ಬೆಳಂದೂರು ಮೂಲಸೌಕರ್ಯಗಳ ಸಮಸ್ಯೆ ಖುದ್ದು ಪರಿಶೀಲಿಸಲು ಡಾ.ಜಿ. ಪರಮೇಶ್ವರ

 Dr. G.Parameshwar  to review the problem of Belundur infrastructure

21-02-2019

ಬೆಳಂದೂರು ವ್ಯಾಪ್ತಿಯಲ್ಲಿನ ಮೂಲಸೌಕರ್ಯಗಳ ಸಮಸ್ಯೆ ಖುದ್ದು ಪರಿಶೀಲಿಸಲು ಮುಂದಿನ ವಾರ ತೆರಳುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಬೆಳ್ಳಂದೂರು ಕ್ಷೇಮಾಭಿವೃದ್ಧಿ ಅಸೋಸಿಯೇಷನ್‌‌ನ ಸದಸ್ಯರು ಇಂದು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ ಅವರು, ಬೆಳ್ಳಂದೂರು ವ್ಯಾಪ್ತಿಯಲ್ಲಿ ರಸ್ತೆ ಹಾಳಾಗಿದ್ದು,ವಾಹನ ಸವಾರರು ನಿತ್ಯ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಸಾಕಷ್ಟು ಐಟಿ ಕಂಪನಿಗಳಿದ್ದು ಸುಮಾರು 70 ಸಾವಿರ ಐಟಿ ಉದ್ಯೋಗಿಗಳು ಕೆಲಸ‌ ಮಾಡುತ್ತಿದ್ದಾರೆ. ಇವರೆಲ್ಲಾ ವೈಟ್‌ಫೀಲ್ಡ್‌, ಐಟಿಪಿಎಲ್‌ಗೆ ದೊಡ್ಡಕನ್ನಳ್ಳಿ, ಕಸವನಹಳ್ಳಿ ರಸ್ತೆ, ಹರಳೂರು ಮೂಲಕವೇ ತೆರಳುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಜೊತೆಗೆ ರಸ್ತೆ ಕೂಡ ಹಾಳಾಗಿರುವುದಾಗಿ ಸಮಸ್ಯೆ ಮತ್ತಷ್ಟು ಉಲ್ಬಣಿಸಿರುವುದಾಗಿ ತಿಳಿಸಿದ್ದಾರೆ. 


ಅಲ್ಲದೆ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್.ಪುರಂ ವರೆಗಿನ‌ ಮೆಟ್ರೋ ಲೈನ್‌ ನನ್ನು ಇಬ್ಬಲೂರು, ಕಾರ್ಮೆಲಾರಂ ಮಾರ್ಗವಾಗಿ ತೆಗೆದುಕೊಂಡು ಹೋಗಲು ಸಹ ಮನವಿ ಮಾಡಿದ್ದಾರೆ. ಪಾದಾಚಾರಿ ಮಾರ್ಗ, ಒಳಚರಂಡಿ, ರಸ್ತೆ ಅಗಲೀಕರಣ, ಎಲಿವೇಟೆಡ್ ಕಾರಿಡಾರ್ ವಿಸ್ತರಣೆ ಮಾಡುವುದು ಸೇರಿದಂತೆ ಇತರೆ ಮನವಿ‌ ಮಾಡಿದ್ದಾರೆ. ಹೀಗಾಗಿ ಈ ಸಮಸ್ಯೆಗಳನ್ನು ಖುದ್ದು ವೀಕ್ಷಿಸಲು ಬೆಳ್ಳಂದೂರಿಗೆ ತೆರಳಲಿದ್ದೇನೆ ಎಂದು ಹೇಳಿದರು.


ಬೆಳಂದೂರು ಕೆರೆ ಅಭಿವೃದ್ಧಿಗಾಗಿ 50 ಕೋಟಿ ರು. ನೀಡಲಾಗಿದ್ದು, ಬಹುತೇಕ‌ ಕೆಲಸ ಪೂರ್ಣಗೊಂಡಿದೆ. ಕೆರೆಗೆ ಕೈಗಾರಿಕೆಗಳಿಂದ ಬರುವ ಕೊಳಚೆ ನೀರನ್ನು ನಿಲ್ಲಿಸಿ, ಒಳಚರಂಡಿ‌ ಮಾರ್ಗಕ್ಕೆ ತಿರುಗಿಸಲು ಸೂಚನೆ ನೀಡಲಾಗಿದೆ.ಅಪಾರ್ಟ್‌ಮೆಂಟ್‌ಗಳು ಕಡ್ಡಾಯವಾಗಿ ಎಸ್‌ಟಿಪಿಯನ್ನು ಅಳವಡಿಸಿಕೊಳ್ಳಬೇಕು‌ ಎಂದು ಸೂಚಿಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ತಿಳಿಸಿದರು. 


ಬಿಡಿಎದಿಂದ ಮೇಕ್ರಿ ವೃತ್ತದವರೆಗೆ ಎಲಿವೇಟೆಡ್ ಕಾರಿಡಾರ್ ರಸ್ತೆ ಸಾಕು ಎಂದು ಸೂಚಿಸಿದ್ದೇವೆ.
ಎಸ್ಟೀಮ್ ಮಾಲ್ ನಿಂದ ಚಾಲುಕ್ಯ ವೃತ್ತದ ತನಕ ಮತ್ತೊಂದು ‌ಫೆರಿಪರಲ್ ಕಾರಿಡರ್ ಯೋಜನೆ ಮಾಡಲಾಗುವುದು.ಯೋಜನೆ ಜಾರಿ ವಿಚಾರದಲ್ಲಿ ಯಾರಿಗೂ ಮಣಿಯುವ ಪ್ರಶ್ನೆ ಎಂದು ಡಿಸಿಎಂ ತಿಳಿಸಿದರು.


ಉಪ ಮುಖ್ಯಮಂತ್ರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ಸಂಘಟನೆಯ ಪೋರಂ ಸದಸ್ಯ ವಿಷ್ಣು ಪ್ರಸಾದ್, ಮೂಲಭೂತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಒತ್ತಾಯಿಸಿದ್ದು,ಮೆಟ್ರೋ ಕಾಮಗಾರಿ ವಿಸ್ತರಣೆ.ಐಟಿ ಕಾರಿಡರ್,ಟ್ರಾಫಿಕ್ ಸಮಸ್ಯೆ,110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದ್ದೇವೆ.ಸಕಾರಾತ್ಮಕ ವಾಗಿ ಸ್ಪಂದಿಸುವ ಭರವಸೆಯನ್ನು ಉಪ ಮುಖ್ಯಮಂತ್ರಿ ನೀಡಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

#Bangalore # Infrastructure #Bellanduru #Problem


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ