ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಆಲಿಯಾ ಭಟ್

 Alia Bhatt in Rajamouli

19-02-2019

ವಿಶ್ವದ ಸಿನಿ ಪ್ರಿಯರನ್ನು ಸೆಳೆದಿದ್ದ ಬಾಹುಬಲಿ ಚಿತ್ರದ ನಿರ್ದೇಶಕರಾದ ಎಸ್.ಎಸ್.ರಾಜಮೌಳಿಯವರ ಹೊಸ ಚಿತ್ರ ಆರ್‍ಆರ್‍ಆರ್ ಚಿತ್ರಕ್ಕೆ ನಾಯಕಿ ಯಾರು ಎಂಬ ಚರ್ಚೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಚಿತ್ರದ ನಾಯಕಿಯಾಗಿ ಬಾಲಿವುಡ್‍ನ ಬಬ್ಲಿ ಬೆಡಗಿ ಹಾಗೂ ಬಹುಬೇಡಿಕೆಯ ನಟಿ ಆಲಿಯಾ ಭಟ್ ಆಯ್ಕೆಯಾಗಿದ್ದಾರೆ. 

ಈ ನಾಯಕಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪರಿಣಿತಿ ಚೋಪ್ರಾ, ಶೃದ್ಧಾ ಕಪೂರ್ ಹೆಸರು ಕೂಡ ಕೇಳಿಬಂದಿತ್ತಾದರೂ ಕೊನೆಗೆ ಆಲಿಯಾ ಭಟ್ ಆಯ್ಕೆಯಾಗಿದ್ದು, ಅವರು ಈ ಚಿತ್ರದಲ್ಲಿ ರಾಮ್‍ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ಜೊತೆ ರೋಮಾನ್ಸ್ ಮಾಡಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಆ ಸ್ಥಾನಕ್ಕೆ ಇನ್ನೂ ಯಾರು ಆಯ್ಕೆಯಾಗಿಲ್ಲ. 

ಇನ್ನು ಬಾಲಿವುಡ್‍ನಲ್ಲೇ ಸಾಕಷ್ಟು ಚಿತ್ರಗಳಿಗೆ ಸಹಿಮಾಡಿರುವ ಆಲಿಯಾ ಭಟ್, ಚಿತ್ರಗಳ ಆಯ್ಕೆಯಲ್ಲಿ ಸಾಕಷ್ಟು ಚ್ಯೂಸಿ. ಹೀಗಿರುವಾಗ ಅವರು ಸೌತ್ ಇಂಡಿಯಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರೋದರಿಂದ ಈ ಚಿತ್ರದ ನೀರಿಕ್ಷೆ ಮತ್ತಷ್ಟು ಹೆಚ್ಚಿದೆ. ಸೌತ ಇಂಡಿಯಾದಲ್ಲಿ ಇದು ಆಲಿಯಾ ಭಟ್ ಮೊದಲ ಚಿತ್ರವಾಗಿದೆ. 

ಮೊದಲ ಚಿತ್ರದಲ್ಲೇ ರಾಜಮೌಳಿಯವರ ನಿರ್ದೇಶನ ಲಭ್ಯವಾಗುತ್ತಿರೋದು ಆರ್.ಆರ್.ಆರ್ ಚಿತ್ರದಲ್ಲಿ ಆಲಿಯಾ ಭಟ್ ಮೆಚ್ಚುಗೆಯ ಅಭಿನಯ ನೀಡಲಿದ್ದಾರೆ ಎಂಬ ನೀರಿಕ್ಷೆ ಹುಟ್ಟಿಸಿದೆ ಅಂತಿದ್ದಾರೆ ಅವರ ಅಭಿಮಾನಿಗಳು. 
ರಾಜಮೌಳಿ ನಿರ್ದೇಶನ, ಜ್ಯೂನಿಯರ್ ಎನ್‍ಟಿಆರ್ ಹಾಗೂ ರಾಮಚರಣ ಅಭಿನಯಕ್ಕಾಗಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಇದೀಗ ಆಲಿಯಾ ಭಟ್ ಆಗಮನವಾಗಿದ್ದು, ಚಿತ್ರ ಹೇಗೆ ಮೋಡಿ ಮಾಡಲಿದೆ ಕಾದು ನೋಡಬೇಕಿದೆ. 
 


ಸಂಬಂಧಿತ ಟ್ಯಾಗ್ಗಳು

#Aliya Bhat #RRR #Raj mouli #South India Movie


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ