ಚಂಬಲ್‍ಗೆ ತಡೆಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಿ.ಕೆ.ರವಿ ಪೋಷಕರು 

 DK Ravi

20-02-2019

ನೀನಾಸಂ ಸತೀಶ್ ಅಭಿನಯದ ಬಹು ನೀರಿಕ್ಷೆಯ ಚಿತ್ರ  ಚಂಬಲ್ ಬಿಡುಗಡೆಗೂ ಮುನ್ನವೇ ವಿಘ್ನ ಎದುರಾಗಿದೆ. ಕರ್ನಾಟಕದಲ್ಲಿ ಮನೆಮಾತಾಗಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ಕತೆಯನ್ನು ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಡಿ.ಕೆ.ರವಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. 

ಚಂಬಲ್ ಅಧಿಕಾರಿಯೊಬ್ಬರ ಕತೆ ಎಂದಿದ್ದ ಚಿತ್ರತಂಡ ಡಿ.ಕೆ.ರವಿ ಜೀವನ ಆಧಾರಿತ ಕತೆ ಎಂಬುದನ್ನು ಒಪ್ಪಿಕೊಂಡಿಲ್ಲ. ಆದರೆ ಈ ಚಿತ್ರದ ದೃಶ್ಯಗಳು ಡಿ.ಕೆ.ರವಿಯವರ ಬದುಕಿನ ಅಂಶಗಳಿಗೆ ಹೋಲಿಕೆಯಾಗಿದೆ. ಅಲ್ಲದೆ ಈ ಚಿತ್ರದಲ್ಲಿ ಡಿ.ಕೆ.ರವಿಯವರ ಚಾರಿತ್ರ್ಯ ಹರಣ ಮಾಡುವ ಅಂಶಗಳನ್ನು ಸೇರಿಸಲಾಗಿದೆ ಎಂದು ಡಿ.ಕೆ.ರವಿ ಪೋಷಕರಾದ ಗೌರಮ್ಮ ಹಾಗೂ ಅವರ ತಂದೆ ಕರಿಯಪ್ಪ ಹೈಕೋರ್ಟ್ ಗೆ  ರಿಟ್ ಅರ್ಜಿ ಸಲ್ಲಿಸಿದ್ದಾರೆ. 

ಅರ್ಜಿಯಲ್ಲಿ  ಚಿತ್ರದ ಟ್ರೈಲರ್ ಮತ್ತು ಶೀರ್ಷಿಕೆ ಅವಹೇಳನಕಾರಿಯಾಗಿದ್ದು, ಸೆನ್ಸಾರ ಪ್ರಮಾಣ ಪತ್ರ ಹಿಂಪಡೆಯಲು ನಿರ್ದೇಶನ ನೀಡಬೇಕು. ಡಿ.ಕೆ.ರವಿಯವರನ್ನು  ಅವಹೇಳನಕಾರಿಯಾಗಿ ಚಿತ್ರೀಸಿರುವ ಈ ಸಿನಿಮಾ ತೆರೆಗೆ ಬರಲು ಬಿಡಬಾರದು ಎಂದು ಗೌರಮ್ಮ ಮನವಿ ಮಾಡಿದ್ದಾರೆ. 

ಗೌರಮ್ಮನವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರ ಪೀಠ ಕೇಂದ್ರ ಸಾರ್ವಜನಿಕ ಮತ್ತು ಮಾಹಿತಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಸೆನ್ಸಾರ್ ಮಂಡಳಿ, ಚಲನಚಿತ್ರ  ವಾಣಿಜ್ಯ ಮಂಡಳಿ ಹಾಗೂ ಚಿತ್ರತಂಡದವರಿಗೆ ನೊಟೀಸ್ ಜಾರಿ ಮಾಡಿರುವ  ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಫೆ 21 ಕ್ಕೆ ಮುಂದೂಡಿದೆ. 

ರಾಷ್ಟ್ರಪ್ರಶಸ್ತಿ ವಿಜೇತ ಜಾಕಬ್ ವರ್ಗಿಸ್ ಚಂಬಲ್ ಹೆಸರಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸಿದ್ದು, ಅದರಲ್ಲಿ  ಡಿ.ಕೆ.ರವಿ ಜೀವನ ಹೋಲುವ ಪಾತ್ರಗಳಿವೆ. ನೀನಾಸಂ ಸತೀಶ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಇದೀಗ ಈ ಚಿತ್ರ ಬಿಡುಗಡೆ ವಿವಾದಕ್ಕೆ ಸಿಲುಕಿದೆ. ಡಿ.ಕೆ.ರವಿ ಪೋಷಕರು ಈ ಬಗ್ಗೆ ಚಲನಚಿತ್ರ ವಾಣಿಜ್ಯಮಂಡಳಿಗೂ ಪತ್ರ ಬರೆದಿದ್ದಾರೆ. 
 


ಸಂಬಂಧಿತ ಟ್ಯಾಗ್ಗಳು

#Chambal #Highcourt #D.K.Ravi #Cinema


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ