ ಮಾನಸಿಕವಾಗಿಯೂ ನೊಂದಿರುವ ಭಾರತ ಪಾಕಿಸ್ತಾನಕ್ಕೆ ಪಾಠ ಕಲಿಸುವ  ಉದ್ದೇಶದಿಂದ ಪಾಕ್ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಿತ್ತು.  ಆದರೆ ಇದನ್ನು ಒಲಂಪಿಕ್ ಸಮಿತಿ ಗಂಭೀರವಾಗಿ ಪರಿಗಣಿಸಿದ್ದು, ಭಾರತದ ಕ್ರೀಡಾ ವಲಯಕ್ಕೆ ಸಂಕಷ್ಟ ತಂದೊಡ್ಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. 

ಈಗಾಗಲೇ ಭಾರತದಲ್ಲಿ ನಡೆಯಬೇಕಿದ್ದ ಎಲ್ಲ ಪಂದ್ಯಾವಳಿಗಳನ್ನು ಸಮಿತಿ  ರದ್ದುಪಡಿಸಿದ್ದು,  ಭಾರತ ಸರ್ಕಾರ ಇದಕ್ಕೆ ಲಿಖಿತ ಸ್ಪಷ್ಟನೆ ನೀಡುವ ತನಕ ಮುಂದಿನ ಯಾವುದೇ ಪಂದ್ಯಾವಳಿಗಳನ್ನು ಆಯೋಜಿಸದಿರಲು ಕೂಡ  ಸಮಿತಿ ತೀರ್ಮಾನಿಸಿದೆ. 
ಅಲ್ಲದೆ ಒಲಂಪಿಕ್‍ನ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಭಾರತದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ಪುಲ್ವಾಮಾ ದಾಳಿ ದೇಶದ ಎಲ್ಲ ರಂಗಗಳ ಮೇಲೂ ತನ್ನ ಪ್ರಭಾವ ಬೀರಿದ್ದು, ಅದಕ್ಕೆ ಕ್ರೀಡಾರಂಗವೂ ಹೊರತಲ್ಲ. 


ಸಂಬಂಧಿತ ಟ್ಯಾಗ್ಗಳು

#India #Olympics #Pakistan #Shooting


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ