ಶಾಸಕ ಜೆ.ಎನ್. ಗಣೇಶ್ ಬಂಧನ

 MLA J.N. Ganesh Arrest

20-02-2019

ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಒಂದು ತಿಂಗಳ ನಂತರ ಕಡೆಗೂ ಪೋಲೀಸರು ಬಂಧಿಸಿದ್ದಾರೆ.

 ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಶಾಸಕ ಗಣೇಶ್ ಅವರನ್ನು ಬಿಡದಿ ಪೋಲೀಸರು ತೀವ್ರ ಕಾರ್ಯಾಚರಣೆ ನಂತರ ಬಂಧಿಸಿದ್ದಾರೆ.

ಜನವರಿ 20ರಂದು ನಡೆದ ಘಟನೆಯಲ್ಲಿ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಅವರ ಮೇಲೆ ಅದೇ ಪಕ್ಷದ ಶಾಸಕ ಗಣೇಶ್ ಹಲ್ಲೆ ನಡೆಸಿದ್ದರು. ಈ ಹಲ್ಲೆಯಿಂದ ಆನಂದ್ ಸಿಂಗ್ ಅವರ ಕಣ್ಣು ಮುಖ, ತಲೆ ಭಾಗ ಸೇರಿ ಹಲವು ಕಡೆ ಗಂಭೀರ ಗಾಯವಾಗಿದ್ದವು.

ಹಲ್ಲೆ ನಡೆಸಿದ್ದ ಗಣೇಶ್ ವಿರುದ್ಧ ಬಿಡದಿ ಭಾಷೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಆದರೆ ತನ್ನ ಬಂಧನ ವಿರುದ್ಧ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದ ಗಣೇಶ್ ನಿನ್ನೆ (ಮಂಗಳವಾರ) ಅರ್ಜಿಯನ್ನು ಹಿಂಪಡೆದಿದ್ದರು.

ಬಂಧಿತ ಶಾಸಕರನ್ನು ಇಂದು ಮಧ್ಯರಾತ್ರಿ ವೇಳೆ ಬೆಂಗಳೂರಿಗೆ ಕರೆತರಲಾಗುತ್ತದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Karnataka #Ganesh Arrest #Mla Fighting #Bidadi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ