ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

 Major Surgery for Police Department

21-02-2019

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪೊಲೀಸ್  ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿ 35 ಮಂದಿ ಐಪಿಎಸ್ ಅಧಿಕಾರಿಗಳನ್ನು ಬುಧವಾರ ಮಧ್ಯರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಆಯೋಗದ ಮಾರ್ಗ ಸೂಚಿಗಳನ್ನು ಆಧರಿಸಿ ರಾಜ್ಯದ ಹೆಚ್ಚುವರಿ ಮಹಾ ನಿರ್ದೇಶಕರುಗಳು (ಎಡಿಜಿಪಿ) ಪೊಲೀಸ್ ಮಹಾ ನಿರೀಕ್ಷಕರು (ಐಜಿ)ಗಳು, ಜಿಲ್ಲಾ ವರಿಷ್ಠಾಧಿಕಾರಿಗಳು ಸೇರಿ 35 ಮಂದಿ ಐಪಿಎಸ್ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಧ್ಯರಾತ್ರಿ 11.30ರ ವೇಳೆ ಆದೇಶ ಹೊರಡಿಸಿದೆ.
ಗುಪ್ತದಳ ಎಡಿಜಿಪಿ ಮಂಗಳೂರು ಬೆಳಗಾವಿ ಪೊಲೀಸ್ ಆಯುಕ್ತರುಗಳು ಹಲವು ಜಿಲ್ಲೆಗಳ ಎಸ್‍ಪಿಗಳು ವರ್ಗಾವಣೆ ಮಾಡಲಾಗಿದ್ದು ನಗರದಲ್ಲಿ ಇಬ್ಬರು ಡಿಸಿಪಿಗಳನ್ನು ವರ್ಗಾವಣೆ ಗೊಳಿಸಲಾಗಿದೆ ವರ್ಗಾವಣೆಯಲ್ಲಿ ನಗರದ ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಅಣ್ಣಾಮಲೈ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದೆ.ರಾಜ್ಯದ ಗುಪ್ತದಳದ ಎಡಿಜಿಪಿಯಾಗಿದ್ದ ಅಮರ್ ಕುಮಾರ್ ಪಾಂಡೆ ಅವರನ್ನು ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾವಣೆ ಮಾಡಿ ಕೇಂದ್ರ ವಲಯ ಐಜಿಪಿಯಾಗಿದ್ದ ದಯಾನಂದ ಅವರನ್ನು ಗುಪ್ತದಳಕ್ಕೆ ವರ್ಗಾವಣೆ ಮಾಡಿದೆ.


ಕೇಂದ್ರ ವಲಯ ಐಜಿಪಿ ಸ್ಥಾನಕ್ಕೆ ದಕ್ಷಿಣ ವಲಯ ಐಜಿಪಿ, ಕೆ.ವಿ ಶರತ್ಚಂದ್ರ ಅವರನ್ನು, ದಕ್ಷಿಣ ಐಜಿಪಿ ಸ್ಥಾನಕ್ಕೆ ಮೈಸೂರಿನ ಪೊಲೀಸ್  ಅಕಾಡೆಮಿಯಲ್ಲಿದ್ದ ವಿಪುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಡಿಜಿ ಕಚೇರಿಯ ಆಡಳಿತ ವಿಭಾಗದಲ್ಲಿದ್ದ ಅಮೃತ್‍ಪಾಲ್ ಅವರನ್ನು ಪೂರ್ವ ವಲಯ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. .
ನಗರ ಪೊಲೀಸ್ ಕಚೇರಿಯ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ನಂಜುಂಡಸ್ವಾಮಿ ಅವರನ್ನು ಬಳ್ಳಾರಿ ವಿಭಾಗದ ಐಜಿಪಿಯಾಗಿ,ಬೆಳಗಾವಿ ಐಜಿಪಿಯಾಗಿದ್ದ ರೇವಣ್ಣ ಅವರನ್ನು ಕಾರಾಗೃಹಗಳಿಗೆ ವರ್ಗಾವಣೆ ಮಾಡಲಾಗಿದೆ. ಕಾರಾಗೃಹಗಳ ಡಿಐಜಿಪಿಯಾಗಿದ್ದ ಹರ್ಷ ಅವರನ್ನು ಕೆಎಸ್‍ಆರ್‍ಟಿಸಿಯ ಜಾಗೃತ ದಳಕ್ಕೆ ವರ್ಗಾಯಿಸಲಾಗಿದೆ.


ರೈಲ್ವೆ ವಿಭಾಗದ ಐಜಿಯಾಗಿದ್ದ ರಾಘವೇಂದ್ರ ಸುಹಾಸ್ ಅವರನ್ನು ಬೆಳಗಾವಿಯ ಐಜಿಪಿಯಾಗಿ, ಹುದ್ದೆಯ ನಿರೀಕ್ಷೆಯಲ್ಲಿದ್ದ ಡಾ.ಸುಬ್ರಮಣ್ಯೇಶ್ವರ ರಾವ್ ಅವರನ್ನು ಗುಪ್ತದಳದ ಡಿಐಜಿಪಿಯಾಗಿ, ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಟಿ.ಆರ್ ಸುರೇಶ್ ಅವರನ್ನು ನಗರದ ಸಿಆರ್ ಜಂಟಿ ಪೊಲೀಸ್ ಆಯುಕ್ತರಾಗಿ, ಜಂಟಿ ಪೊಲೀಸ್ ಆಯುಕ್ತರಾಗಿದ್ದ ಸಂದೀಪ್ ಪಾಟೀಲ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರಾಗಿ ನಿಯೋಜಿಸಲಾಗಿದೆ.
ಕೆಜಿಎಫ್ ಎಸ್‍ಪಿಯಾಗಿದ್ದ ಲೋಕೇಶ್ ಕುಮಾರ್ ಅವರನ್ನು ಬೆಳಗಾವಿಯ ಪೆÇಲೀಸ್ ಆಯುಕ್ತರಾಗಿ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ವಿಕಾಸ್ ಅವರನ್ನು ನಕ್ಸಲ್ ನಿಗ್ರಹಪಡೆಯ ಡಿಐಜಿಪಿಯಾಗಿ, ಬೆಳಗಾವಿ ಪೊಲೀಸ್ ಆಯುಕ್ತರಾಗಿ ನಿಯೋಜನೆಗೊಂಡಿದ್ದ ರಾಜೇಂದ್ರ ಪ್ರಸಾದ್ ಅವರ ವರ್ಗಾವಣೆಯನ್ನು ರದ್ದುಗೊಳಿಸಿ ತರಬೇತಿ ವಿಭಾಗದ ಡಿಐಜಿಪಿ ಹುದ್ದೆಗೆ ನಿಯೋಜಿಸಲಾಗಿದೆ.
ನಗರದ ಉತ್ತರ ವಿಭಾಗದ ಡಿಸಿಪಿಯಾಗಿದ್ದ ಚೇತನ್ ಸಿಂಗ್ ರಾಥೋರ್ ಅವರನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಹಾಗೂ ಅಲ್ಲಿದ್ದ ಪ್ರಯೋಗಾಲಯದ ಎಸ್‍ಪಿಯಾಗಿದ್ದ ಈಶಪಂಥ್ ಅವರನ್ನು, ಆಗ್ನೇಯ ವಿಭಾಗದ ಡಿಸಿಪಿಯಾಗಿ, ಕಲಬುರ್ಗಿ ಎಸ್‍ಪಿಯಾಗಿದ್ದ ಶಶಿಕುಮಾರ್ ಅವರನ್ನು ಉತ್ತರ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಆಗ್ನೇಯ ವಿಭಾಗದ ಡಿಸಿಪಿಯಾಗಿದ್ದ ಡಾ. ಬೋರಲಿಂಗಯ್ಯ ಅವರನ್ನು ಗುಪ್ತದಳದ ಆಡಳಿತ ವಿಭಾಗದ ಎಸ್‍ಪಿಯಾಗಿ ಶಿವಮೊಗ್ಗ ಎಸ್‍ಪಿಯಾಗಿದ್ದ ಅಭಿನವ್ ಖರೆ ಅವರನ್ನು ಗೃಹರಕ್ಷಕ ದಳದ ಕಮಾಂಡೆಂಟ್ ಆಗಿ, ಯಾದಗಿರಿ ಎಸ್‍ಪಿಯಾಗಿ ಈಡಾ ಮಾರ್ಟಿನ್ ಅವರನ್ನು ಕಲ್ಬುರ್ಗಿ ಎಸ್‍ಪಿಯಾಗಿ, ಚಿಕ್ಕಬಳ್ಳಾಪುರ ಎಸ್‍ಪಿಯಾಗಿದ್ದ ಕಾರ್ತಿಕ್ ರೆಡ್ಡಿ ಅವರನ್ನು ಡಿಜಿ ಕಚೇರಿಯ ಎಐಜಿಪಿ ಹುದ್ದೆಗೆ, ಗದಗ್ ಎಸ್‍ಪಿಯಾಗಿದ್ದ ಸಂತೋಷ್ ಬಾಬು ಅವರನ್ನು ಚಿಕ್ಕಬಳ್ಳಾಪುರ ಎಸ್‍ಪಿಯಾಗಿ ವರ್ಗಾಯಿಸಲಾಗಿದೆ.
ಚಾಮರಾಜನಗರ ಎಸ್‍ಪಿಯಾಗಿದ್ದ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ಸಿಐಡಿಗೆ, ಸಿಐಡಿಯಲ್ಲಿದ್ದ ಆನಂದ್ ಕುಮಾರ್ ಅವರನ್ನು ಚಾಮರಾಜನಗರ ಎಸ್‍ಪಿಯಾಗಿ, ಕೆಎಸ್‍ಆರ್‍ಪಿ ಕಮಾಂಡೆಂಟ್ ಆಗಿದ್ದ ನಿಶಾ ಜೇಮ್ಸ್ ಅವರನ್ನು ಉಡುಪಿ ಎಸ್‍ಪಿಯಾಗಿ ಉಡುಪಿ ಎಸ್‍ಪಿಯಾಗಿದ್ದ ಲಕ್ಷ್ಮಣ್ ನಿಂಬರ್ಗಿ ಅವರನ್ನು ವೈರ್‍ಲೆಸ್ ಎಸ್‍ಪಿಯಾಗಿ, ಯಾದಗಿರಿ ಎಸ್‍ಪಿಯಾಗಿ ಸೋನಾವಾನೆ ರಿಷಿಕೇಶ್ ಭಗವಾನ್ ಅವರನ್ನು ನಿಯೋಜಿಸಲಾಗಿದೆ.
ಸಿಐಡಿ ಎಸ್‍ಪಿಯಾಗಿದ್ದ ನಾಗೇಶ್ ಅವರನ್ನು ಹುಬ್ಬಳ್ಳಿ ಡಿಸಿಪಿಯಾಗಿ, ಅಶ್ವಿನಿ ಅವರನ್ನು ಶಿವಮೊಗ್ಗ ಎಸ್‍ಪಿಯಾಗಿ, ಮೈಸೂರು ಡಿಸಿಪಿಯಾಗಿದ್ದ ವಿಷ್ಣುವರ್ಧನ ಅವರನ್ನು ಗುಪ್ತದಳದ ಎಸ್‍ಪಿಯಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.ವರ್ಗಾವಣೆಯಾದ ಸ್ಥಳಕ್ಕೆ ಕೂಡಲೇ ನಿಯೋಜನೆಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

#Karnataka #Major Surgery #Police #Transfer


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ