ದೀಪಿಕಾ ಪಡುಕೋಣೆ ಈಗ ನಿರ್ಮಾಪಕಿ

 Deepika Padukone is Now Producer

20-02-2019

ಇತ್ತೀಚಿಗಷ್ಟೇ ತಾವು ಪ್ರೀತಿಸಿ ಆರಾಧಿಸಿದ ರಣವೀರ್ ಸಿಂಗ್ ಜೊತೆ ಹೊಸ ಬದುಕಿಗೆ ಕಾಲಿಟ್ಟ ನಟಿ ದೀಪಿಕಾ ಪಡುಕೋಣೆ ಮದುವೆ ಬಳಿಕ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ ಕೊಡ್ತಿದ್ದಾರೆ. ಹೌದು ಬಾಲಿವುಡ್‍ನ ಬಹುಬೇಡಿಕೆಯ ನಟಿಯಾಗಿ ನಟರಷ್ಟೇ ಸಂಭಾವನೆ ಪಡೆಯುತ್ತಿದ್ದ ನಟಿ ದೀಪಿಕಾ ಈಗ ಚಿತ್ರ ನಿರ್ಮಾಣಕ್ಕೆ ಅಡಿ ಇಟ್ಟಿದ್ದಾರೆ. 

ಛಪಕ್ ಸಿನಿಮಾ ಮೂಲಕ ದೀಪಿಕಾ ಪಡುಕೋಣೆ ನಿರ್ಮಾಪಕಿಯಾಗುತ್ತಿದ್ದಾರೆ. ಛಪಕ್ ಆಸ್ಯಿಡ್ ಸಂತ್ರಸ್ಥೆ ಲಕ್ಷ್ಮೀ ಅರ್ಗವಾಲ್ ಬದುಕಿನ ಕತೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ದೀಪಿಕಾಗೆ ತುಂಬ ಇಷ್ಟ ಆಗಿದ್ದರಿಂದ ಅವರೇ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 

ಈ ಸಿನಿಮಾಗೆ ಮೇಘನಾ ಗುಲ್ಜಾರ್ ಸಹ ನಿರ್ಮಾಪಕಿಯಾಗಿದ್ದಾರೆ. ಚಿತ್ರದ ಫಸ್ಟ್ ಲುಕ್ ಈಗಾಗಲೆ ಬಿಡುಗಡೆಯಾಗಿದ್ದು, ಫಸ್ಟ್ ಲುಕ್ ಪೋಟೋವನ್ನು ಸಹನಿರ್ಮಾಪಕಿ ಮೇಘನಾ ತಮ್ಮ ಇನ್‍ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಲವಾರು ತೂತು ಮತ್ತು ಕಲೆಗಳಿರುವ ಹಳದಿ ದುಪ್ಪಟ್ಟಾದ ಪೋಟೋವನ್ನು ಫಸ್ಟ್ ಲುಕ್ ಆಗಿ ಬಿಡುಗಡೆ ಮಾಡಲಾಗಿದೆ. 


ಇಲ್ಲಿ ದೀಪಿಕಾ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಅವರ ಕೆರಿಯರ್‍ನ ಅತ್ಯಂತ ವಿಶೇಷ ಪಾತ್ರವಾಗಲಿದೆ ಎಂದು ಮೇಘನಾ ಹೇಳಿದ್ದಾರೆ. ದೀಪಿಕಾ ಜೊತೆ  ನಟ ವಿಕ್ರಾಂತ್ ಮೆಸ್ಸಿ ಕೂಡಾ ಈ ಸಿನಿಮಾದಲ್ಲಿ  ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಿವಿ ಶೋ ಹೋಸ್ಟ್ ಆಗಿದ್ದ ಲಕ್ಷ್ಮಿ ಕತೆ ದೀಪಿಕಾ ಪಡುಕೋಣೆಯ ಮೂಲಕ ತೆರೆಗೆ ಬರಲಿದೆ. 


ಸಂಬಂಧಿತ ಟ್ಯಾಗ್ಗಳು

#Bollywood #Producer #Deepika Padukone #Chapak


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ