ಸಿ.ಟಿ.ರವಿ ಕಾರು ಡಿಕ್ಕಿ ಇಬ್ಬರು ಯುವಕರ ದುರ್ಮರಣ

Two men were killed when CT Ravi collided with a car

19-02-2019

ಅತಿ ವೇಗವಾಗಿ ಹೋಗುತ್ತಿದ್ದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಪ್ರಯಾಣಿಸುತ್ತಿದ್ದ ಫಾರ್ಚೂನರ್ ಕಾರು ರಸ್ತೆಬದಿ ನಿಂತಿದ್ದ 2 ಕಾರುಗಳಿಗೆ ಡಿಕ್ಕಿ ಹೊಡೆದು ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಹರಿದು ಇಬ್ಬರು ಯುವಕರು  ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡಿರುವ ದುರ್ಘಟನೆ ಕುಣಿಗಲ್ ಬಳಿ ಮಂಗಳವಾರ ಮುಂಜಾನೆ ನಡೆದಿದೆ..

ಮೃತರನ್ನು ಕನಕಪುರದ ಸೂರೇನಹಳ್ಳಿಯ ಶಶಿಕುಮಾರ್ (28) ಹಾಗೂ ಸುನೀಲ್‍ಗೌಡ (27) ಎಂದು ಗುರುತಿಸಲಾಗಿದೆ.ಅಪಘಾತ ನಡೆದ ರಭಸಕ್ಕೆ ಶಾಸಕ ಸಿ.ಟಿ. ರವಿ ಹಾಗೂ ಅವರ ಕಾರು ಚಾಲಕ ಆಕಾಶ್, ಗನ್‍ಮ್ಯಾನ್ ರಾಜು ನಾಯಕ್ ಕೂಡ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶಾಸಕ ರವಿ ಮನೆಗೆ ಮರಳಿದ್ದರೆ ಚಾಲಕ ಆಕಾಶ್ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆಮೂತ್ರ ವಿಸರ್ಜನೆ ವೇಳೆ ಕಾರು ಹರಿದಿದ್ದರಿಂದ  ಗಾಯಗೊಂಡಿರುವ ಮುನಿರಾಜು, ಜಯಚಂದ್ರ, ಪುನೀತ್, ಮಂಜುನಾಥ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಎರಡು ದಿನಗಳ ಹಿಂದೆ 12 ಮಂದಿ ಸ್ನೇಹಿತರೊಂದಿಗೆ 2 ಕಾರಿನಲ್ಲಿ ಕೊಲ್ಲೂರು, ಧರ್ಮಸ್ಥಳ ಮತ್ತು ಶೃಂಗೇರಿಗೆ ಪ್ರವಾಸ ತೆರಳಿ ರಾತ್ರಿ ಶೃಂಗೇರಿಯಲ್ಲಿ ದೇವರ ದರ್ಶನ ಪಡೆದು ಕಾರಿನಲ್ಲಿ ವಾಪಸಾಗುತ್ತಾ ಮರಳುತ್ತಿದ್ದಾಗ ಮಾರ್ಗಮಧ್ಯೆ ಕುಣಿಗಲ್ ಹೊರವಲಯದ ಊರ್ಕೇನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮೂತ್ರ ವಿಸರ್ಜನೆಗೆಂದು ಕಾರುಗಳನ್ನು ರಸ್ತೆಬದಿ ನಿಲ್ಲಿಸಿದ್ದರು.

ಅದೇ ವೇಳೆ. ರಾಮನಗರ ಮತ್ತು ಕನಕಪುರದ ಸ್ನೇಹಿತರ ತಂಡ ಪ್ರವಾಸವನ್ನು ಮುಗಿಸಿಕೊಂಡು 2 ಕಾರುಗಳಲ್ಲಿ ಊರುಗಳಿಗೆ ವಾಪಸ್ಸಾಗುವಾಗ ಕಾರುಗಳನ್ನು ನಿಲ್ಲಿಸಿ ಒಂದು ಕಾರಿನಲ್ಲಿದ್ದ ಲಗೇಜುಗಳನ್ನು ಮತ್ತೊಂದು ಕಾರಿಗೆ ಬದಲಾಯಿಸುತ್ತಿದ್ದಾಗ  ಜವರಾಯನ ರೀತಿ ಬಂದೆರಗಿದ ಶಾಸಕ ಸಿ.ಟಿ. ರವಿ ಅವರ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಕುಣಿಗಲ್ ಸಿಪಿಐ ಅಶೋಕ್‍ಕುಮಾರ್ ನೇತೃತ್ವದ ಪೆÇಲೀಸರ ತಂಡ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವಲ್ಲಿ ಶ್ರಮಿಸಿದ್ದಾರೆ.

ಈ ಅಪಘಾತದಲ್ಲಿ ಮೃತಪಟ್ಟಿರುವ ಶಶಿಕುಮಾರ್ ಮತ್ತು ಸುನಿಲ್‍ಗೌಡ ಅವರ ಶವಗಳನ್ನು ಕುಣಿಗಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.ಅಪಘಾತ ನಡೆದ ಬಳಿಕ ಶಾಸಕ ಸಿ.ಟಿ. ರವಿ ಅವರು ಸೌಜನ್ಯಕ್ಕಾದರೂ ಮೃತಪಟ್ಟಿರುವವರ ಬಗ್ಗೆ ವಿಚಾರಿಸುವುದಾಗಲೀ ಅಥವಾ ಗಾಯಗೊಂಡಿರುವ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗದೇ  ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದರು ಎಂದು ಮೃತರ ಸ್ನೇಹಿತರು ಆರೋಪಿಸಿದ್ದು ಇದನ್ನು ಶಾಸಕ ರವಿ ನಿರಾಕರಿಸಿದ್ದಾರೆ

ರಸ್ತೆಬದಿ ನಿಂತಿದ್ದ 2 ಕಾರುಗಳಿಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣರಾದ ಶಾಸಕ ಸಿ.ಟಿ. ರವಿ ಅವರ ವಿರುದ್ಧ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ಕುಣಿಗಲ್ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ಶಾಸಕ ಸಿ.ಟಿ. ರವಿ ಅವರನ್ನು ಸ್ಥಳಕ್ಕೆ ಕರೆಸಬೇಕು. ಅವರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದರು

ಶಾಸಕ ಸಿ.ಟಿ. ರವಿ ಅವರಿಗೆ ಅಮಾಯಕ ಜೀವಗಳ ಬೆಲೆ ಗೊತ್ತಿಲ್ಲ. ಜೀವಗಳ ಬೆಲೆ ಗೊತ್ತಿದ್ದರೆ ಈ ರೀತಿ ವರ್ತಿಸುತ್ತಿರಲಿಲ್ಲ. ಅಪಘಾತವಾದ ಬಳಿಕ ಗಾಯಾಗಳುಗಳನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ, ಸಾಂತ್ವನ ಹೇಳುತ್ತಿದ್ದರು. ಆದರೆ ಸಿ.ಟಿ. ರವಿ ಅವರು ಈ ಕೆಲಸ ಮಾಡದೆ ಗೂಂಡೂವರ್ತನೆ ತೋರಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. 

ಸಿ.ಟಿ. ರವಿ ಮತ್ತು ಅವರ ಚಾಲಕ ಮಬ್ಬರು ಮದ್ಯ ಸೇವಿಸಿದ್ದರು. ಕುಡಿದ ಮತ್ತಿನಲ್ಲಿ ಚಾಲಕ ಕಾರು ಓಡಿಸುತ್ತಿದ್ದನು ಎಂದು ಆರೋಪಿಸಿ ಕೂಡಲೇ ಇವರ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಪ್ರತಿಭಟನಾಕಾರರು ಪೆÇಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಿ ಶಾಸಕ ರವಿ ಅವರ ಕಾರು ಚಾಲಕನನ್ನು ಬಂಧಿಸಿದ್ದಾರೆ


ಈ ನಡುವೆ ಕುಣಿಗಲ್‍ನ ಉರ್ಕೇನಹಳ್ಳಿಗೇಟ್ ಬಳಿ ಸಂಭವಿಸಿದ ರಸ್ತೆ ಅಪಘಾತದ ವೇಳೆ ಮೃತರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿ ಪೊಲೀಸರು ಸ್ಥಳಕ್ಕೆ ಬಂದ ನಂತರ ನಗರಕ್ಕೆ ಮರಳಿದ್ದು ನಾನು ಅಲ್ಲಿಂದ ಪರಾರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರು ಸದ್ಯದಲ್ಲಿಯೇ ಮೃತಪಟ್ಟ ಯುವಕರನ್ನು ಕುಟುಂಬದವರನ್ನು ಭೇಟಿ ಮಾಡಲಿದ್ದಾನೆ ಎಂದು ತಿಳಿಸಿದ್ದಾರೆ.

ಅಪಘಾತವು ದುರದೃಷ್ಟಕರ. ಈ ಘಟನೆ ನಡೆಯಬಾರದಿತ್ತು  ಚೆನ್ನೈಗೆ ಹೋಗಬೇಕಿದ್ದ ನಾನು ಸೋಮವಾರ ರಾತ್ರಿ ಸುಮಾರು 11.30ಕ್ಕೆ ಚಿಕ್ಕಮಗಳೂರಿನಿಂದ ಹೊರಟಿದ್ದ ಮಾರ್ಗ ಮಧ್ಯದಲ್ಲಿ ನಾನು ನಿದ್ದೆ ಮಾಡುತ್ತಿದ್ದೆ ಚಾಲಕ ಆಕಾಶ್ ಕಾರು ಚಲಾಯಿಸುತ್ತಿದ್ದು ನಮ್ಮ ಜೊತೆ ಗನ್ ಮ್ಯಾನ್ ರಾಜನಾಯಕ್ ಇದ್ದರು.

ಏರ್ ಬ್ಯಾಗ್ ಓಪನ್ ಆಗಿ ಫಾರ್ಚುನರ್ ಕಾರು  ನಿಂತಾಗ ಏನೋ ಆಗಿದೆ ಅಂತಾ ಗೊತ್ತಾಗಿದ್ದು, ಅಲ್ಲಿ ತನಕ ನನಗೆ ಏನಾಗಿದೆ ಎಂದು ಗೊತ್ತಿರಲಿಲ್ಲ. ನನಗೆ ಎದೆ ನೋವಾಗಿದ್ದು, ಮೈ-ಕೈ ತರಚಿದ ಗಾಯಗಳಾಗಿತ್ತು. ತಕ್ಷಣ ನಾನು ಕೆಳಗೆ ಇಳಿದು ನೋಡಿದ ಮೇಲೆ ಇಬ್ಬರು ನಿಧನರಾಗಿದ್ದರು. ನಾನೇ ಪೆÇಲೀಸ್, ಅಂಬುಲೆನ್ಸ್ ಗೆ ಫೆÇೀನ್ ಮಾಡಿದೆ. ಸಬ್ ಇನ್ಸ್ ಪೆಕ್ಟರ್, ಅಂಬುಲೆನ್ಸ್ ಬಂದ ನಂತರ ಮೃತರನ್ನ ಹಾಗೂ ಗಾಯಾಳುಗಳನ್ನ ಸ್ಥಳಾಂತರ ಮಾಡಿದ ನಂತರ ನಾನು ಸಬ್ ಇನ್ಸ್ ಪೆಕ್ಟರ್ ಅನುಮತಿ ಪಡೆದು ಬಂದೆ ಎಂದು ನಡೆದ ಘಟನೆಯ ವಿವರ ನೀಡಿದರು.

ನನಗೂ ತರಚಿದ ಗಾಯ, ಎದೆನೋವಾಗಿತ್ತು. ಹೀಗಾಗಿ ನಾನು ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದೇನೆ ಚೆನ್ನೈಗೆ ಹೋಗಬೇಕಿದ್ದ ಕಾರ್ಯಕ್ರಮವನ್ನು ರದ್ದುಪಡಿಸಿ ಇಲ್ಲೆ ಉಳಿದುಕೊಂಡಿದ್ದೇನೆ.ಒಂದೆರಡು ದಿನಗಳಲ್ಲಿ ಮೃತರ ಕುಟುಂಬದವರನ್ನು ಭೇಟಿ ಮಾಡುತ್ತೇನೆ. ಈ ಅಪಘಾತ ದುರದೃಷ್ಟಕರ, ಇದರ ಬಗ್ಗೆ ಬೇರೆ ಏನೂ ಹೇಳಲು ಇಷ್ಟಪಡುವುದಿಲ್ಲ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರ ನೋವು ಅರ್ಥವಾಗುತ್ತದೆ. ಆದರೆ ಯಾರು ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Karnataka #Car Accident #C.T.Ravi #Two Died


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ